HOME » NEWS » Sports » CRICKET BCCI HAVE ANNOUNCED THE SQUAD FOR THE UPCOMING TOUR OF SRI LANKA SHIKHAR DHAWAN TO LEAD INDIA HG

ಶೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ; ಶಿಖರ್​ ಧವನ್​ ನಾಯಕ, ಭುವನೇಶ್ವರ್​ ಉಪನಾಯಕ

Team India: ಟೀಂ ಇಂಡಿಯಾ ಮತ್ತು ಶ್ರೀಲಂಕಾ ವಿರುದ್ಧ ಮೂರು ಏಕದಿನ ಪಂದ್ಯ ಮತ್ತು ಮೂರು ಟಿ20 ಪಂದ್ಯ ನಡೆಯಲಿದೆ. ಜುಲೈ 13ಕ್ಕೆ ಪಂದ್ಯ ಪ್ರಾರಂಭವಾಗಲಿದ್ದು, ಜುಲೈ 25ಕ್ಕೆ ಕೊನೆಗೊಳ್ಳಲಿದೆ. ಕೊಲಂಬೋದಲ್ಲಿರುವ ಆರ್​ ಪ್ರೇಮದಾಸ ಇಂಟರ್​ ನ್ಯಾಷನಲ್​ ಸ್ಟೇಡಿಯಂನಲ್ಲಿ ಪಂದ್ಯ ಜರುಗಲಿದೆ.

news18-kannada
Updated:June 11, 2021, 10:46 AM IST
ಶೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ; ಶಿಖರ್​ ಧವನ್​ ನಾಯಕ, ಭುವನೇಶ್ವರ್​ ಉಪನಾಯಕ
ಶಿಖರ್​ ಧವನ್
  • Share this:
ಟೀಂ ಇಂಡಿಯಾ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಕದಿನ ಕ್ರಿಕೆಟ್​ ಮತ್ತು ಟಿ20 ಸರಣಿಗಾಗಿ ತಂಡವನ್ನು ಪ್ರಕಟಿಸಿದೆ. ಅನುಭವಿ ಎಡಗೈ ಆರಂಭಿಕ ಬ್ಯಾಟ್ಸ್​ಮನ್​ ಶಿಖರ್​ ಧವನ್​ ಅವರು ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ವೇಗಿ ಭುವನೇಶ್ವರ್​ ಕುಮಾರ್​ ಅವರನ್ನು ತಂಡದ ಉಪನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ.

ಟೀಂ ಇಂಡಿಯಾ ಮತ್ತು ಶ್ರೀಲಂಕಾ ವಿರುದ್ಧ ಮೂರು ಏಕದಿನ ಪಂದ್ಯ ಮತ್ತು ಮೂರು ಟಿ20 ಪಂದ್ಯ ನಡೆಯಲಿದೆ. ಜುಲೈ 13ಕ್ಕೆ ಪಂದ್ಯ ಪ್ರಾರಂಭವಾಗಲಿದ್ದು, ಜುಲೈ 25ಕ್ಕೆ ಕೊನೆಗೊಳ್ಳಲಿದೆ. ಕೊಲಂಬೋದಲ್ಲಿರುವ ಆರ್​ ಪ್ರೇಮದಾಸ ಇಂಟರ್​ ನ್ಯಾಷನಲ್​ ಸ್ಟೇಡಿಯಂನಲ್ಲಿ ಪಂದ್ಯ ಜರುಗಲಿದೆ.

ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟಿಸಿರುವ ತಂಡ ಹೀಗಿದೆ:

ಶಿಖರ್ ಧವನ್ (ಕ್ಯಾಪ್ಟನ್), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್) ಯುಜುವೇಂದ್ರ ಚಾಹಲ್, ರಾಹುಲ್ ಚಾಹರ್, ಕೆ ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್ (ಉಪನಾಯಕ), ದೀಪಕ್ ಚಾಹರ್, ನವದೀಪ್ ಸೈನಿ, ಚೇತನ್ ಸಕರಿಯಾ.

ನೆಟ್ ಬೌಲರ್‌ಗಳು: ಇಶಾನ್ ಪೊರೆಲ್, ಸಂದೀಪ್ ವಾರಿಯರ್, ಅರ್ಷ್‌ದೀಪ್ ಸಿಂಗ್, ಸಾಯಿ ಕಿಶೋರ್, ಸಿಮಾರ್ಜೀತ್ ಸಿಂಗ್.

ಕೋಚ್​ ಯಾರು?

ಟೀಂ ಇಂಡಿಯಾದ ಮಾಜಿ ನಾಯಕ, ನ್ಯಾಷನಲ್​ ಕ್ರಿಕೆಟ್​ ಅಕಾಡೆಮಿಯ ಮುಖ್ಯಸ್ಥರಾಗಿರುವ ರಾಹುಲ್​ ದ್ರಾವಿಡ್​​ ಶ್ರೀಲಂಕಾ ಪ್ರವಾಸದಲ್ಲಿರುವ ಭಾರತೀಯ ತಂಡದ ಕೋಚ್​ ಆಗಿರಲಿದ್ದಾರೆ.
Published by: Harshith AS
First published: June 11, 2021, 10:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories