HOME » NEWS » Sports » CRICKET BCCI APPROVES FOR 10 TEAMS IN IPL 2022 SNVS

IPL - 2022ರ ಐಪಿಎಲ್​ನಲ್ಲಿ ಎಂಟು ಬದಲು 10 ತಂಡಗಳು: ಬಿಸಿಸಿಐ ಹಸಿರುನಿಶಾನೆ

ಐಪಿಎಲ್-2022 ಆವೃತ್ತಿಯಿಂದ ಎರಡು ಹೊಸ ತಂಡಗಳ ಸೇರ್ಪಡೆಯಾಗಲಿದೆ. 94 ಪಂದ್ಯಗಳನ್ನೊಳಗೊಂಡು ಕ್ರಿಕೆಟ್ ವೀಕ್ಷಕರ ಪಾಲಿಗೆ ಮೆಗಾ ಎಂಟರ್​ಟೈನ್ಮೆಂಟ್ ಆಗಲಿದೆ. ಬಿಸಿಸಿಐನ ವಾರ್ಷಿಕ ಮಹಾಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿದೆ.

cricketnext
Updated:December 24, 2020, 4:46 PM IST
IPL - 2022ರ ಐಪಿಎಲ್​ನಲ್ಲಿ ಎಂಟು ಬದಲು 10 ತಂಡಗಳು: ಬಿಸಿಸಿಐ ಹಸಿರುನಿಶಾನೆ
ಸಾಂದರ್ಭಿಕ ಚಿತ್ರ
  • Cricketnext
  • Last Updated: December 24, 2020, 4:46 PM IST
  • Share this:
ಅಹ್ಮದಾಬಾದ್(ಡಿ. 24): ಮುಂದಿನ ವರ್ಷ ನಂತರದ ವರ್ಷ, ಅಂದರೆ 2020-21ರ ಸಾಲಿನ ಐಪಿಎಲ್ ಆವೃತ್ತಿಯಲ್ಲಿ 10 ತಂಡಗಳು ಸೆಣಸಾಡಲಿವೆ. ಇಂದು ಇಲ್ಲಿ ನಡೆದ ಬಿಸಿಸಿಐನ ವಾರ್ಷಿಕ ಮಹಾಸಭೆಯಲ್ಲಿ ಇದಕ್ಕೆ ಅನುಮೋದನೆ ಕೂಡ ಸಿಕ್ಕಿದೆ. ಈವರೆಗೆ 8 ತಂಡಗಳು ಮಾತ್ರ ಐಪಿಎಲ್​ನಲ್ಲಿ ಆಡುತ್ತಿದ್ದವು. ಮುಂದಿನ ವರ್ಷದ ಐಪಿಎಲ್ ಟೂರ್ನಿಯಲ್ಲೂ ಎಂಟು ತಂಡಗಳು ಮಾತ್ರ ಇರಲಿವೆ. 2022ರಿಂದ ಮಾತ್ರ ಎರಡು ಹೆಚ್ಚುವರಿ ತಂಡಗಳನ್ನ ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಎರಡೂವರೆ ತಿಂಗಳ ಸುದೀರ್ಘ ಕಾಲ ನಡೆಯುವ ಈ ಟೂರ್ನಿಯಲ್ಲಿ ಪಂದ್ಯಗಳ ಸಂಖ್ಯೆ ಕೂಡ 94ಕ್ಕೆ ಹೆಚ್ಚಳವಾಗಲಿದೆ. ಕೆಲ ಸುದ್ದಿಗಳ ಪ್ರಕಾರ ಹಿಂದಿನ ರೈಸಿಂಗ್ ಪುಣೆ ಸೂಪರ್​ಜೈಂಟ್ ಫ್ರಾಂಚೈಸಿಯ ಮಾಲೀಕರಾಗಿದ್ದ ಸಂಜೀವ್ ಗೋಯೆಂಕಾ ಮತ್ತು ಉದ್ಯಮಿ ಗೌತಮ್ ಅದಾನಿ ಸೇರಿದಂತೆ ಹಲವು ಎರಡು ಹೊಸ ಫ್ರಾಂಚೈಸಿಗಳನ್ನ ಪಡೆಯಲು ಉತ್ಸಾಹ ತೋರಿದ್ದಾರೆ.

ಆದರೆ, ಬಿಸಿಸಿಐ ನಿರ್ಧಾರಕ್ಕೆ ಕೆಲವೆಡೆ ಅಸಮಾಧಾನ ವ್ಯಕ್ತವಾಗಿದೆ. ಎರಡು ಹೊಸ ಫ್ರಾಂಚೈಸಿಗಳಿಗೆ ಸರಿಯಾದ ತಂಡ ಕಟ್ಟಲು ಸಾಕಷ್ಟು ಸಮಯಾವಕಾಶ ಇಲ್ಲವಾಗುತ್ತದೆ. ಇದು ಅನ್ಯಾಯ ಎಂಬ ಅಭಿಪ್ರಾಯ ಇದೆ. ಈಗಿರುವ ಫ್ರಾಂಚೈಸಿಗಳೂ ಕೂಡ ಹೊಸ ತಂಡಗಳಿಗೂ ಆಗಮನ ಅನಪೇಕ್ಷಿತವಾಗಿದೆ. ಸದ್ಯ ಒಂದು ಹೆಚ್ಚುವರಿ ತಂಡವನ್ನ ಒಳಗೊಳ್ಳುವುದು, ಮುಂದಿನ ವರ್ಷಗಳಲ್ಲಿ ಮತ್ತೊಂದು ತಂಡವನ್ನು ಸೇರಿಸಿಕೊಳ್ಳುವುದು ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿರುವುದು ತಿಳಿದುಬಂದಿದೆ.

ಸುದೀರ್ಘ ಕಾಲ ಕ್ರಿಕೆಟ್ ಇರುವುದರಿಂದ ಹಾಗೂ ಐಪಿಎಲ್​ನಲ್ಲಿ ಅನೇಕ ವಿದೇಶೀ ಆಟಗಾರರು ಆಡುವುದರಿಂದ ಅಂತರರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯೊಂದಿಗೆ ಐಪಿಎಲ್ ವೇಳಾಪಟ್ಟಿಯ ಸಂಘರ್ಷವಾಗಬಹುದು. ಇದೇ ಕಾರಣಕ್ಕೆ ಐಪಿಎಲ್ ಫ್ರಾಂಚೈಸಿಗಳು ವಿದೇಶೀ ಆಟಗಾರರನ್ನ ಟೂರ್ನಿ ಮುಗಿಯುವವರೆಗೂ ಹಿಡಿದಿಡುವುದು ಕಷ್ಟಕರವಾಗಬಹುದು.

ಇದನ್ನೂ ಓದಿ: Sunil Gavaskar - ಟೀಮ್ ಇಂಡಿಯಾ ಒಳಗೆ ಬಿರುಕು? ಗವಾಸ್ಕರ್ ಆಕ್ರೋಶದ ಮಾತುಗಳು ಏನು ಹೇಳುತ್ತವೆ?

ಇನ್ನು, ಐಪಿಎಲ್ ಪ್ರಸಾರದ ಹಕ್ಕಿನ ವಿಚಾರದಲ್ಲೂ ವ್ಯತ್ಯಯವಾಗಬಹುದು. ಸದ್ಯ 2022ರವರೆಗೂ ಸ್ಟಾರ್ ಇಂಡಿಯಾ 16,347 ಕೋಟಿ ತೆತ್ತು ಪ್ರಸಾರದ ಹಕ್ಕು ಪಡೆದಿದೆ. ಒಪ್ಪಂದದಂತೆ ಒಂದು ಆವೃತ್ತಿಯಲ್ಲಿ 60 ಪಂದ್ಯಗಳು ಮಾತ್ರ ಇರುತ್ತವೆ. ಆದರೆ, 2022ರಲ್ಲಿ 94 ಪಂದ್ಯಗಳು ಇರುವುದರಿಂದ ಸ್ಟಾರ್ ಇಂಡಿಯಾ ಇನ್ನಷ್ಟು ಹಣವನ್ನ ತೆರಬೇಕಾಗಬಹುದು.

ಬಿಸಿಸಿಐ ಮೂಲಗಳ ಪ್ರಕಾರ ಮುಂದಿನ ವರ್ಷದ ಅಂದರೆ 2021ರ ಆವೃತ್ತಿಯ ಐಪಿಎಲ್​ನಲ್ಲೇ ಎರಡು ಹೊಸ ತಂಡಗಳಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇತ್ತು. ಆದರೆ, ಕೊರೋನಾ ಪಿಡುಗು ಬಂದಿದ್ದರಿಂದ ನಿರ್ಧಾರವನ್ನು ಮುಂದೂಡಲಾಯಿತು. ಈಗ 2022ರ ಐಪಿಎಲ್​ನಲ್ಲಿ 10 ತಂಡಗಳಿರುವುದು ನಿಶ್ಚಿತ. ಎರಡು ಹೊಸ ಫ್ರಾಂಚೈಸಿಗಳಿಗಾಗಿ ಬಿಸಿಸಿಐ ಮೊದಲು ಬಿಡ್ಡಿಂಗ್ ಆಹ್ವಾನಿಸಲಿದೆ. ನಂತರ ಸಂಭಾವ್ಯ ನಗರಗಳ ಪಟ್ಟಿ ನೀಡಬೇಕಾಗುತ್ತದೆ. ನಂತರ ಎಲ್ಲಾ 10 ತಂಡಗಳಿಗೆ ಹಂಚಿಕೆ ಮಾಡಲು ಆಟಗಾರರ ಹರಾಜು ಪ್ರಕ್ರಿಯೆ ಇರುತ್ತದೆ.

ಮಾರ್ಚ್-ಏಪ್ರಿಲ್​ನಲ್ಲಿ ನಡೆಯುವ ಐಪಿಎಲ್ ಟೂರ್ನಿಯ ಬಳಿಕ ಈಗಿರುವ ಎಂಟು ಫ್ರಾಂಚೈಸಿಗಳು ನಿರ್ದಿಷ್ಟ ಸಂಖ್ಯೆಯ ಆಟಗಾರರನ್ನ ಉಳಿಸಿಕೊಂಡು ಉಳಿದವರನ್ನ ರಿಲೀವ್ ಮಾಡಬೇಕಾಗುತ್ತದೆ.ಇದೇ ವೇಳೆ, 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಒಳಗೊಳ್ಳಲು ಐಸಿಸಿ ಮಾಡುತ್ತಿರುವ ಪ್ರಯತ್ನಕ್ಕೆ ಬಿಸಿಸಿಐ ಬೆಂಬಲ ನೀಡಲಿದೆ.
Published by: Vijayasarthy SN
First published: December 24, 2020, 4:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories