• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • BCCI Central Contract: ಜಡೇಜಾಗೆ ಸಿಕ್ತು ಬಂಪರ್, ರಾಹುಲ್​ಗೆ ಹಿಂಬಡ್ತಿ! ಕಾಂಟ್ರ್ಯಾಕ್ಟ್​ನಿಂದಲೇ ಹೊರಬಿದ್ದ ಸ್ಟಾರ್​ ಕ್ರಿಕೆಟಿಗರು

BCCI Central Contract: ಜಡೇಜಾಗೆ ಸಿಕ್ತು ಬಂಪರ್, ರಾಹುಲ್​ಗೆ ಹಿಂಬಡ್ತಿ! ಕಾಂಟ್ರ್ಯಾಕ್ಟ್​ನಿಂದಲೇ ಹೊರಬಿದ್ದ ಸ್ಟಾರ್​ ಕ್ರಿಕೆಟಿಗರು

ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಜಡೇಜಾಗೆ ಬಡ್ತಿ

ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಜಡೇಜಾಗೆ ಬಡ್ತಿ

ಬಿಸಿಸಿಐ ಭಾನುವಾರ ಕ್ರಿಕೆಟಿಗರ ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಲ್​ರೌಂಡರ್​ ರವೀಂದ್ರ ಜಡೇಜಾ A+ ಗ್ರೇಡ್​ಗೆ ಬಡ್ತಿ ಪಡೆದಿದ್ದಾರೆ. ಕೇಂದ್ರ ಗುತ್ತಿಗೆ ಪಡೆದ ಆಟಗಾರರ ಸಂಪೂರ್ಣ ವಿವರ ಇಲ್ಲಿದೆ.

  • Trending Desk
  • 5-MIN READ
  • Last Updated :
  • Mumbai, India
  • Share this:

ಈಗಂತೂ ಕ್ರಿಕೆಟ್ ಆಟಗಾರರು (Cricket Players) ಗಳಿಸುವಷ್ಟು ಹಣವನ್ನು ಬೇರೆ ಯಾವ ಕ್ರೀಡೆಯ (Sports) ಆಟಗಾರರು ಸಂಪಾದಿಸುತ್ತಿಲ್ಲ ಎಂದು ಭಾವಿಸಿದರೆ ಬಹುಶಃ ತಪ್ಪಾಗುವುದಿಲ್ಲ ನೋಡಿ. ಏಕೆಂದರೆ ಕ್ರಿಕೆಟ್ ಆಟಗಾರರು ತಮ್ಮ ದೇಶದ ಪರ ಆಡುವ ಟೆಸ್ಟ್, ಏಕದಿನ ಮತ್ತು ಟ್ವೆಂಟಿ20 ಪಂದ್ಯಗಳಿಗೆ ಬಿಸಿಸಿಐನ (BCCI) ಶ್ರೇಣಿಯ ಪ್ರಕಾರ ಹಣ ಪಡೆಯುತ್ತಾರೆ.  ಇದರ ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ನಲ್ಲಿ ಆಡಲು ಬೇರೆ ಮೊತ್ತದ ಹಣವನ್ನೇ ಪಡೆಯುತ್ತಾರೆ ಎಂಬುದು ನಮಗೆಲ್ಲಾ ಗೊತ್ತಿರುವ ವಿಚಾರವೇ ಆಗಿದೆ.


ಈಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಎಂದರೆ ಬಿಸಿಸಿಐ ಮುಂಬರುವ 2023-24ರ ಋತುವಿಗಾಗಿ ವಾರ್ಷಿಕ ಆಟಗಾರರ ಒಪ್ಪಂದವನ್ನು ಭಾನುವಾರ ಪ್ರಕಟಿಸಿದ್ದು, ಟೀಮ್ ಇಂಡಿಯಾದ ಕೇಂದ್ರ ಗುತ್ತಿಗೆಯಲ್ಲಿ ಹಲವು ಬದಲಾವಣೆಗಳು ಕಂಡು ಬಂದಿವೆ.


ರವೀಂದ್ರ ಜಡೇಜಾಗೆ ಸಿಕ್ತು ಬಂಪರ್ 


ವಿಶ್ವದ ಶ್ರೇಷ್ಠ ಆಲ್​ರೌಂಡರ್​ಗಳಲ್ಲಿ ಒಬ್ಬರಾಗಿರುವ ರವೀಂದ್ರ ಜಡೇಜಾ ಮತ್ತು ಉದಯೋನ್ಮುಖ ಪ್ರತಿಭೆ ಅಕ್ಷರ್ ಪಟೇಲ್ ಅವರಿಗೆ ಈ ಬಾರಿಯ  ಗುತ್ತಿಗೆಯಲ್ಲಿ ಬಿಸಿಸಿಐ ಬಡ್ತಿ ನೀಡಿದೆ. ಜಡೇಜಾ ಎ ನಿಂದ ಎ+ ಪಡೆದರೆ, ಪಟೇಲ್​  ಸಿ  ಗ್ರೇಡ್​ನಿಂದ ಎ ಗ್ರೇಡ್​ಗೆ ಬಡ್ತಿ ಪಡೆದುಕೊಂಡಿದ್ದಾರೆ. ಟಿ20 ತಂಡದ ಭವಿಷ್ಯದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಬಿ ಗ್ರೇಡ್​ನಿಂದ ಎ ಗ್ರೇಡ್​ಗೆ ಪ್ರಮೋಟ್ ಆಗಿದ್ದಾರೆ. ಒಟ್ಟು 26 ಕ್ರಿಕೆಟಿಗರು ಬಿಸಿಸಿಐ  ಕೇಂದ್ರ ಗುತ್ತಿಗೆಯಲ್ಲಿ ಅವಕಾಶ ಪಡೆದಿದ್ದಾರೆ.


ಇದನ್ನೂ ಓದಿ:  Asia Cup 2023: ಏಷ್ಯಾಕಪ್ 2023 ಅರ್ಹತಾ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ, ಎಲ್ಲಿ? ಯಾವಾಗ? ಇಲ್ಲಿದೆ ಸಂಪೂರ್ಣ ವಿವರ


ಕೆಎಲ್​ ರಾಹುಲ್​​ಗೆ ಶಾಕ್ 


ಭಾರತ ತಂಡದ ಉಪನಾಯಕ ಕೆಎಲ್​ ರಾಹುಲ್​ ಇತ್ತೀಚಿಗೆ ಮೂರು ಮಾದರಿಯಲ್ಲೂ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಈ ಕಾರಣದಿಂದ ಅವರೂ ಎ ಗ್ರೇಡ್​ನಿಂದ ಬಿ ಗ್ರೇಡ್​ಗೆ ಹಿಂಬಡ್ತಿ ಪಡೆದುಕೊಂಡಿದ್ದಾರೆ. ಅವರು ಕಳೆದ ವರ್ಷದ ಒಪ್ಪಂದದಲ್ಲಿ ಎ ಗ್ರೇಡ್​ನಲ್ಲಿದ್ದರು.




ಗುತ್ತಿಗೆ ಆಧಾರದಲ್ಲಿ ಆಟಗಾರರು ಪಡೆಯುವ ಹಣವೆಷ್ಟು?


ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಟ್ಟಿಯನ್ನು ಪ್ರಮುಖವಾಗಿ ನಾಲ್ಕು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಲಾಗಿದೆ.    ಎ+  ಕೆಟಗರಿಯಲ್ಲಿ ಬರುವ ಕ್ರಿಕೆಟಿಗರಿಗೆ 7 ಕೋಟಿ ರೂಪಾಯಿ,  ಎ ಕೆಟಗರಿಯಲ್ಲಿ ಬರುವವರಿಗೆ 5 ಕೋಟಿ ರೂಪಾಯಿ,  ಬಿ ಕೆಟಗರಿಯವರಿಗೆ 3 ಕೋಟಿ ರೂಪಾಯಿ ಮತ್ತು  ಸಿ ಕೆಟಗರಿಯ ಆಟಗಾರರಿಗೆ 1 ಕೋಟಿ ರೂಪಾಯಿ ಸಿಗಲಿದೆ.


ಎಲೈಟ್ ಎ+ ವಿಭಾಗದಲ್ಲಿ ಏಕದಿನ, ಟೆಸ್ಟ್​ ಹಾಗೂ ಟಿ20 ಮೂರು ಸ್ವರೂಪಗಳಲ್ಲಿಯೂ ಖಾಯಂ ಸ್ಥಾನ ಗಿಟ್ಟಿಸುವ ಆಟಗಾರರಿರುತ್ತಾರೆ.   ಎ  ಕೆಟಗರಿಯಲ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಅವಕಾಶ ಪಡೆಯುವ ಕ್ರಿಕೆಟಿಗರನ್ನು ಒಳಗೊಂಡಿದೆ.


ಸೀಮಿತ ಓವರ್​ಗಳ ತಂಡಕ್ಕೆ ಅಥವಾ ಕೇವಲ ಟೆಸ್ಟ್​ ಪಂದ್ಯಗಳಿಗೆ ಪರಿಗಣಿಸಲಾದ ಆಟಗಾರರು  ಬಿ  ಗುಂಪಿನಲ್ಲಿರುತ್ತಾರೆ.   ಇನ್ನೂ  ಸಿ ಗುಂಪಿನಲ್ಲಿರುವ ಆಟಗಾರರನ್ನು ಸಾಮಾನ್ಯವಾಗಿ ಮೂರು ಸ್ವರೂಪಗಳಲ್ಲಿ ಒಂದಕ್ಕೆ ನಿಮಿತವಾಗಿ ಪರಿಗಣಿಸಲಾಗುತ್ತದೆ.


ಎ+ನಲ್ಲಿ ಇರುವ ಆಟಗಾರರು


ಆಲ್​ರೌಂಡರ್​  ರವೀಂದ್ರ ಜಡೇಜಾ ಅವರನ್ನು ಗ್ರೇಡ್ ಎ ಯಿಂದ ಗ್ರೇಡ್ ಎ+ ಗೆ ಬಡ್ತಿ ನೀಡಲಾಗಿದ್ದು, ಅಗ್ರ ವರ್ಗದ ಆಟಗಾರರ ಸಂಖ್ಯೆ ಈಗ ಮೂರರಿಂದ ನಾಲ್ಕಕ್ಕೆ ಏರಿಸಲಾಗಿದೆ. ಈ ಮೊದಲು ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ  ಈ ವಿಭಾಗದಲ್ಲಿ ಇದ್ದರು. ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಅವರನ್ನು ಕ್ರಮವಾಗಿ ಗ್ರೇಡ್ ಬಿ ಮತ್ತು ಗ್ರೇಡ್ ಸಿ ಯಿಂದ ಎ ಗ್ರೇಡ್​ಗೆ ಬಡ್ತಿ ನೀಡಲಾಗಿದೆ.


ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್ ಸಿ ಗ್ರೇಡ್​ನಿಂದ ಬಿ ವಿಭಾಗಕ್ಕೆ ಬಡ್ತಿ ಪಡೆದಿದ್ದಾರೆ. ಆದರೆ ಶಾರ್ದೂಲ್ ಠಾಕೂರ್​ ಬಿ ಇಂದ ಸಿ ಗ್ರೇಡ್​ ಹಿಂಬಡ್ತಿ ಪಡೆದಿದ್ದಾರೆ.  ಕಳೆದ ವರ್ಷ ಗುತ್ತಿಗೆಯಿಂದ ಹೊರ ಬಿದ್ದಿದ್ದ ಸ್ಪಿನ್​ ಬೌಲರ್​ ಕುಲ್ದೀಪ್ ಯಾದವ್​ ಈ ಬಾರಿ ಕೇಂದ್ರ ಗುತ್ತಿಗೆಗೆ ಮರಳಿದ್ದು, ಸಿ ಗ್ರೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ವಿಕೆಟ್ ಕೀಪರ್ ಕೆಎಸ್​ ಭರತ್​ ಗುತ್ತಿಗೆ ಪಟ್ಟಿಯಲ್ಲಿ ಅವಕಾಶ ಪಡೆದ ಏಕೈಕ ಆಟಗಾರನಾಗಿದ್ದಾರೆ.


ಗುತ್ತಿಗೆಯಿಂದ ಹೊರ ಬಿದ್ದ ಆಟಗಾರರು


ಆಶ್ಚರ್ಯಕರ ಸಂಗತಿ ಎಂದರೆ ಹಿರಿಯ ಕ್ರಿಕೆಟಿಗರಾದ​ ಭುವನೇಶ್ವರ್ ಕುಮಾರ್,   ಅಜಿಂಕ್ಯ ರಹಾನೆ ಮತ್ತು ಇಶಾಂತ್ ಶರ್ಮಾ, ಹನುಮ ವಿಹಾರಿ, ಮಯಾಂಕ್ ಅಗರ್ವಾಲ್, ವೃದ್ಧಿಮಾನ್ ಸಹಾ ಮತ್ತು ದೀಪಕ್ ಚಹರ್ 2023-24ರ ಬಿಸಿಸಿಐ ಗುತ್ತಿಗೆಯಿಂದ ಹೊರ ಬಿದ್ದಿದ್ದಾರೆ. ಇಶಾಂತ್ ಮತ್ತು ರಹಾನೆ ಕಳೆದ ಋತುವಿನಲ್ಲಿ ‘ಬಿ’ ಕೆಟಗರಿಯಲ್ಲಿದ್ದರು, ಉಳಿದವರು ‘ಸಿ’ ಕೆಟಗರಿಯಲ್ಲಿದ್ದರು.

First published: