BCCI: ಬಿಸಿಸಿಐ ವಾರ್ಷಿಕ ಸಂಭಾವನೆ​: ಸಿರಾಜ್, ಗಿಲ್​ಗೆ ಬಂಪರ್: ಬುಮ್ರಾ, ಪಾಂಡ್ಯಗೆ ಬಡ್ತಿ..!

A ಗ್ರೇಡ್​ನಲ್ಲಿ ಆರ್. ಅಶ್ವಿನ್, ರವೀಂದ್ರ ಜಡೇಜಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶಿಖರ್ ಧವನ್, ಕೆ.ಎಲ್. ರಾಹುಲ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಇದ್ದಾರೆ.

Team india

Team india

 • Share this:
  ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತನ್ನ ಆಟಗಾರರ ವಾರ್ಷಿಕ ಕಾಂಟ್ರ್ಯಾಕ್ಟ್ ಪಟ್ಟಿ ಬಿಡುಗಡೆ ಮಾಡಿದೆ. ನೂತನ ಗುತ್ತಿಗೆ ಪಟ್ಟಿಯಲ್ಲಿ ಟೀಮ್ ಇಂಡಿಯಾದ 28 ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಬಾರಿ ಕೆಲ ಯುವ ಆಟಗಾರರು ಕೂಡ ಕಾಂಟ್ರ್ಯಾಕ್ಟ್​ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಇನ್ನು ಕಳೆದ ಬಾರಿ ಕೆಳ ಗ್ರೇಡ್​ನಲ್ಲಿದ್ದ ಕೆಲ ಆಟಗಾರರು ಈ ಬಾರಿ ಗುತ್ತಿಗೆ ಶ್ರೇಣಿಯಲ್ಲಿ ಉನ್ನತ ಸ್ಥಾನಕ್ಕೇರಿರುವುದು ವಿಶೇಷ. ಒಟ್ಟು 4 ವಿಭಾಗಗಳಲ್ಲಿ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅದರಂತೆ A+, A, B, C ಎಂದು ಗ್ರೇಡ್​ಗಳನ್ನು ವಿಂಗಡಿಸಲಾಗಿದೆ.

  ಇನ್ನು ಕಳೆದ ಬಾರಿ ಎ ಗ್ರೇಡ್​ನಲ್ಲಿದ್ದ ಜಸ್​ಪ್ರೀತ್ ಬುಮ್ರಾ ಈ ಬಾರಿ ಎ ಪ್ಲಸ್​ನಲ್ಲಿ ಸ್ಥಾನ ಪಡೆದಿದ್ದು, ಹಾಗೆಯೇ ಬಿ ಗ್ರೇಡ್​ನಲ್ಲಿ ಹಾರ್ದಿಕ್ ಪಾಂಡ್ಯ ಎ ಗ್ರೇಡ್‌ಗೆ ಬಡ್ತಿ ಪಡೆದಿದ್ದಾರೆ. ಅದೇ ರೀತಿ ಶುಭ್​ಮನ್ ಗಿಲ್ ಹಾಗೂ ಮೊಹಮ್ಮದ್ ಸಿರಾಜ್ ಈ ಬಾರಿ ಬಿಸಿಸಿಐ ಕಾಂಟ್ರ್ಯಾಕ್ಟ್​ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

  A+ ಕಾಂಟ್ರ್ಯಾಕ್ಟ್​ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮೂವರು ಸ್ಟಾರ್ ಆಟಗಾರರು ಸ್ಥಾನ ಪಡೆದಿದ್ದಾರೆ. ಅದರಂತೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾಗೆ ವಾರ್ಷಿಕ ಒಪ್ಪಂದಂತೆ ತಲಾ 7 ಕೋಟಿ ರೂ ಸಿಗಲಿದೆ.

  ಇನ್ನು A ಗ್ರೇಡ್​ನಲ್ಲಿ ಆರ್. ಅಶ್ವಿನ್, ರವೀಂದ್ರ ಜಡೇಜಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶಿಖರ್ ಧವನ್, ಕೆ.ಎಲ್. ರಾಹುಲ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಇದ್ದು, ಇವರಿಗೆ ವಾರ್ಷಿಕ ತಲಾ 5 ಕೋಟಿ ಸಿಗಲಿದೆ.

  ಅದೇ ರೀತಿ B ಗ್ರೇಡ್​ನಲ್ಲಿ ವೃದ್ಧಿಮಾನ್ ಸಹಾ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್, ಮಯಂಕ್ ಅಗರವಾಲ್ ಅವರಿಗೆ ಸ್ಥಾನ ಲಭಿಸಿದ್ದು, ಅದರಂತೆ ವಾರ್ಷಿಕ ತಲಾ 3 ಕೋಟಿ ರೂ ಸಿಗಲಿದೆ.

  C ಗ್ರೇಡ್​ನಲ್ಲಿ ಕುಲದೀಪ್ ಯಾದವ್, ನವದೀಪ್ ಸೈನಿ, ದೀಪಕ್ ಚಹರ್, ಶುಭಮನ್ ಗಿಲ್, ಹನುಮ ವಿಹಾರಿ, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್ ಹಾಗೂ ಮೊಹಮ್ಮದ್ ಸಿರಾಜ್ ಸ್ಥಾನ ಪಡೆದಿದ್ದಾರೆ. ಇವರಿಗೆ ವಾರ್ಷಿಕ 1 ಕೋಟಿ ರೂ. ಸಿಗಲಿದೆ.
  Published by:zahir
  First published: