• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • U-19 World Cup: ಕಿರಿಯರ ವಿಶ್ವಕಪ್: ಕರ್ನಾಟಕದ ಅನೀಶ್ವರ್ ಸೇರಿ 17 ಆಟಗಾರರ ಭಾರತ ತಂಡ ಪ್ರಕಟ

U-19 World Cup: ಕಿರಿಯರ ವಿಶ್ವಕಪ್: ಕರ್ನಾಟಕದ ಅನೀಶ್ವರ್ ಸೇರಿ 17 ಆಟಗಾರರ ಭಾರತ ತಂಡ ಪ್ರಕಟ

ಯಶ್ ಧುಲ್

ಯಶ್ ಧುಲ್

2022, U-19 World Cup: ಕೆರಿಬಿಯನ್ ನಾಡಿನಲ್ಲಿ ಮುಂದಿನ ಜನವರಿ ಮತ್ತು ಫೆಬ್ರವರಿಯಲ್ಲಿ ನಡೆಯಲಿರುವ ಕಿರಿಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ದೆಹಲಿಯ ಯಶ್ ಧುಲ್ ಅವರು ನಾಯಕರಾಗಿದ್ದಾರೆ.

 • Cricketnext
 • 2-MIN READ
 • Last Updated :
 • Share this:

ನವದೆಹಲಿ, ಡಿ. 19: ಮುಂದಿನ ತಿಂಗಳು ಕೆರಿಬಿಯನ್ ದ್ವೀಪಗಳಲ್ಲಿ ಆರಂಭವಾಗಲಿರುವ ಅಂಡರ್-19 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಟೀಮ್ ಇಂಡಿಯಾವನ್ನು ಬಿಸಿಸಿಐ ಇಂದು ಪ್ರಕಟಿಸಿದೆ. ಕರ್ನಾಟಕದ ಆಲ್​ರೌಂಡರ್ ಅನೀಶ್ವರ್ ಗೌತಮ್ (Aneeshwar Gautam) ಸೇರಿದಂತೆ 17 ಮಂದಿ ಆಟಗಾರರು ಹಾಗೂ ಐವರು ಸ್ಟ್ಯಾಂಡ್​ಬೈ ಆಟಗಾರರಿರುವ ತಂಡವನ್ನು ಪ್ರಕಟಿಸಲಾಗಿದೆ. ದೆಹಲಿಯ ಯಶ್ ಧುಲ್ (Yash Dhull) ಅವರು ನಾಯಕರಾದರೆ, ಆಂಧ್ರದ ಎಸ್ ಕೆ ರಷೀದ್ (SK Rashid) ಅವರು ಉಪನಾಯಕರಾಗಿದ್ದಾರೆ.


“ಮುಂಬರುವ ಐಸಿಸಿ ಅಂಡರ್ 19 ಪುರುಷರ ವಿಶ್ವಕಪ್​ಗೆ ಕಿರಿಯರ ಆಯ್ಕೆ ಸಮಿತಿಯು ಟೀಮ್ ಇಂಡಿಯಾವನ್ನು ಆಯ್ಕೆ ಮಾಡಿದೆ. ಜನವರಿ 14ರಿಂದ ಫೆಬ್ರವರಿ 5ರವರೆಗೆ ವೆಸ್ಟ್ ಇಂಡೀಸ್​ನಲ್ಲಿ ಟೂರ್ನಿ ನಡೆಯಲಿದೆ. ಇದು 14ನೇ ಆವೃತ್ತಿಯ ಟೂರ್ನಿಯಾಗಿದ್ದು 16 ತಂಡಗಳು ಪಾಲ್ಗೊಳ್ಳುತ್ತಿವೆ. 48 ಪಂದ್ಯಗಳು ನಡೆಯಲಿವೆ” ಎಂದು ಬಿಸಿಸಿಐ ಹೇಳಿಕೆ ನೀಡಿದೆ.ಭಾರತದ ಯಶೋಗಾಥೆ:


ಜೂನಿಯರ್ ವರ್ಲ್ಡ್ ಕಪ್​ನಲ್ಲಿ ಭಾರತವೇ ಹೆಚ್ಚು ಪಾರಮ್ಯ ಮೆರೆದಿರುವುದು. ನಾಲ್ಕು ಬಾರಿ ಟ್ರೋಫಿ ಎತ್ತಿಹಿಡಿದಿದೆ. 2000, 2008, 2012 ಮತ್ತು 2018ರ ಕಿರಿಯರ ವಿಶ್ವಕಪ್​ಗಳನ್ನ ಭಾರತದ ಹುಡುಗರು ಎತ್ತಿಹಿಡಿದಿದ್ದಾರೆ. 2016ರಲ್ಲಿ ರನ್ನರ್ ಅಪ್ ಆಗಿದ್ದಾರೆ. ಕಿರಿಯರ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಯಶಸ್ಸು ಕಂಡ ಶ್ರೇಯಸ್ಸು ಟೀಮ್ ಇಂಡಿಯಾದ್ದು.


ಇದನ್ನೂ ಓದಿ: India vs South Africa: ಸೆಂಚೂರಿಯನ್​ನಲ್ಲಿ ಟೀಮ್ ಇಂಡಿಯಾ ಆಟಗಾರರ ಭರ್ಜರಿ ನೆಟ್ ಪ್ರಾಕ್ಟಿಸ್


ಅಂಡರ್-19 ವಿಶ್ವಕಪ್​ಗೆ ಭಾರತ ತಂಡ: 


1) ಯಶ್ ಧುಲ್ (ನಾಯಕ), ಡೆಲ್ಲಿ
2) ಹರ್ನೂರ್ ಸಿಂಗ್, ಚಂಡೀಗಡ
3) ಅಂಗಕೃಶ್ ರಘುವಂಶಿ, ಮುಂಬೈ
4) ಎಸ್ ಕೆ ರಷೀದ್ (ಉಪನಾಯಕ), ಆಂಧ್ರ
5) ನಿಶಾಂತ್ ಸಿಂಧು, ಹರ್ಯಾಣ
6) ಸಿದ್ಧಾರ್ಥ್ ಯಾದವ್, ಉತ್ತರ ಪ್ರದೇಶ
7) ಅನೀಶ್ವರ್ ಗೌತಮ್, ಕರ್ನಾಟಕ
8) ದಿನೇಶ್ ಬಾನ (ವಿ.ಕೀ.), ಹರ್ಯಾಣ
9) ಆರಾಧ್ಯ ಯಾದವ್ (ವಿ. ಕೀ.), ಉತ್ತರ ಪ್ರದೇಶ
10) ರಾಜ್ ಅಂಗದ್ ಬಾವ, ಚಂಡೀಗಡ
11) ಮಾನವ್ ಪಾರಖ್, ತಮಿಳುನಾಡು
12) ಕೌಶಲ್ ಟಂಬೆ, ಮಹಾರಾಷ್ಟ್ರ
13) ಆರ್ ಎಸ್ ಹಂಗರ್ಗೇಕರ್, ಮಹಾರಾಷ್ಟ್ರ
14) ವಾಸು ವತ್ಸ್, ಉತ್ತರ ಪ್ರದೇಶ
15) ವಿಕಿ ಒಸತ್ವಾಲ್, ಮಹಾರಾಷ್ಟ್ರ
16) ರವಿಕುಮಾರ್, ಬಂಗಾಳ
17) ಗರ್ವ್ ಸಂಗವಾನ್, ಹರ್ಯಾಣ


ಇದನ್ನೂ ಓದಿ: Year Ender 2021: ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗರು ಇವರೇ ನೋಡಿ..!


ಸ್ಟ್ಯಾಂಡ್​ಬೈ ಆಟಗಾರರು:
1) ರಿಷಿತ್ ರೆಡ್ಡಿ, ಹೈದರಾಬಾದ್,
2) ಉದಯ್ ಸಹರನ್, ಪಂಜಾಬ್
3) ಅಂಶ್ ಗೋಸಾಯ್, ಸೌರಾಷ್ಟ್ರ
4) ಅಮೃತ್ ರಾಜ್ ಉಪಾಧ್ಯಾಯ್, ಬಂಗಾಳ
5) ಪಿಎಂ ಸಿಂಗ್ ರಾಥೋಡ್, ರಾಜಸ್ಥಾನ್


ಕಿರಿಯರ ವಿಶ್ವಕಪ್ 2022, ಭಾರತದ ಪಂದ್ಯಗಳ ವೇಳಾಪಟ್ಟಿ:


ಜ. 15: ದಕ್ಷಿಣ ಆಫ್ರಿಕಾ ವಿರುದ್ಧ: ಸ್ಥಳ ಗಯಾನ


ಜ. 19: ಐರ್ಲೆಂಡ್ ವಿರುದ್ಧ: ಸ್ಥಳ ಟ್ರಿನಿಡಾಡ್ ಅಂಡ್ ಟೊಬಾಗೊ

top videos


  ಜ. 22: ಉಗಾಂಡ ವಿರುದ್ಧ: ಟ್ರಿನಿಡಾಡ್ ಅಂಡ್ ಟೊಬಾಗೊ.

  First published: