ಕ್ರೀಡೆ

  • associate partner
HOME » NEWS » Sports » CRICKET BBL MARCUS STOINIS SLAMS CREATE HISTORY AGAINST SYDNEY SIXERS BREAKS NUMEROUS RECORDS AT MCG VB

BBL: 120 ಎಸೆತಗಳಲ್ಲಿ 219 ರನ್; ಬಿಗ್​ಬ್ಯಾಷ್​​ನಲ್ಲಿ ಅಬ್ಬರಿಸಿ ಬೊಬ್ಬಿರಿದ ಆರ್​ಸಿಬಿ ಆಟಗಾರ

ಮಾರ್ಕಸ್ ಸ್ಟೊಯಿನಿಸ್ ಕಳೆದ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಪರ ಆಡಿದ್ದರು. ಆದರೆ, ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಇವರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಈ ಬಾರಿಯ ಹರಾಜಿಗೂ ಮುನ್ನ ಆರ್​ಸಿಬಿ ಇವರನ್ನು ತಂಡದಿಂದ ಕೈಬಿಟ್ಟಿತ್ತು.

Vinay Bhat | news18-kannada
Updated:January 12, 2020, 4:15 PM IST
BBL: 120 ಎಸೆತಗಳಲ್ಲಿ 219 ರನ್; ಬಿಗ್​ಬ್ಯಾಷ್​​ನಲ್ಲಿ ಅಬ್ಬರಿಸಿ ಬೊಬ್ಬಿರಿದ ಆರ್​ಸಿಬಿ ಆಟಗಾರ
ಮಾರ್ಕಸ್ ಸ್ಟೊಯಿನಿಸ್
  • Share this:
ಕ್ರಿಕೆಟ್ ಕ್ಷೇತ್ರದಲ್ಲಿ ಐಪಿಎಲ್​​ನಷ್ಟೆ ಪ್ರಸಿದ್ಧಿ ಪಡೆಯುತ್ತಿರುವ ಬಿಗ್​ಬ್ಯಾಷ್ ಟಿ-20 ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಮಾಜಿ ಆಟಗಾರ ಮಾರ್ಕಸ್ ಸ್ಟೊಯಿನಿಸ್ ಅಬ್ಬರಿಸಿ ಬೊಬ್ಬಿರಿದಿದ್ದಾರೆ.

ಬಿಗ್​ಬ್ಯಾಷ್​​ನಲ್ಲಿ ಮೆಲ್ಬೋರ್ನ್​ ಸ್ಟಾರ್ಸ್​ ತಂಡದ ಪರ ಬ್ಯಾಟ್ ಬೀಸುತ್ತಿರುವ ಸ್ಟೊಯಿನಿಸ್ ಸಿಡ್ನಿ ಸಿಕ್ಸರ್ಸ್​​ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

ಟಾಸ್ ಸೋತ ಮೆಲ್ಬೋರ್ನ್​ ಸ್ಟಾರ್ಸ್​​​ ಮೊದಲು ಬ್ಯಾಟಿಂಗ್​ಗೆ ಇಳಿಯಿತು. ಓಪನರ್ ಆಗಿ ಕಣಕ್ಕಿಳಿದ ಮಾರ್ಕಸ್ ಸ್ಟೊಯಿನಿಸ್ ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾದರು. ಇವರ ಜೊತೆಯಿದ್ದ ಹಿಲ್ಟನ್ ಕಾರ್ಟ್​​ವ್ರೈಟ್​​ ಕೂಡ ಸ್ಟೊಯಿನಿಸ್​ಗೆ ಉತ್ತಮ ಸಾಥ್ ನೀಡಿದರು.

ಚೆಂಡನ್ನು ಬೌಂಡರಿ- ಸಿಕ್ಸರ್​​ಗೆ ಅಟ್ಟಿದ ಸ್ಟೊಯಿನಿಸ್ ಎದುರಾಳಿ ಬೌಲರ್​ಗಳ ಬೆವರಿಳಿಸಿಬಿಟ್ಟರು. ಕೇವಲ 79 ಎಸೆತಗಳಲ್ಲಿ 13 ಬೌಂಡರಿ ಹಾಗೂ 8 ಅಮೋಘ ಸಿಕ್ಸ್​ ಸಿಡಿಸಿ ಸ್ಟೊಯಿನಿಸ್ ಅಜೇಯ 147 ರನ್ ಚಚ್ಚಿದರು.
ಸ್ಟೊಯಿನಿಸ್ ಜೊತೆಯಿದ್ದ ಕಾರ್ಟ್​​ವ್ರೈಟ್ ಕೂಡ 40 ಎಸೆತಗಳಲ್ಲಿ 59 ರನ್ ಬಾರಿಸಿದರು. ಮೊದಲ ವಿಕೆಟ್​ಗೆನೆ ಈ ಜೋಡಿ ಬರೋಬ್ಬರಿ 207 ರನ್​ಗಳ ಜೊತೆಯಾಟ ನೀಡಿತು.

ಅಲ್ಲದೆ, ಸ್ಟೊಯಿನಿಸ್ ಅಜೇಯ 147 ರನ್ ಗಳಿಸಿ ದಾಖಲೆ ಬರೆದರು. ಬಿಗ್​ಬ್ಯಾಷ್ ಲೀಗ್ ಇತಿಹಾಸದಲ್ಲಿ ಸ್ಟೊಯಿನಿಸ್ ಸಿಡಿಸಿದ ಅಜೇಯ 147 ರನ್ ಆಟಗಾರನೊಬ್ಬನ ಗರಿಷ್ಠ ವೈಯಕ್ತಿಕ ರನ್ ಆಗಿದೆ. ಮೆಲ್ಬೋರ್ನ್​ ಸ್ಟಾರ್ಸ್​ ತಂಡ 20 ಓವರ್​ನಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 219 ರನ್ ಕಲೆಹಾಕಿತು.

ಸದ್ಯ ಈ ಗುರಿ ಬೆನ್ನಟ್ಟಿರುವ ಸಿಡ್ನಿ ಸಿಕ್ಸರ್ಸ್​ ತಂಡ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಮಾರ್ಕಸ್ ಸ್ಟೊಯಿನಿಸ್ ಕಳೆದ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಪರ ಆಡಿದ್ದರು. ಆದರೆ, ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಇವರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಈ ಬಾರಿಯ ಹರಾಜಿಗೂ ಮುನ್ನ ಆರ್​ಸಿಬಿ ಇವರನ್ನು ತಂಡದಿಂದ ಕೈಬಿಟ್ಟಿತ್ತು.

2020 ಐಪಿಎಲ್​​ನ ಹರಾಜು ಪ್ರಕ್ರಿಯೆಯಲ್ಲಿ ಸ್ಟೊಯಿನಿಸ್ ಅವರು ಡೆಲ್ಲಿ ಕ್ಯಾಪಿಲಟ್ಸ್​ ತಂಡದ ಪಾಲಾದರು. ಇವರ ಮೂಲಬೆಲೆ ಒಂದು ಕೋಟಿ ಇದ್ದರೂ ರಾಜಸ್ಥಾನ್ ರಾಯಲ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ನಡುವೆ ಕಠಿಣ ಪೈಪೋಟಿ ನಡೆದು, ಅಂತಿಮವಾಗಿ ಸ್ಟೊಯಿನಿಸ್ ಅವರನ್ನು 4 ಕೋಟಿ 80 ಲಕ್ಷಕ್ಕೆ ಡೆಲ್ಲಿ ತನ್ನ ತೆಕ್ಕೆಗೆ ಸೇರಿಸಿಕೊಂಡಿತು.Published by: Vinay Bhat
First published: January 12, 2020, 4:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories