HOME » NEWS » Sports » CRICKET BBL 2020 21 DAN CHRISTIAN SMASHES SECOND FASTEST 50 IN BIG BASH HISTORY ZP

BBL 2020: ಬಿಗ್ ಬ್ಯಾಷ್ ಲೀಗ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ದಾಖಲೆ ಬರೆದ ಮಾಜಿ RCB ಆಟಗಾರ

ಇನ್ನು 2016 ರಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಪರ ಆಡಿದ್ದ ಸಿಕ್ಸರ್​ಗಳ ಸರದಾರ ಕ್ರಿಸ್ ಗೇಲ್ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿರುವುದು ಬಿಗ್ ಬ್ಯಾಷ್ ಲೀಗ್​ನ ಅತೀ ವೇಗದ ಹಾಫ್ ಸೆಂಚುರಿಯಾಗಿದೆ.

news18-kannada
Updated:December 21, 2020, 9:58 PM IST
BBL 2020: ಬಿಗ್ ಬ್ಯಾಷ್ ಲೀಗ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ದಾಖಲೆ ಬರೆದ ಮಾಜಿ RCB ಆಟಗಾರ
Dan Christian
  • Share this:
2020ರ ಬಿಗ್ ಬ್ಯಾಷ್ ಲೀಗ್ ಭರ್ಜರಿಯಾಗಿ ಜರುಗುತ್ತಿದೆ. ಭಾನುವಾರ ನಡೆದ ಅಡಿಲೇಡ್ ಸ್ಟ್ರೈಕರ್ಸ್ ಹಾಗೂ ಸಿಡ್ನಿ ಸಿಕ್ಸರ್ಸ್ ನಡುವಣ ಪಂದ್ಯವು ಸ್ಪೋಟಕ ಬ್ಯಾಟಿಂಗ್​ಗೆ ಸಾಕ್ಷಿಯಾಯಿತು. ಟಾಸ್ ಗೆದ್ದ ಅಡಿಲೇಡ್ ತಂಡದ ನಾಯಕ ಅಲೆಕ್ಸ್ ಕ್ಯಾರಿ ಬೌಲಿಂಗ್ ಆಯ್ಕೆ ಮಾಡಿದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ನಡೆಸಿದ ಸ್ಟ್ರೈಕರ್ಸ್ ತಂಡ ಮೊದಲ 6 ಓವರ್​ಗಳಲ್ಲಿ ಕೇವಲ 29 ರನ್​ ನೀಡಿ 2 ವಿಕೆಟ್ ಉರುಳಿಸಿದ್ದರು. ಅಲ್ಲದೆ ಮೊದಲ ಹತ್ತು ಓವರ್​ಗಳಲ್ಲಿ ಸಿಡ್ನಿ ಸಿಕ್ಸರ್ಸ್​ ಬ್ಯಾಟ್ಸ್​ಮನ್​ಗಳು ರನ್​ಗಾಗಿ ಪರದಾಡುವಂತೆ ಮಾಡಿದ್ದರು.

ಆದರೆ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡ್ಯಾನಿಯಲ್ ಕ್ರಿಶ್ಚಿಯನ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಅಡಿಲೇಡ್ ಬೌಲರುಗಳ ವಿರುದ್ಧ ತಿರುಗಿ ಬಿದ್ದ ಕ್ರಿಶ್ಚಿಯನ್ ಫೋರ್ ಸಿಕ್ಸರ್​ಗಳ ಸುರಿಮಳೆಗೈದರು. ಪರಿಣಾಮ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಬಿಗ್ ಬ್ಯಾಷ್ ಲೀಗ್​ ಇತಿಹಾಸದ 2ನೇ ಅತೀ ವೇಗದ ಶತಕ ಸಿಡಿಸಿದ ದಾಖಲೆಯನ್ನು ಬರೆದರು.

ಇನ್ನು ತಮ್ಮ ಸ್ಪೋಟಕ ಇನಿಂಗ್ಸ್​ನಲ್ಲಿ ಡ್ಯಾನಿಯಲ್ ಬ್ಯಾಟ್​ಬಿಂದ ಸಿಡಿದ್ದದ್ದು 5 ಭರ್ಜರಿ ಸಿಕ್ಸರ್ ಹಾಗೂ ಬೌಂಡರಿಗಳು. ಈ ಬಿರುಸಿನ ಇನಿಂಗ್ಸ್ ನೆರವಿನಿಂದ ಸಿಡ್ನಿ ಸಿಕ್ಸರ್ಸ್​ ನಿಗದಿತ 20 ಓವರ್​ಗಳಲ್ಲಿ 177 ರನ್​ ಕಲೆಹಾಕಿತು. ಸಾಧಾರಣ ಮೊತ್ತದ ನಿರೀಕ್ಷೆಯಲ್ಲಿದ್ದ ಅಡಿಲೇಡ್​ ತಂಡಕ್ಕೆ ಡ್ಯಾನಿಯಲ್ ಕ್ರಿಶ್ಚಿಯನ್ ಬೃಹತ್ ಮೊತ್ತ ಟಾರ್ಗೆಟ್ ನೀಡಿದ್ದರು.

ಈ ಕಠಿಣ ಸವಾಲನ್ನು ಬೆನ್ನತ್ತಿದ್ದ ಅಡಿಲೇಡ್​ ಸ್ಟ್ರೈಕರ್ಸ್​ 137 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ 38 ರನ್​ಗಳ ಸೋಲನುಭವಿಸಿತು. ಭರ್ಜರಿ ಬ್ಯಾಟಿಂಗ್ ನಡೆಸಿದ ಡ್ಯಾನಿಯಲ್ ಕ್ರಿಶ್ಚಿಯನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.ಇನ್ನು 2016 ರಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಪರ ಆಡಿದ್ದ ಸಿಕ್ಸರ್​ಗಳ ಸರದಾರ ಕ್ರಿಸ್ ಗೇಲ್ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿರುವುದು ಬಿಗ್ ಬ್ಯಾಷ್ ಲೀಗ್​ನ ಅತೀ ವೇಗದ ಹಾಫ್ ಸೆಂಚುರಿಯಾಗಿದೆ. ಅಂದಹಾಗೆ ಡ್ಯಾನಿಯಲ್ ಕ್ರಿಶ್ಚಿಯನ್ ಐಪಿಎಲ್​ನಲ್ಲೂ ಕಾಣಿಸಿಕೊಂಡಿದ್ದಾರೆ. ಅದರಲ್ಲೂ 2013 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಕಳೆದ ಸೀಸನ್​ನಲ್ಲಿ ಹರಾಜಿನಲ್ಲಿದ್ದರೂ ಆಸ್ಟ್ರೇಲಿಯಾ ಆಲ್​ರೌಂಡರ್​ನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಮುಂದಾಗಿರಲಿಲ್ಲ.
Published by: zahir
First published: December 21, 2020, 9:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories