ಬೆಂಗಳೂರು (ಜ. 21): ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್ ಸದ್ಯ ಅನಿರ್ಧಿಷ್ಟಾವಾಧಿಗೆ ತಂಡದಿಂದ ಹೊರಗುಳಿದಿದ್ದಾರೆ. ಈ ನಡುವೆ ಬಿಗ್ಬ್ಯಾಷ್ನಲ್ಲಿ ಬ್ಯಾಟ್ ಬೀಸುತ್ತಿರುವ ಮ್ಯಾಕ್ಸ್ವೆಲ್ ಅಬ್ಬರಿಸುತ್ತಿದ್ದಾರೆ.
ಆದರೆ, ನಿನ್ನೆ ನಡೆದ ಪಂದ್ಯದಲ್ಲಿ ಮ್ಯಾಕ್ಸ್ವೆಲ್ ದೊಡ್ಡ ಅಪಾಯದಿಂದ ಪಾರಾದರು.
ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕನಾಗಿರುವ ಮ್ಯಾಕ್ಸ್ವೆಲ್ ಪ್ರತಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದ್ರೆ ನಿನ್ನೆಯ ಸಿಡ್ನಿ ಸಿಕ್ಸರ್ಸ್ ವಿರುದ್ಧದ ಪಂದ್ಯದಲ್ಲಿ ಮಾತ್ರ ವೈಫಲ್ಯ ಅನುಭವಿಸಿದರು. ಜೊತೆಗೆ ತಂಡವೂ ಸೋಲುಂಡಿತು.
![WATCH: Glenn Maxwell goes down after nasty beamer from Ben Dwarshuis in Big Bash League]()
ಗ್ಲೆನ್ ಮ್ಯಾಕ್ಸ್ವೆಲ್
Hardik Pandya: ದ್ರಾವಿಡ್ ಟೀಂ ಸೇರಿದ ಹಾರ್ದಿಕ್; ಪುನಶ್ಚೇತನ ಕ್ರಮಕ್ಕಾಗಿ ಇಂದು ಬೆಂಗಳೂರಿಗೆ ಪಾಂಡ್ಯ
ಮಳೆಯ ಕಾರಣ ಪಂದ್ಯವನ್ನು 14 ಓವರ್ಗೆ ಸೀಮಿತಗೊಳಿಲಾಯಿತು. ಈ ನಡುವೆ ಮ್ಯಾಕ್ಸ್ವೆಲ್ ಬ್ಯಾಟಿಂಗ್ ಮಾಡುವಾಗ ಬೆನ್ ದ್ವಾರ್ಶ್ಸ್ ಬೌಲಿಂಗ್ನಲ್ಲಿ ದೊಡ್ಡ ಅಪಾಯದಿಂದ ಪಾರಾದರು.
141.5 ಕಿ.ಮಿ ವೇಗದಲ್ಲಿ ಬೆನ್ ಅವರು ಎಸೆದ ಬೌಲಿಂಗ್ ನೇರವಾಗಿ ಮ್ಯಾಕ್ಸ್ವೆಲ್ ಅವರ ಭುಜದ ಭಾಗಕ್ಕೆ ಬಡಿಯಿತು. ಅಪಾಯಕಾರಿ ಬಾಲ್ ಅನ್ನು ಎದುರಿಸುವಲ್ಲಿ ವಿಫಲವಾದ ಮ್ಯಾಕ್ಸ್ವೆಲ್ ಅಲ್ಲಿಯೇ ಕುಸಿದು ಬಿದ್ದರು. ದೊಡ್ಡ ಮಟ್ಟದ ಪೆಟ್ಟು ಆಗದಿರುವುದನ್ನು ಕಂಡು ಒಂದು ಕ್ಷಣ ಆಶ್ಚರ್ಯಚಕಿತರಾಗಿ ನೋಡಿದರು. ಬಳಿಕ ಬೌಲರ್ ಬಂದು ಮ್ಯಾಕ್ಸ್ವೆಲ್ ಬಳಿ ಕ್ಷಮೆ ಯಾಚಿಸಿದರು.
ಆ ಬಳಿಕ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲದ ಮ್ಯಾಕ್ಸ್ವೆಲ್ 13 ಎಸೆತಗಳಲ್ಲಿ 12 ರನ್ ಗಳಿಸಿ ಔಟ್ ಆದರು. ಮಾರ್ಕಸ್ ಸ್ಟಾಯಿನಿಸ್ 37 ಎಸೆತಗಳಲ್ಲಿ 62 ರನ್ ಬಾರಿಸಿದರಾದರು. ಸಿಡ್ನಿ ಸಿಕ್ಸರ್ಸ್ ನೀಡಿದ್ದ 144 ರನ್ಗಳ ಟಾರ್ಗೆಟ್ ಬೆನ್ನಟ್ಟುವಲ್ಲಿ ಎಡವಿದ ಮೆಲ್ಬೋರ್ನ್ ತಂಡ 14 ಓವರ್ನಲ್ಲಿ 125 ರನ್ ಗಳಿಸಿ ಸೋಲು ಕಂಡಿತು.
ಚಿನ್ನಸ್ವಾಮಿಯಲ್ಲಿ ನಡೆದ ಈ ಕ್ಷಣವನ್ನು ಕಂಡರೆ ಧೋನಿ ಹೆಮ್ಮೆ ಪಡುತ್ತಾರೆ; ಅಷ್ಟಕ್ಕು ನಡೆದಿದ್ದೇನು ನೀವೇ ನೋಡಿ
ಸಿಡ್ನಿ ತಂಡದ ಪರ ನಾಯಕ ಮೊಸಿಸ್ ಹೆನ್ರಿಕ್ಸ್ ಕೇವಲ 31 ಎಸೆತಗಳಲ್ಲಿ 2 ಬೌಂಡರಿ, 8 ಸಿಕ್ಸರ್ ಸಿಡಿಸಿ 72 ರನ್ ಚಚ್ಚಿದರು. ಜೇಮ್ಸ್ ವಿನ್ಸ್ 41 ರನ್ ಗಳಿಸಿದರು. ಸಿಡ್ನಿ 14 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 143 ರನ್ ಬಾರಿಸಿತು. 21 ರನ್ಗಳ ಗೆಲುವಿನೊಂದಿಗೆ ಸಿಡ್ನಿ ತಂಡ ಒಟ್ಟು 15 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ಮೆಲ್ಬೋರ್ನ್ ತಂಡ 20 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ