ಕ್ರೀಡೆ

  • associate partner

ತನ್ನ ಮೊದಲ ಓವರ್​ನಲ್ಲೇ 6,6,4,4,W; ಆರ್​ಸಿಬಿ ಬೌಲರ್​​ನ ಭರ್ಜರಿ ಕಮ್​​ಬ್ಯಾಕ್ ವಿಡಿಯೋ ಇಲ್ಲಿದೆ ನೋಡಿ!

ತಾಳ್ಮೆ ಕಳೆದುಕೊಳ್ಳದ ಸ್ಟೈನ್ ಅಂತಿಮ ಎಸೆತವನ್ನು ಕೊಂಚ ವಿಭಿನ್ನವಾಗಿ ಎಸೆದರು. ಈ ವೇಳೆ ಮತ್ತೊಂದು ಸಿಕ್ಸ್ ಸಿಡಿಸಲೋಗಿ ಬ್ಯಾಟ್ಸ್​ಮನ್​ ಕ್ಯಾಚ್ ನೀಡಿ ನಿರ್ಗಮಿಸಿದರು.

Vinay Bhat | news18-kannada
Updated:December 28, 2019, 9:51 AM IST
ತನ್ನ ಮೊದಲ ಓವರ್​ನಲ್ಲೇ 6,6,4,4,W; ಆರ್​ಸಿಬಿ ಬೌಲರ್​​ನ ಭರ್ಜರಿ ಕಮ್​​ಬ್ಯಾಕ್ ವಿಡಿಯೋ ಇಲ್ಲಿದೆ ನೋಡಿ!
ಪ್ರತಿ ಬಾರಿ ಕೈಕೊಡುತ್ತಿದ್ದ ಬೌಲಿಂಗ್ ವಿಭಾಗ ಈ ಬಾರಿ ಬಲಿಷ್ಠವಾಗಿದೆ. ಡೇಲ್ ಸ್ಟೈನ್, ಕೇನ್ ರಿಚರ್ಡಸನ್, ಕ್ರಿಸ್ ಮೊರೀಸ್ ಉತ್ತಮ ಫಾರ್ಮ್ನಲ್ಲಿದ್ದಾರೆ.
  • Share this:
ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್ ಬೌಲರ್ ಡೇಲ್ ಸ್ಟೈನ್  ಆಸ್ಟ್ರೇಲಿಯಾದಲ್ಲಿ ಸಾಗುತ್ತಿರುವ ಬಿಗ್​ಬ್ಯಾಷ್ ಟಿ-20 ಲೀಗ್​ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಈ ಮೂಲಕ ಐಪಿಎಲ್ ಆರಂಭಕ್ಕೂ ಮುನ್ನ ತನ್ನ ಸಾಮರ್ಥ್ಯ ತೋರ್ಪಡಿಸುತ್ತಿದ್ದಾರೆ.

ಮೆಲ್ಬೋರ್ನ್​ ಸ್ಟಾರ್ಸ್​​ ತಂಡದ ಪರ ಆಡುತ್ತಿರುವ ಸ್ಟೈನ್​ ನಿನ್ನೆ ನಡೆದ ಅಡಿಲೇಡ್ ಸ್ಟ್ರೈಕರ್ಸ್​​ ವಿರುದ್ಧದ ಪಂದ್ಯದಲ್ಲಿ ಎದುರಾಳಿಯ ಪ್ರಮುಖ ವಿಕೆಟ್ ಪಡೆದರು. ಪಂದ್ಯದ ಎರಡನೇ ಓವರ್​​ ಹಾಗೂ ತನ್ನ ಮೊದಲ ಓವರ್​​ನಲ್ಲೇ ಸ್ಟೇನ್ 20 ರನ್ ನೀಡಿದರು.

ಆದರೆ, ಕೊನೆಯ ಎಸೆತದಲ್ಲಿ ಈ 20 ರನ್ ಚಚ್ಚಿದ ಸ್ಫೋಟಕ ಬ್ಯಾಟ್ಸ್​ಮನ್​ ಜಾಕ್ ವೀಥರಾಲ್ಡ್ ಅವರನ್ನು ಪೆವಿಲಿಯನ್​ಗೆ ಅಟ್ಟುವಲ್ಲಿ ಯಶಸ್ವಿಯಾದರು. ಸ್ಟೇಲ್ ಓವರ್​​​ನ ಮೊದಲ ಎಸೆತ ಡಾಲ್ ಆದರೆ, ಮುಂದಿನ ನಾಲ್ಕು ಎಸೆತದಲ್ಲಿ 6,6,4,4 ಸ್ಕೋರ್ ಬಂದಿದೆ.

Danish Kaneria: ಕನೇರಿಯಾಗೆ ಅವಮಾನ; ಇದು ಪಾಕಿಸ್ತಾನದ ಅಸಲೀ ಮುಖ ಎಂದ ಗಂಭೀರ್

ಇಷ್ಟಾದರೂ ತಾಳ್ಮೆ ಕಳೆದುಕೊಳ್ಳದ ಸ್ಟೈನ್ ಅಂತಿಮ ಎಸೆತವನ್ನು ಕೊಂಚ ವಿಭಿನ್ನವಾಗಿ ಎಸೆದರು. ಈ ವೇಳೆ ಮತ್ತೊಂದು ಸಿಕ್ಸ್ ಸಿಡಿಸಲೋಗಿ ಬ್ಯಾಟ್ಸ್​ಮನ್​ ಕ್ಯಾಚ್ ನೀಡಿ ನಿರ್ಗಮಿಸಿದರು.

 ಸದ್ಯ ಸ್ಟೈನ್​ ಮೊದಲ ಓವರ್​ನ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಈ ರೋಚಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಡಿಲೇಡ್ ತಂಡ 20 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಬಾರಿಸಿತು.

Ranji Trophy: ಕುಸಿದ ಕರ್ನಾಟಕಕ್ಕೆ ನಾಯರ್-ಪಡಿಕ್ಕಲ್ ಆಸರೆ; ಮುನ್ನಡೆಯತ್ತ ರಾಜ್ಯ ತಂಡ!

ಟಾರ್ಗೆಟ್ ಬೆನ್ನಟ್ಟಿದ ಮೆಲ್ಬೋರ್ನ್​ ತಂಡ ಅಂತಿಮ ಹಂತದಲ್ಲಿ ಎಡವಿತು. 20 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು ಮೆಲ್ಬೋರ್ನ್​ 170 ರನ್ ಗಳಿಸಲಷ್ಟೆ ಶಕ್ತವಾಗಿ ಸೋತಿತು. ಅಡಿಲೇಡ್ 4 ರನ್​ಗಳ ರೋಚಕ ಜಯ ತನ್ನದಾಗಿಸಿತು.

Published by: Vinay Bhat
First published: December 28, 2019, 9:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading