ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನ 35ನೇ ಪಂದ್ಯವು ವಿಚಿತ್ರ ಕ್ಯಾಚ್ವೊಂದಕ್ಕೆ ಸಾಕ್ಷಿಯಾಯಿತು. ಸಿಡ್ನಿ ಸಿಕ್ಸರ್ ಹಾಗೂ ಬ್ರಿಸ್ಬೇನ್ ಹೀಟ್ ನಡುವಣ ಪಂದ್ಯದಲ್ಲಿ ಟಾಸ್ ಗೆದ್ದ ಸಿಡ್ನಿ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಬ್ರಿಸ್ಬೇನ್ ತಂಡಕ್ಕೆ ಕ್ರಿಸ್ ಲಿನ್ ಸ್ಪೋಟಕ ಆರಂಭ ಒದಗಿಸಿದ್ದರು.
ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದೆಡೆ ಸಿಕ್ಸ್-ಫೋರ್ಗಳ ಸುರಿಮಳೆ ಸುರಿಸಿದ ಕ್ರಿಸ್ ಲಿನ್ ಅರ್ಧಶತಕ ಬಾರಿಸಿದರು. ಆದರೆ ಮತ್ಯಾವ ಆಟಗಾರರಿಂದಲೂ ಉತ್ತಮ ಜೊತೆಯಾಟ ಮೂಡಿಬರದ ಕಾರಣ ಅಂತಿಮವಾಗಿ ಬ್ರಿಸ್ಬೇನ್ ಹೀಟ್ 20 ಓವರ್ನಲ್ಲಿ 148 ರನ್ ಕಲೆಹಾಕಿತು.
ಈ ನಡುವೆ ಬ್ರಿಸ್ಬೇನ್ ಬ್ಯಾಟ್ಸ್ಮನ್ ಜಿಮ್ಮಿ ಪಿಯರ್ಸನ್ ಔಟ್ ಆಗಿದ್ದು ಎಲ್ಲರ ಗಮನ ಸೆಳೆಯಿತು. 15ನೇ ಓವರ್ನಲ್ಲಿ ಜಾಕ್ ಬಾಲ್ ಎಸೆತವನ್ನು ಜಿಮ್ಮಿ ಕವರ್ನತ್ತ ಬಾರಿಸಿದರು. ಚೆಂಡು ನೇರವಾಗಿ ಅಲ್ಲೇ ಫೀಲ್ಡಿಂಗ್ ನಿಂತಿದ್ದ ಜಾಕ್ಸನ್ ಬರ್ಡ್ನತ್ತ ಸಾಗಿತು. ಆದರೆ ಬಾಲ್ ಬಂದ ವೇಗದಲ್ಲಿ ಕ್ಯಾಚ್ ಹಿಡಿಯಲು ತಡಬಡಿಸಿದರು.
ಚೆಂಡು ಜಾಕ್ಸನ್ ಬರ್ಡ್ ಎದೆ ಭಾಗಕ್ಕೆ ತಾಗಿ ಇನ್ನೇನು ನೆಲಕ್ಕುರುಳಿತು, ಅನ್ನುವಷ್ಟರಲ್ಲಿ ಬಾಲ್ನ್ನು ಕಾಲುಗಳ ನಡುವೆ ಬಂಧಿಸಿದರು. ಅತ್ತ ಪ್ರೇಕ್ಷಕರು ಕ್ಯಾಚ್ ಡ್ರಾಪ್ ಅಂದುಕೊಂಡರೆ, ಕಾಲುಗಳ ಮಧ್ಯೆಯಿಂದ ಚೆಂಡನ್ನು ಎತ್ತಿ ಜಾಕ್ಸನ್ ಬರ್ಡ್ ಔಟ್ ಎಂದರು. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಹೀಗೂ ಕೂಡ ಕ್ಯಾಚ್ ಹಿಡಿಯಬಹುದು ಎಂದು ಸೋಷಿಯಲ್ ಮೀಡಿಯಾದಲ್ಲಿ ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ನೀಡಿದ 148 ರನ್ಗಳ ಟಾರ್ಗೆಟ್ನ್ನು ಸಿಡ್ನಿ ಸಿಕ್ಸರ್ ಕೊನೆಯ ಎಸೆತದವರೆಗೆ ಕೊಂಡೊಯ್ದು 3 ವಿಕೆಟ್ಗಳ ರೋಚಕ ಜಯ ಸಾಧಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ