ಹಲವು ಬಾರಿ ಫ್ಲಾಪ್, ಅದರೂ ತಂಡದಲ್ಲಿ ಖಾಯಂ ಸ್ಥಾನ; ಪಂತ್ ಆಯ್ಕೆಯ ರಹಸ್ಯ ಬಹಿರಂಗ

ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ರಾಹುಲ್​, ಕೀಪಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಮಿಂಚಿದರು. ರಾಹುಲ್​ ಅದ್ಭುತ ಪ್ರದರ್ಶನ ಕಾರಣದಿಂದಾಗಿ, ಈ ವರ್ಷಾರಂಭ ನ್ಯೂಜಿಲೆಂಡ್​ ಪ್ರವಾಸದಲ್ಲಿ ಪಂತ್ ಬೆಂಚ್​ ಕಾಯಬೇಕಾಯಿತು - ವಿಕ್ರಮ್ ರಾಥೋರ್

news18-kannada
Updated:June 29, 2020, 9:29 AM IST
ಹಲವು ಬಾರಿ ಫ್ಲಾಪ್, ಅದರೂ ತಂಡದಲ್ಲಿ ಖಾಯಂ ಸ್ಥಾನ; ಪಂತ್ ಆಯ್ಕೆಯ ರಹಸ್ಯ ಬಹಿರಂಗ
ರಿಷಭ್ ಪಂತ್ - ವಿರಾಟ್ ಕೊಹ್ಲಿ.
  • Share this:
ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್- ಬ್ಯಾಟ್ಸ್​ಮನ್​ ರಿಷಭ್ ಪಂತ್ ಒಬ್ಬ ಪ್ರತಿಭಾನ್ವಿತ ಆಟಗಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. 22 ವರ್ಷ ಪ್ರಾಯದ ಪಂತ್ ಅವರು, ಧೋನಿ ಸ್ಥಾನವನ್ನು ತುಂಬಿ ಟೀಂ ಇಂಡಿಯಾದಲ್ಲಿ ಮಿಂಚಲಿದ್ದಾರೆ ಹೇಳಲಾಗಿತ್ತು. ಆದರೆ, ಪಂತ್ ಈ ಸ್ಥಾನವನ್ನು ಬಲ ಪಡಿಸುವಲ್ಲಿ ವಿಫಲರಾದರು.

ಅನೇಕ ಪಂದ್ಯಗಳಲ್ಲಿ ಪಂತ್​ಗೆ ಅವಕಾಶ ನೀಡಲಾಯಿತು. ಆದರೆ, ನಿರೀಕ್ಷೆಗೆ ತಕ್ಕ ಪ್ರದರ್ಶನ ಮೂಡಿಬರಲಿಲ್ಲ. ಆದರೂ ಪದೇಪದೇ ವೈಫಲ್ಯ ಅನುಭವಿಸುತ್ತಿದ್ದರು ಪಂತ್​ಗೆ ಮತ್ತೆ ಅವಕಾಶ ನೀಡಲಾಯಿತು. ನಂತರ ಆಯ್ಕೆ ಮಂಡಳಿ ಬೇರೆ ದಾರಿ ಇಲ್ಲದೆ ಪಂತ್ ಬದಲು ಕೆ. ಎಲ್ ರಾಹುಲ್ ಅವರಿಗೆ ವಿಕೆಟ್ ಕೀಪರ್ ಜವಾಬ್ದಾರಿ ನೀಡಿದರು.

ವಿದ್ಯಾರ್ಥಿಗಳಿದ್ದಾಗ ವಿರಾಟ್‌, ಧೋನಿ ಗಳಿಸಿದ ಅಂಕಗಳೆಷ್ಟು ಗೊತ್ತಾ?

ಸದ್ಯ ಪಂತ್ ವೈಫಲ್ಯ ಅನುಭವಿಸುತ್ತಿದ್ದರೂ ಅವರಿಗೆ ಏಕೆ ಅವಕಾಶ ನೀಡಲಾಗುತ್ತಿತ್ತು ಎಂಬ ಬಗ್ಗೆ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಕಾರಣ ನೀಡಿದ್ದಾರೆ. 'ಧೋನಿ ತಂಡದಿಂದ ವಿರಾಮ ತೆಗೆದುಕೊಂಡ ಬಳಿಕ ಆ ಸ್ಥಾನವನ್ನು ಪಂತ್​ಗೆ ನೀಡಲಾಯಿತು. ಆದರೆ, ಅವರು ಇದರಲ್ಲಿ ಯಶಸ್ಸು ಸಾಧಿಸಲಿಲ್ಲ. ಹೀಗಾಗಿ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ರಾಹುಲ್​, ಕೀಪಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಮಿಂಚಿದರು. ರಾಹುಲ್​ ಅದ್ಭುತ ಪ್ರದರ್ಶನ ಕಾರಣದಿಂದಾಗಿ, ಈ ವರ್ಷಾರಂಭ ನ್ಯೂಜಿಲೆಂಡ್​ ಪ್ರವಾಸದಲ್ಲಿ ಪಂತ್ ಬೆಂಚ್​ ಕಾಯಬೇಕಾಯಿತು.'

'ರಾಹುಲ್​ಗೆ ಹೋಲಿಸಿದರೆ, ಟೀಂ ಮ್ಯಾನೇಜ್​ಮೆಂಟ್​ ಪಂತ್​ಗೆ ಹೆಚ್ಚು ಬೆಂಬಲ ನೀಡುತ್ತೆ. ರಿಷಬ್ ಕಳೆದ ವರ್ಷ ಸತತ ವೈಫಲ್ಯ ಅನುಭವಿಸಿದ. ತಂಡ ಹಾಗೂ ಅಭಿಮಾನಿಗಳು ತನ್ನ ಮೇಲೆ ಇಟ್ಟಿದ್ದ ನಿರೀಕ್ಷೆಗಳನ್ನ ತಲುಪಲಿಲ್ಲ. ಆದರೂ, ಟೀಂ​ ಮ್ಯಾನೇಜ್​ಮೆಂಟ್​ ರಿಷಬ್​ಗೆ ಬೆನ್ನೆಲುಬಾಗಿ ನಿಂತಿದೆ. ರಿಷಬ್​ ಒಬ್ಬ ಸ್ಪೆಷಲ್​ ಆಟಗಾರ ಎಂಬುವುದೆ ಇದಕ್ಕೆ ಕಾರಣ.'ಟೀಂ ಇಂಡಿಯಾದಿಂದ ಅರ್ಧಕ್ಕೆ ಕೈ ಬಿಟ್ಟ ವಿಚಾರ; 37 ವರ್ಷಗಳಾದರೂ ನೋವು ಮರೆತಿಲ್ಲ ಕನ್ನಡಿಗ ಗುಂಡಪ್ಪ ವಿಶ್ವನಾಥ್'ಪಂತ್ ಒಮ್ಮೆ ಲಯಕಂಡುಕೊಂಡರೆ, ಆತನನ್ನ ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ಸತತ ವೈಫಲ್ಯಗಳಿಂದ ರಿಷಬ್​ ಒತ್ತಡದಲ್ಲಿದ್ದಾನೆ. ಇಂಥ ಒತ್ತಡಗಳು, ಟೀಕೆಗಳೇ ಸಾಮಾನ್ಯ ಆಟಗಾರನನ್ನ ಶ್ರೇಷ್ಠ ಆಟಗಾರನಾಗಿ ಬದಲಿಸುತ್ತವೆ' ಎಂಬುದು ರಾಥೋರ್ ಮಾತು.
First published:June 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading