News18 India World Cup 2019

2019 ವಿಶ್ವಕಪ್​​ನಲ್ಲಿ ಏಕೈಕ ಕನ್ನಡಿಗ; ಮೊದಲ ಬಾರಿ ವಿಶ್ವಕಪ್​​ನಲ್ಲಿ ಮಿಂಚಲು ರಾಹುಲ್ ರೆಡಿ!

ICC World Cup 2019: ಇದೇ ಮೇ 30 ರಿಂದ ವಿಶ್ವಕಪ್ ಮಹಾಸಂಗ್ರಾಮಕ್ಕೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ದ. ಆಫ್ರಿಕಾ ತಂಡಗಳು ಮುಖಾಮುಖಿ ಆಗಲಿದ್ದು, ಜೂನ್ 5 ರಂದು ಭಾರತ ತನ್ನ ಮೊದಲ ಪಂದ್ಯವನ್ನು ದ. ಆಫ್ರಿಕಾ ವಿರುದ್ಧ ಆಡಲಿದೆ.

Vinay Bhat | news18
Updated:May 2, 2019, 3:18 PM IST
2019 ವಿಶ್ವಕಪ್​​ನಲ್ಲಿ ಏಕೈಕ ಕನ್ನಡಿಗ; ಮೊದಲ ಬಾರಿ ವಿಶ್ವಕಪ್​​ನಲ್ಲಿ ಮಿಂಚಲು ರಾಹುಲ್ ರೆಡಿ!
ಕೆ ಎಲ್ ರಾಹುಲ್
Vinay Bhat | news18
Updated: May 2, 2019, 3:18 PM IST
ಬೆಂಗಳೂರು (ಏ. 15): ಕ್ರಿಕೆಟ್ ಜಗತ್ತು ಕಾತುರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ 2019 ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದೆ. ಮುಂಬೈಯಲ್ಲಿ ನಡೆದ ಸಭೆಯಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್ ನೇತೃತ್ವದಲ್ಲಿ ನಾಯಕ ವಿರಾಟ್ ಕೊಹ್ಲಿ ಉಪಸ್ಥಿತಿಯಲ್ಲಿ 15 ಆಟಗಾರರ ಹೆಸರನ್ನು ಆಯ್ಕೆ ಮಾಡಲಾಗಿದೆ.

ವಿಶ್ವಕಪ್ನಲ್ಲಿ ಆಡುವ 15 ಭಾರತೀಯ ಆಟಗಾರರು: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, ವಿಜಯ್ ಶಂಕರ್, ಎಂ.ಎಸ್​​​​ ಧೋನಿ (ವಿಕೆಟ್ ಕೀಪರ್), ಕೇದಾರ್ ಜಾಧವ್, ದಿನೇಶ್ ಕಾರ್ತೀಕ್​​, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ.

ವಿಶ್ವಕಪ್ ತಂಡದಲ್ಲಿ ಎರಡನೇ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ಸ್ಥಾನ ಪಡೆದುಕೊಂಡಿದ್ದು, ಉದಯೋನ್ಮುಖ ಆಟಗಾರ ರಿಷಭ್ ಪಂತ್​​​ರನ್ನು ಕೈಬಿಡಲಾಗಿದೆ. ಅಲ್ಲದೆ 4ನೇ ಕ್ರಮಾಂಕದ ಸಮಸ್ಯೆಗೆ ಅಂಬಟಿ ರಾಯುಡು ಸೂಕ್ತ ಎಂದು ಹೇಳಲಾಗಿತ್ತು. ಆದರೆ, ಅಚ್ಚರಿ ಎಂಬಂತೆ ರಾಯುಡುರನ್ನ ಬಿಟ್ಟು ವಿಜಯ್ ಶಂಕರ್ ಮಧ್ಯಮ ಕ್ರಮಾಂಕಕ್ಕೆ ಫಿಕ್ಸ್​ ಆಗಿದ್ದಾರೆ.

ಇದನ್ನೂ ಓದಿ: ICC World Cup 2019: ವಿಶ್ವಕಪ್​​ಗೆ ಟೀಂ ಇಂಡಿಯಾ ಪ್ರಕಟ; 15 ಆಟಗಾರರ ಹೆಸರು ಇಲ್ಲಿದೆ ನೋಡಿ!

ರಿಷಭ್ ಪಂತ್​ಗೆ ಹೋಲಿಸಿದರೆ ಕಾರ್ತಿಕ್​ಗೆ ಹೆಚ್ಚು ಅನುಭವವಿದ್ದು, ಮ್ಯಾಚ್ ಫಿನಿಶಿಂಗ್ ಆಟಗಾರ ಕೂಡ ಹೌದು. ಇತ್ತ ಶಂಕರ್​​ ಬ್ಯಾಟಿಂಗ್​ ಜೊತೆ ವೇಗದ ಬೌಲಿಂಗ್ ಕೂಡ ಮಾಡಲಬಲ್ಲವರಾಗಿದ್ದು ಫೀಲ್ಡಿಂಗ್​ನಲ್ಲೂ ಮಿಂಚಬಲ್ಲರು. ಹೀಗಾಗಿ ಆಯ್ಕೆ ಸಮಿತಿ ಬಲಿಷ್ಠ ಆಟಗಾರರನ್ನೇ ಇಂಗ್ಲೆಂಡ್​ಗೆ ಕಳುಹಿಸಲು ತಯಾರು ಮಾಡಿದೆ.

ಕನ್ನಡಿಗನಿಗೆ ಮೊದಲ ವಿಶ್ವಕಪ್:
Loading...

ಇನ್ನು ಈ ಬಾರಿಯ ವಿಶ್ವಕಪ್ ತಂಡದಲ್ಲಿ ಕೆ ಎಲ್ ರಾಹುಲ್ ಸ್ಥಾನ ಪಡೆದುಕೊಂಡಿದ್ದು, ಕರ್ನಾಟಕದ ಏಕೈಕ ಕನ್ನಡಿಗ ಮಿಂಚಲು ತಯಾರಾಗಿದ್ದಾರೆ. ಕಳೆದ ಬಾರಿಯ ವಿಶ್ವಕಪ್ ತಂಡದಲ್ಲಿ ಕರ್ನಾಟದಕ ಯಾವುದೇ ಆಟಗಾರರು ತಂಡದಲ್ಲಿರಲಿಲ್ಲ. ಆದರೆ ಈ ಬಾರಿ ಈ ಕೊರಗನ್ನು ರಾಹುಲ್ ನೀಗಿಸಿದ್ದಾರೆ.  ರಿಸರ್ವ್ ಓಪನರ್ ಆಗಿ ರಾಹುಲ್​​ಗೆ ಅವಕಾಶ ಸಿಕ್ಕಿದೆ. ಸದ್ಯ ಉತ್ತಮ ಫಾರ್ಮ್​ನಲ್ಲಿರುವ ರಾಹುಲ್ ವಿಶ್ವಕಪ್​ ವರೆಗೂ ಇದೇ ಲಯದಲ್ಲಿ ಬ್ಯಾಟ್ ಬೀಸಿದರೆ, ಆಡುವ ಬಳಗದಲ್ಲೂ ಅವಕಾಶ ಸಿಗಲಿದೆ. ರಾಹುಲ್ ಹೆಚ್ಚಿನ ಏಕದಿನ ಪಂದ್ಯಗಳನ್ನು ಆಡಿಲ್ಲವಾದರು ಆಡಿರುವ ಕಡಿಮೆ ಪಂದ್ಯದಲ್ಲೇ ಭರ್ಜರಿ ಪ್ರದರ್ಶನ ತೋರಿ ಆಯ್ಕೆದಾರರ ಮನ ಗೆದ್ದಿದ್ದಾರೆ. ರಾಹುಲ್​ರನ್ನು ರಿಸರ್ವ್​​ ಓಪನರ್ ಆಗಿ ಆಯ್ಕೆ ಮಾಡಲಾಗಿದೆ ಆದರು 4ನೇ ಕ್ರಮಾಂಕದಲ್ಲೂ ಕಣಕ್ಕಿಳಿದು ಬ್ಯಾಟ್ ಬೀಸಬಲ್ಲರು.

ಭಾರತ ಕ್ರಿಕೆಟ್ ತಂಡ ಈ ವರೆಗೆ ಒಟ್ಟು ಎರಡು ಬಾರಿ ವಿಶ್ವಕಪ್ ಗೆದ್ದು ಬೀಗಿದೆ. 1983 ರಲ್ಲಿ ಕಪಿಲ್ ದೇವ್ ಹಾಗೂ 2011 ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ವಿಶ್ವಕಪ್​ಗೆ ಮುತ್ತಿಕ್ಕಿತ್ತು. ಸದ್ಯ ಮೂರನೇ ಬಾರಿ ಭಾರತ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಲು ಭಾರತ ಬಲಿಷ್ಠ ತಂಡದಿಂದ ರೆಡಿಯಾಗಿದೆ.

ಇದೇ ಮೇ 30 ರಿಂದ ವಿಶ್ವಕಪ್ ಮಹಾಸಂಗ್ರಾಮಕ್ಕೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ದ. ಆಫ್ರಿಕಾ ತಂಡಗಳು ಮುಖಾಮುಖಿ ಆಗಲಿದ್ದು, ಜೂನ್ 5 ರಂದು ಭಾರತ ತನ್ನ ಮೊದಲ ಪಂದ್ಯವನ್ನು ದ. ಆಫ್ರಿಕಾ ವಿರುದ್ಧ ಆಡಲಿದೆ.
First published:April 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...