ಸಾವು ಯಾರಿಗೆ, ಹೇಗೆ, ಯಾವಾಗ ಬರುತ್ತೆ ಗೊತ್ತಿಲ್ಲ. ಇದೇ ರೀತಿಯಲ್ಲೇ ಕ್ರಿಕೆಟ್ ಮೈದಾನದಲ್ಲೇ ವ್ಯಕ್ತಿಯೊಬ್ಬರು ಹೃದಯಾಘಾತವಾಗಿ ಮೃತಪಟ್ಟಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಆಗುತ್ತಿದೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಪುಣೆಯ ಜುನ್ನಾರ್ ಎಂಬ ಪ್ರದೇಶದಲ್ಲಿ. ಅಲ್ಲಿನ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯ ವೇಳೆ ನಾನ್ ಸ್ಟ್ರೈಕ್‌ನಲ್ಲಿದ್ದ ಬ್ಯಾಟ್ಸ್‌ಮನ್ ಇದ್ದಕ್ಕಿದ್ದ ಹಾಗೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಈ ವಿಡಿಯೋದಲ್ಲಿ ಸ್ಟ್ರೈಕ್‌ನಲ್ಲಿದ್ದ ಆಟಗಾರ ಈ ಘಟನೆಗೂ ಮುಂಚಿನ ಎಸೆತವನ್ನು ಬಾರಿಸಲು ವಿಫಲನಾಗಿದ್ದನು. ಆಗ ನಾನ್ ಸ್ಟ್ರೈಕ್‌ನಲ್ಲಿ ನಿಂತಿದ್ದ ಬ್ಯಾಟ್ಸ್‌ಮನ್ ಮಹೇಶ್ ಅಲಿಯಾಸ್ ಬಾಬು ನಲವಾಡೆ, ಅಂಪೈರ್ ಬಳಿ ಎಷ್ಟು ಎಸೆತಗಳು ಬಾಕಿಯಿವೆ ಎಂದು ಕೇಳಿದ್ದಾರೆ. ಅಲ್ಲದೆ ಸ್ಟ್ರೈಕ್‌ನಲ್ಲಿದ್ದ ಆಟಗಾರನಿಗೆ ಮೂರು ಎಸೆತಗಳಿವೆ ಎಂದು ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಕ್ರೀಸ್‌ನಲ್ಲಿ ಕುಳಿತ ಆಟಗಾರ, ಮರುಕ್ಷಣವೇ ಕುಸಿದು ಬಿದಿದ್ದಾರೆ.
Cricketer dies of heart attack during live cricket match at Pune pic.twitter.com/yyWDnLkII8
— Khel Khiladi (@KhelKhiladi1) February 18, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ