318 ರನ್ ಚಚ್ಚಿದ ಜಿಂಬಾಬ್ವೆ; ಬಾಂಗ್ಲಾ ವಿರುದ್ಧದ ರೋಚಕ ಪಂದ್ಯದಲ್ಲಿ ಗೆದ್ದಿದ್ದು ಯಾರು ಗೊತ್ತಾ?

ಅಂತಿಮ ಹಂತದಲ್ಲಿ ಸ್ಫೋಟಕ ಆಟವಾಡಿದ ಡೊನಾಲ್ಡ್ ತಿರಿಪಾನೊ ಪಂದ್ಯವನ್ನು ರೋಚಕ ಘಟ್ಟಕ್ಕೆ ತಂದಿಟ್ಟರು. ಕೊನೆಯ ಓವರ್​ನಲ್ಲಿ ಜಿಂಬಾಬ್ವೆ ಗೆಲುವಿಗೆ 20 ರನ್​ಗಳ ಅವಶ್ಯಕತೆಯಿತ್ತು.

ಜಿಂಬಾಬ್ವೆ ತಂಡದ ಆಟಗಾರ.

ಜಿಂಬಾಬ್ವೆ ತಂಡದ ಆಟಗಾರ.

  • Share this:
ಬಾಂಗ್ಲಾದೇಶ ಪ್ರವಾಸದಲ್ಲಿರುವ ಜಿಂಬಾಬ್ವೆ ತಂಡ ಏಕದಿನ ಸರಣಿ ಆಡುತ್ತಿದೆ. ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ್ದ ಬೃಹತ್ ಟಾರ್ಗೆಟ್ ಅನ್ನು ಬೆನ್ನಟ್ಟಿದ ಜಿಂಬಾಬ್ವೆ ಕೊನೆಯ ಎಸೆತದಲ್ಲಿ ಗೆಲ್ಲಲು 6 ರನ್ ಬೇಕಿದ್ದಾಗ ಸಿಕ್ಸರ್ ಬಾರಿಸುವಲ್ಲಿ ವಿಫಲವಾಗಿ ಸೋಲು ಕಂಡಿತು. 4 ರನ್​ಗಳ ರೋಚಕ ಜಯದೊಂದಿಗೆ ಬಾಂಗ್ಲಾ ಹುಲಿಗಳು ಎರಡು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಸರಣಿ ವಶಪಡಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡಿತಾದರೂ ತಮೀಮ್ ಇಕ್ಬಾಲ್ ಸ್ಫೋಟಕ ಆಟವಾದರು. ಅನುಭವಿ ಮುಷ್ಫೀಕರ್ ರಹೀಮ್(55) ಜೊತೆಗೂಡಿ 87 ರನ್​ಗಳ ಜೊತೆಯಾಟ ಆಡಿದ ಇಕ್ಬಾಲ್ ಅಮೋಘ ಬ್ಯಾಟಿಂಗ್ ನಡೆಸಿದರು.

 



18 ಸಿಕ್ಸರ್, 189 ರನ್: ಪಾಂಡ್ಯ ಆರ್ಭಟಕ್ಕೆ ಬೌಲರುಗಳು ದಂಗು..!

ಶತಕ ಸಿಡಿಸಿ ಅಬ್ಬರಿಸಿದ ತಮೀಮ್ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಚೊಚ್ಚಲ ಬಾರಿಗೆ 150 ರನ್ ಪೂರೈಸಿದರು. 136 ಎಸೆತಗಳಲ್ಲಿ 20 ಬೌಂಡರಿ, 3 ಸಿಕ್ಸರ್ ಸಿಡಿಸಿದ ಇಕ್ಬಾಲ್ 158 ರನ್ ಗಳಿಸಿ ನಿರ್ಗಮಿಸಿದರು. ಮೊಹಮ್ಮದುಲ್ಲ 41 ಹಾಗೂ ಮೊಹಮ್ಮದ್ ಮಿಥುನ್ ಕೇವಲ 18 ಎಸೆತಗಳಲ್ಲಿ ಅಜೇಯ 32 ರನ್ ಚಚ್ಚಿದರು.

ಬಾಂಗ್ಲಾದೇಶ 50 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿತು. ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಜಿಂಬಾಬ್ವೆ ಗೆಲುವಿಗಾಗಿ ಎಲ್ಲಿಲ್ಲದ ಹೋರಾಟ ನಡೆಸಿತು. ನಾಯಕ ಸೀನ್ ವಿಲಯಮ್ಸನ್ ಸೇರಿ ಪ್ರಮುಖ ಇಬ್ಬರು ಬ್ಯಾಟ್ಸ್​ಮನ್​ಗಳನ್ನು ಜಿಂಬಾಬ್ವೆ ಆರಂಭದಲ್ಲೇ ಕಳೆದುಕೊಂಡಿತು.

ಹೀಗಿರುವಾಗ ತಿನಾಶೆ ಕಮುನ್ಹುಕಂವೆ ಎಚ್ಚರಿಕೆಯ ಆಟಕ್ಕೆ ಮುಂದಾದರೆ, ವೆಸ್ಲೆ ಮಾಧೆವರೆ ಇವರಿಗೆ ಉತ್ತಮ ಸಾಥ್ ನೀಡಿದರು. ಇಬ್ಬರೂ ಅರ್ಧಶತಕ ಗಳಿಸಿದರು. ಸಿಖಂದರ್ ರಾಜಾ 57 ಎಸೆತಗಳಲ್ಲಿ 66 ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಬಿಸಿಸಿಐ ಆಯ್ಕೆ ಸಮಿತಿ ನೂತನ ಅಧ್ಯಕ್ಷರಾಗಿ ಕನ್ನಡಿಗ ಸುನೀಲ್ ಜೋಶಿ ಆಯ್ಕೆ

ಅಂತಿಮ ಹಂತದಲ್ಲಿ ಸ್ಫೋಟಕ ಆಟವಾಡಿದ ಡೊನಾಲ್ಡ್ ತಿರಿಪಾನೊ ಪಂದ್ಯವನ್ನು ರೋಚಕ ಘಟ್ಟಕ್ಕೆ ತಂದಿಟ್ಟರು. ಕೊನೆಯ ಓವರ್​ನಲ್ಲಿ ಜಿಂಬಾಬ್ವೆ ಗೆಲುವಿಗೆ 20 ರನ್​ಗಳ ಅವಶ್ಯಕತೆಯಿತ್ತು. ತಿರಿಪಾನೊ 3 ಹಾಗೂ 4ನೇ ಎಸೆತದಲ್ಲಿ ಚೆಂಡನ್ನು ಸಿಕ್ಸ್​ಗೆ ಅಟ್ಟಿದರು. ಕೊನೆಯ ಎಸೆತದಲ್ಲಿ 6 ರನ್​ಗಳು ಬೇಕಾಗಿತ್ತು.

ಆದರೆ, ಅಂತಿಮ ಎಸೆತದಲ್ಲಿ 1 ರನ್ ಗಳಿಸಲಷ್ಟೆ ಶಕ್ತವಾದ ಜಿಂಬಾಬ್ವೆ ಸೋಲು ಕಾಣಬೇಕಾಯಿತು. ತಿರಿಪಾನೊ ಕೇವಲ 28 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್ ಬಾರಿಸಿ ಅಜೇಯ 55 ರನ್ ಗಳಿಸಿ ಕೊನೆಯ ಬಾಲ್ ವರೆಗೆ ಹೋರಾಡಿದರಾದರೂ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲರಾದರು!

First published: