Cricket World Cup 2019: ಬಾಂಗ್ಲಾ-ಶ್ರೀಲಂಕಾ ಪಂದ್ಯ ಮಳೆಗೆ ಆಹುತಿ; ಉಭಯ ತಂಡಗಳಿಗೆ ತಲಾ ಒಂದು ಅಂಕ

ICC Cricket World Cup 2019: ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಗಿದ್ದು, ಶ್ರೀಲಂಕಾ ಒಟ್ಟು 4 ಅಂಕದೊಂದಿಗೆ ಐದನೇ ಸ್ಥಾನಕ್ಕೇರಿದರೆ, ಬಾಂಗ್ಲಾ ಮೂರು ಅಂಕದೊಂದಿಗೆ ಏಳನೇ ಸ್ಥಾನದಲ್ಲಿದೆ.

Vinay Bhat | news18
Updated:June 11, 2019, 7:19 PM IST
Cricket World Cup 2019: ಬಾಂಗ್ಲಾ-ಶ್ರೀಲಂಕಾ ಪಂದ್ಯ ಮಳೆಗೆ ಆಹುತಿ; ಉಭಯ ತಂಡಗಳಿಗೆ ತಲಾ ಒಂದು ಅಂಕ
ಸಾಂದರ್ಭಿಕ ಚಿತ್ರ
  • News18
  • Last Updated: June 11, 2019, 7:19 PM IST
  • Share this:
ಬೆಂಗಳೂರು (ಜೂ. 11): ವಿಶ್ವಕಪ್​ನಲ್ಲಿ ಇಂದು ನಡೆಯಬೇಕಿದ್ದ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಣ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಈ ಬಾರಿಯ ವಿಶ್ವಕಪ್​ನಲ್ಲಿ ಮಳೆಯಿಂದಾಗಿ ಫಲಿತಾಂಶ ಇಲ್ಲದೆ ಅಂತ್ಯಕಂಡ ಮೂರನೇ ಪಂದ್ಯ ಇದಾಗಿದೆ.

ಬ್ರಿಸ್ಟೋಲ್​​ನ ಕೌಂಟಿ ಮೈದಾನದನಲ್ಲಿ ನಡೆಯಬೇಕಿದ್ದ ಈ ಪಂದ್ಯ ಬಾಂಗ್ಲಾದೇಶ ಹಾಗೂ ಶ್ರೀಲಂಕಾ, ಉಭಯ ತಂಡಗಳಿಗೆ ಮುಖ್ಯವಾಗಿತ್ತು. ಆದರೆ, ಟಾಸ್ ಪ್ರಕ್ರಿಯೆಗೂ ಅವಕಾಶ ನೀಡದ ವರುಣ ಬಿಂಬಿಡದೆ ಕಾಡಿದ್ದರಿಂದ ಕೊನೆಗೆ ರದ್ದು ಮಾಡಲಾಯಿತು.

 ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಗಿದ್ದು, ಶ್ರೀಲಂಕಾ ಒಟ್ಟು 4 ಅಂಕದೊಂದಿಗೆ ಐದನೇ ಸ್ಥಾನಕ್ಕೇರಿದರೆ, ಬಾಂಗ್ಲಾ ಮೂರು ಅಂಕದೊಂದಿಗೆ ಏಳನೇ ಸ್ಥಾನದಲ್ಲಿದೆ.

ಧವನ್ ಸ್ಥಾನಕ್ಕೆ ಪಂತ್-ಕಾರ್ತಿಕ್-ಶಂಕರ್ ಅಲ್ಲ; ಲಂಡನ್ ಫ್ಲೈಟ್ ಏರಲಿದ್ದಾನೆ ಈ ಆಟಗಾರ?

ಲಂಕಾ ಹಾಗೂ ಬಾಂಗ್ಲಾ ತಂಡ ಈ ಬಾರಿಯ ವಿಶ್ವಕಪ್​ನಲ್ಲಿ ಸೋಲು-ಗೆಲುವಿನ ಎರಡೂ ಮುಖಗಳನ್ನು ಕಂಡಿದೆ. ಬಾಂಗ್ಲಾದೇಶ ಎರಡು ಪಂದ್ಯ ಸೋತರೆ, ಇತ್ತ ಶ್ರೀಲಂಕಾ ಒಂದು ಪಂದ್ಯದಲ್ಲಿ ಸೋಲುಂಡಿತ್ತು. ಇಂದಿನ ಪಂದ್ಯ ಮಳೆಗೆ ಆಹುತಿಯಾಗಿದೆ.
First published:June 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ