Bangabandhu T20: ಅದು ನನ್ನ ಕ್ಯಾಚ್...ಸಹ ಆಟಗಾರನ ಮೇಲೆ ಹಲ್ಲೆಗೆ ಮುಂದಾದ ಮುಷ್ಫಿಕುರ್ ರಹೀಮ್

ಈ ಕ್ಯಾಚ್ ಇಡೀ ಪಂದ್ಯದ ಚಿತ್ರಣವನ್ನು ಬದಲಿಸಿತು. ಆಫಿಫ್ (55) ಔಟಾಗುವುದರೊಂದಿಗೆ ಪಂದ್ಯವು ಢಾಕಾ ಕಡೆಗೆ ವಾಲಿತು. ಅಂತಿಮವಾಗಿ ಬರಿಶಾಲ್ ತಂಡವು 141 ರನ್​ಗಳಿಸಲಷ್ಟೇ ಶಕ್ತರಾದರು. ಇತ್ತ ಬೆಕ್ಸಿಕೊ ಢಾಕಾ 9 ರನ್​ಗಳಿಂದ ರೋಚಕ ಜಯ ಸಾಧಿಸಿತು.

Bangabandhu T20 Cup

Bangabandhu T20 Cup

 • Share this:
  ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಮುಷ್ಫಿಕುರ್ ರಹೀಮ್ ಸಹ ಆಟಗಾರನ ಮೇಲೆ ಹಲ್ಲೆಗೆ ಮುಂದಾದ ಘಟನೆ ನಡೆದಿದೆ. ಬಾಂಗ್ಲಾದೇಶದಲ್ಲಿ ನಡೆದ ಬಂಗಬಂಧು ಟಿ20 ಕಪ್ ಟೂರ್ನಿ ನಡೆಯುತ್ತಿದ್ದು, ಸೋಮವಾರ ಬೆಕ್ಸಿಕೊ ಢಾಕಾ ಹಾಗೂ ಫಾರ್ಚೂನ್ ಬರಿಶಾಲ್ ತಂಡಗಳ ನಡುವೆ ರೋಚಕ ಕಾದಾಟ ಜರುಗಿತ್ತು. ಈ ಪಂದ್ಯ ಎರಡೂ ತಂಡಗಳಿಗೆ ನಿರ್ಣಾಯಕ. ಈಗಾಗಲೇ ಪ್ಲೇ-ಆಫ್ ತಲುಪಿದ ಉಭಯ ತಂಡಗಳು ಫೈನಲ್ ತಲುಪಲು ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು.

  ಮೊದಲು ಬ್ಯಾಟ್ ಮಾಡಿದ ಢಾಕಾ ನಾಯಕ ಮುಷ್ಫಿಕುರ್ ರಹೀಮ್ ಅವರ ಸ್ಪೋಟಕ 43 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 150 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ತಮೀಮ್ ಇಕ್ಬಾಲ್ ನಾಯಕತ್ವದ ಫಾರ್ಚೂನ್ ಬರಿಶಾಲ್ ಉತ್ತಮ ಆರಂಭ ಪಡೆದಿತ್ತು. ಆಫಿಫ್ ಹುಸೈನ್ ಅವರ ಅರ್ಧಶತಕದೊಂದಿಗೆ ಇನ್ನೇನು ಬರಿಶಾಲ್ ಪಂದ್ಯ ಗೆಲ್ಲಲಿದೆ ಅಂದುಕೊಂಡಾಗ, ಢಾಕಾ ಬೌಲರುಗಳು ಪರಾಕ್ರಮ ಮೆರೆದಿದ್ದರು.

  ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಢಾಕಾ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅಂತಿಮ 19 ಎಸೆತಗಳಲ್ಲಿ 45 ರನ್ ಅಗತ್ಯವಿತ್ತು. ಏತನ್ಮಧ್ಯೆ, 17 ಓವರ್‌ಗಳಲ್ಲಿ ಆಫಿಫ್ ಹೊಡೆದ ಚೆಂಡು ಮುಗಿಲೆತ್ತರಕ್ಕೆ ಹಾರಿತು. ಚೆಂಡನ್ನು ಹಿಡಿಯಲು ವಿಕೆಟ್ ಕೀಪರ್ ಮುಷ್ಪಿಕುರ್ ರಹೀಮ್ ಮುಂದಾದ್ರೆ, ಮತ್ತೊಂದು ಕಡೆಯಿಂದ ಫೀಲ್ಡರ್ ನಾಸುಮ್ ಅಹ್ಮದ್ ಕೂಡ ಕ್ಯಾಚ್ ಹಿಡಿಯಲು ಧಾವಿಸಿದ್ದರು.

  ಇಬ್ಬರ ಮುಖಾಮುಖಿಯ ನಡುವೆ ಮುಷ್ಷಿಕುರ್ ಚೆಂಡನ್ನು ತಮ್ಮ ಗ್ಲೌಸ್​ನಲ್ಲಿ ಬಂಧಿಸಿದರು. ಅಷ್ಟೇ ಅಲ್ಲ, ಕ್ಯಾಚ್ ಹಿಡಿಯುವಾಗ ಗುದ್ದಿದ ನಾಸುಮ್ ವಿರುದ್ದ ತಾಳ್ಮೆ ಕಳೆದುಕೊಂಡು ಕೈ ಬೀಸಿ ಹಲ್ಲೆಗೆ ಮುಂದಾದರು. ಅದೃಷ್ಟವಶಾತ್ ಕ್ಷಣಾರ್ಧದಲ್ಲಿ ಕೋಪ ನಿಯಂತ್ರಿಸಿದ್ದರಿಂದ ದೊಡ್ಡ ಅವಾಂತರದಿಂದ ಮುಷ್ಪಿಕುರ್ ರಹೀಮ್ ಪಾರಾದರು. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.


  ಅಂದಹಾಗೆ ಈ ಕ್ಯಾಚ್ ಇಡೀ ಪಂದ್ಯದ ಚಿತ್ರಣವನ್ನು ಬದಲಿಸಿತು. ಆಫಿಫ್ (55) ಔಟಾಗುವುದರೊಂದಿಗೆ ಪಂದ್ಯವು ಢಾಕಾ ಕಡೆಗೆ ವಾಲಿತು. ಅಂತಿಮವಾಗಿ ಬರಿಶಾಲ್ ತಂಡವು 141 ರನ್​ಗಳಿಸಲಷ್ಟೇ ಶಕ್ತರಾದರು. ಇತ್ತ ಬೆಕ್ಸಿಕೊ ಢಾಕಾ 9 ರನ್​ಗಳಿಂದ ರೋಚಕ ಜಯ ಸಾಧಿಸಿತು.

  ಇದನ್ನೂ ಓದಿ: ಅಚ್ಚರಿಯ ಆಯ್ಕೆ: ಆಕಾಶ್ ಚೋಪ್ರಾ ಹೆಸರಿಸಿದ ದಶಕದ ಟಿ20 ತಂಡದಲ್ಲಿ ಯಾರಿಗೆಲ್ಲಾ ಸ್ಥಾನ?
  Published by:zahir
  First published: