ಭಾರತದ ಒಲಿಂಪಿಕ್ ಮಟ್ಟದ ಕುಸ್ತಿಪಟು ಭಜರಂಗ್ ಪುನಿಯಾ, ತನ್ನ ತಾಯಿ “ಎಕ್ಸರ್ಸೈಸ್ ಬೈಕ್”ನಲ್ಲಿ ವ್ಯಾಯಾಮ ಮಾಡುತ್ತಿರುವ ವಿಡಿಯೋವೊಂದನ್ನು ಶುಕ್ರವಾರ ಹಂಚಿಕೊಂಡಿದ್ದಾರೆ. ಪುನಿಯಾ ಅವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿರುವ ಆ ಖಾತೆಯಲ್ಲಿ, ಅವರ ತಾಯಿ ಓಂ ಪ್ಯಾರಿ ಪುನಿಯಾ ಅವರು ಸಲ್ವಾರ್ ಕಮೀಜ್ ಧರಿಸಿಕೊಂಡು, “ಎಕ್ಸರ್ಸೈಸ್ ಬೈಕ್” ತುಳಿಯುತ್ತಾ ಕ್ಯಾಲೋರಿಗಳನ್ನು ಕರಗಿಸುತ್ತಿರುವುದನ್ನು ಕಾಣಬಹುದು. ಕೊರೋನಾ ವೈರಸ್ನ ಎರಡನೇ ಅಲೆಯಿಂದ ಭಾರತ ತತ್ತರಿಸಿರುವುದರಿಂದ, ಎಲ್ಲರೂ ಮನೆಯಲ್ಲಿ ಇರಿ, ಸುರಕ್ಷಿತವಾಗಿರಿ ಮತ್ತು ಈ ನೀರಸ ವಾತಾವರಣದಲ್ಲಿ ಕೊಂಚ ನಿರಾಳವಾಗಿರುವುದಕ್ಕೋಸ್ಕರ ವ್ಯಾಯಾಮ ಮಾಡಿ ಎಂದು ಪುನಿಯಾ ಅವರ ತಾಯಿ ಭಾರತೀಯರನ್ನು ಕೇಳಿಕೊಂಡಿದ್ದಾರೆ.
ಕಾಮನ್ವೆಲ್ತ್ ಕ್ರೀಡೆಯಲ್ಲಿ (ಸಿಡಬ್ಲ್ಯುಜಿ) ಚಿನ್ನದ ಪದಕ ಪಡೆದಿರುವ ಭಜರಂಗ್ ಪುನಿಯಾ, ಮುಂಬರುವ ಟೋಕಿಯೋ ಒಲಂಪಿಕ್ಸ್ಗಾಗಿ ಫಿಟ್ನೆಸ್ ಅನ್ನು ಮರಳಿ ಪಡೆಯಲು ಕಠಿಣ ತಾಲೀಮು ಮಾಡುವ ವಿಡಿಯೋವನ್ನು ಈ ಹಿಂದೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಮೊಣಕೈ ನೋವಿನ ಕಾರಣದಿಂದ, 2021 ಏಪ್ರಿಲ್ನಲ್ಲಿ ಏಷಿಯನ್ ವ್ರೆಸ್ಟ್ಲಿಂಗ್ ಚಾಂಪಿಯನ್ಶಿಪ್ನಿಂದ ಭಜರಂಗ್ ಪುನಿಯಾ ಹಿಂದೆ ಸರಿಯಬೇಕಾಗಿ ಬಂದಿತ್ತು. ಅವರು ಅದರಿಂದ ಹೊರಬಂದ ನಂತರ , ಆ ಪಂದ್ಯದ ಚಾಂಪಿಯನ್ ಕಿರೀಟ ಜಪಾನ್ನ ಟಕುಟೋ ಒಟೋಗುರೋ ಅವರ ಮುಡಿಗೇರಿತ್ತು. ಫೈನಲ್ಸ್ನಲ್ಲಿ ಒಟೊಗೋರೋ ಅವರನ್ನು ಎದುರಿಸುವ ಮುನ್ನ ಪಂದ್ಯದಲ್ಲಿ ಅವರು ಸಾಗಿ ಬಂದಿದ್ದ ದಾರಿ ಸುಲಭದಲ್ಲ, ಮುಖ್ಯ ಪಂದ್ಯಾಟಕ್ಕೆ ಅರ್ಹತೆ ಪಡೆಯಲು, ಒಬ್ಬರಾದ ನಂತರ ಮತ್ತೊಬ್ಬರು ವ್ರೆಸ್ಟ್ಲರ್ಗಳನ್ನ ಪುನಿಯಾ ಸೋಲಿಸಿದ್ದರು. ಅವರು ಎಷ್ಟು ನಿಪುಣತೆಯಿಂದ ಆಡಿದ್ದರೆಂದರೆ, ನಾಕೌಟ್ ಸುತ್ತಿನಲ್ಲಿ ಒಂದೇ ಒಂದು ಅಂಕವನ್ನು ಕೂಡ ಬಿಡಲಿಲ್ಲ.
ಕ್ವಾಟರ್ ಫೈನಲ್ಸ್ನಲ್ಲಿ ಅವರು ದಕ್ಷಿಣ ಕೊರಿಯಾದ ಯಾಂಗ್ಸಿಯಾಕ್ ಜಿಯಾಂಗ್ ಅವರನ್ನು 3-0 ಅಂಕಗಳ ಅಂತರದಲ್ಲಿ ಸೋಲಿಸಿದ್ದರೆ, ನಂಬರ್ 1 ರ್ಯಾಂಕ್ನ ಆಟಗಾರ ಮಂಗೋಲಿಯಾದ ಬಿಲ್ಗೂನ್ ಸರ್ಮಾಂಡಕ್ ಅವರನ್ನು ಕೊನೆಯ ನಾಲ್ಕನೇ ಅವಧಿಯಲ್ಲಿ 7-0 ಅಂಕಗಳ ಅಂತರದಲ್ಲಿ ಸೋಲಿಸಿದ್ದರು. ಇದೀಗ ಭಜರಂಗ್ ಪುನಿಯಾ ಅವರ ವ್ಯಾಯಾಮದ ವಿಡಿಯೋಗಳನ್ನು ನೋಡಿದಾಗ, ಅವರು ತಮ್ಮ ಮೊಣಕೈ ಗಾಯದ ನೋವಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ ಎಂಬುದು ಕಂಡು ಬರುತ್ತಿದೆ. ಈಗ ಪುನಿಯಾ ಅವರು ಟೋಕಿಯೋ ಗೇಮ್ಸ್ಗಾಗಿ ತಯಾರಿ ನಡೆಸುತ್ತಿದ್ದಾರೆ.
घर पे रहें, कसरत करें और सुरक्षित रहें....... ये मेरी मां बोल रही है ❤️#maa #Loveyou #lockdown2021 #homeworkslave pic.twitter.com/RAU1u2oZaQ
— Bajrang Punia 🇮🇳 (@BajrangPunia) May 21, 2021
ಭಜರಂಗ್ ಪುನಿಯಾ ಮಾತ್ರವಲ್ಲದೆ, ರವಿ ದಹಿಯಾ (57 ಕೆಜಿ ಫ್ರೀ ಸ್ಟೈಲ್), ದೀಪಕ್ ಪುನಿಯಾ (86 ಕೆಜಿ ಫ್ರೀ ಸ್ಟೈಲ್) ಮತ್ತು ಸುಮಿತ್ ಮಲ್ಲಿಕ್ (125 ಕೆಜಿ ಫ್ರೀ ಸ್ಟೈಲ್) ಕೂಡ ಟೋಕಿಯೋ ಒಲಂಪಿಕ್ಸ್ ಪುರುಷರ ವ್ರೆಸ್ಟ್ಲಿಂಗ್ ಪಂದ್ಯಾವಳಿಯಲ್ಲಿ ಆಡಲಿದ್ದಾರೆ.
ವಿನೆಶ್ ಪೋಗಟ್ (53 ಕೆಜಿ ಫ್ರೀಸ್ಟೈಲ್), ಅನ್ಶು ಮಲ್ಲಿಕ್ (57 ಕೆಜಿ ಫ್ರೀಸ್ಟೈಲ್), ಸೋನಮ್ ಮಲ್ಲಿಕ್ (62 ಕೆಜಿ ಫ್ರೀಸ್ಟೈಲ್), ಮತ್ತು ಸೀಮಾ ಬಿಸ್ಲಾ (50 ಕೆಜಿ ಫ್ರೀಸ್ಟೈಲ್) ಒಲಂಪಿಕ್ಸ್ ಮಹಿಳೆಯರ ವ್ರೆಸ್ಟ್ಲಿಂಗ್ ಪಂದ್ಯಾಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ