ಬಾಬರ್ ಆಜಮ್ 15-20 ಕೋಟಿ ಬೆಲೆಗೆ IPLನಲ್ಲಿ ಹರಾಜಾಗ್ತಾರೆ ಎಂದ Shoaib Akhtar

ಐಪಿಎಲ್‌ನಲ್ಲಿ ಪಾಕಿಸ್ತಾನದ ಆಟಗಾರರು ಭಾಗವಹಿಸಲು ಮರಳಿ ಅವಕಾಶ ದೊರೆತದ್ದೇ ಆದಲ್ಲಿ ಬಾಬರ್ ಆಜಮ್ (Babar Azam) ಹರಾಜಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯಬಹುದು ಎಂದು ಅಖ್ತರ್ ನಂಬಿದ್ದಾಗಿ ತಿಳಿಸಿದ್ದಾರೆ.

ಆಜಮ್ ಮತ್ತು ಅಖ್ತರ್

ಆಜಮ್ ಮತ್ತು ಅಖ್ತರ್

 • Share this:
  ಇಂಡಿಯನ್ ಪ್ರೀಮಿಯರ್ ಲೀಗ್ (IPL Auction) ಹರಾಜಿನಲ್ಲಿ ಪ್ರಸ್ತುತ ಪಾಕಿಸ್ತಾನದ ನಾಯಕ ಬಾಬರ್ ಅಜಮ್ 15-20 ಕೋಟಿಗಳಿಗೆ ಹರಾಜಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ (Shoaib Akhtar) ಅಭಿಪ್ರಾಯ ಪಟ್ಟಿದ್ದಾರೆ. ಈವರೆಗೆ ಪೂರ್ಣಗೊಂಡ  14  ಐಪಿಎಲ್   ಸೀಸನ್‌ಗಳಲ್ಲಿ  2008ರಲ್ಲಿ ನಡೆದ ಉದ್ಘಾಟನಾ ಆವೃತ್ತಿಯಲ್ಲಿ ಮಾತ್ರ ಪಾಕಿಸ್ತಾನದ ಕ್ರಿಕೆಟ್ ಆಟಗಾರರು IPLನ ಭಾಗವಾಗಿದ್ದರು. ಐಪಿಎಲ್‌ನಲ್ಲಿ ಪಾಕಿಸ್ತಾನದ ಆಟಗಾರರು ಭಾಗವಹಿಸಲು ಮರಳಿ ಅವಕಾಶ ದೊರೆತದ್ದೇ ಆದಲ್ಲಿ ಬಾಬರ್ ಆಜಮ್ (Babar Azam) ಹರಾಜಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯಬಹುದು ಎಂದು ಅಖ್ತರ್ ನಂಬಿದ್ದಾಗಿ ತಿಳಿಸಿದ್ದಾರೆ.

  ಸ್ಪೋರ್ಟ್ಸ್‌ಕೀಡಾ ಸಂಸ್ಥೆಗೆ ಅವರು ನೀಡಿರುವ ಸಂದರ್ಶನದ ಸಂದರ್ಭದಲ್ಲಿ ಐಪಿಎಲ್‌ನಲ್ಲಿ ಆಡಲು ಅನುಮತಿಸಿದರೆ ಪಾಕಿಸ್ತಾನದ ಯಾವ ಆಟಗಾರ ಹೆಚ್ಚಿನ ಬಿಡ್ ಅನ್ನು ಆಕರ್ಷಿಸುತ್ತಾರೆ ಎಂಬ ಪ್ರಶ್ನೆಗೆ ಪ್ರತ್ಯುತ್ತರವಾಗಿ ಶೋಯೆಬ್ ಅಖ್ತರ್ ತಮಾಷೆಯಾಗಿ ಹೀಗೆ ಹೇಳಿದರು.

  ಪಾಕಿಸ್ತಾನಿ ಆಟಗಾರಿಗೆ ಏಕಿಲ್ಲ ಅವಕಾಶ?
  ಮಾಜಿ ಬಲಗೈ ವೇಗಿ ಶೋಯೇಬ್ ಅಖ್ತರ್ ಕ್ರಿಕೆಟ್ ಲೋಕದ ಉತ್ತಮ ವೇಗಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಉತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರೆಂದು ಹೆಸರುವಾಸಿಯಾಗಿದ್ದಾರೆ. ಗಡಿ ಉದ್ವಿಗ್ನತೆಯಿಂದಾಗಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಬಾಂಧವ್ಯ ಹದಗೆಟ್ಟಿರುವ ಕಾರಣದಿಂದ ಐಪಿಎಲ್ ತನ್ನ ಎರಡನೇ ಋತುವಿನಿಂದ ಪಾಕಿಸ್ತಾನದ ಆಟಗಾರರಿಗೆ (Pakistan Player) ಅವಕಾಶ ನೀಡಿಲ್ಲ.

  ವಿರಾಟ್ ಕೊಹ್ಲಿ ಜೊತೆ ಬಾಬರ್ ಆಜಮ್ ಆಟ ನೋಡುವಾಸೆ!
  ಹರಾಜಿನಲ್ಲಿ, ಬಾಬರ್ 15-20 ಕೋಟಿಯವರೆಗೂ ಹೋಗಲಿದ್ದಾರೆ ಎಂದು ಎಂದು ಅಖ್ತರ್ ಹೇಳಿದರು ಐಪಿಎಲ್‌ನಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಪಾಕಿಸ್ತಾನದ ದಿಗ್ಗಜರು ಇನ್ನಿಂಗ್ಸ್ ತೆರೆಯುವುದನ್ನು ನೋಡುವುದು ಒಂದು ಅತ್ಯುತ್ತಮ ದೃಶ್ಯ ಎಂದು ನನಗೆ ಅನಿಸುತ್ತದೆ ಎಂದು ಸಹ ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

  ಇದನ್ನೂ ಓದಿ: RCB ಐಪಿಎಲ್ ಗೆದ್ದಾಗ ನೆನಪಾಗೋದು ಕುಚಿಕು ಗೆಳೆಯ! Kohli ಮನದಾಳ ಮಾತು

  ಐಪಿಎಲ್‌ನಲ್ಲಿ ಬಾಬರ್ ಅಜಮ್ ಮತ್ತು ವಿರಾಟ್ ಕೊಹ್ಲಿ ಒಟ್ಟಿಗೆ ಆಡುವುದನ್ನು ನೋಡಲು ತುಂಬಾ ಸಂತೋಷವಾಗುತ್ತದೆ. ಒಂದು ದಿನ ಅವರು ಐಪಿಎಲ್‌ನಲ್ಲಿ ಇನ್ನಿಂಗ್ಸ್ ತೆರೆದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಐಪಿಎಲ್‌ನ ಉದ್ಘಾಟನಾ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಪ್ರತಿನಿಧಿಸಿದ್ದ ಅಖ್ತರ್ ಈಮುನ್ನವೂ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದರು.

  IPL 2008 ರಲ್ಲಿ ಭಾಗವಹಿಸಿದ್ದ ಪಾಕಿಸ್ತಾನಿ ಆಟಗಾರರ ಇವರೇ!
  ಐಪಿಎಲ್ 2008 ಪಾಕಿಸ್ತಾನದ ಆಟಗಾರರು ಪಂದ್ಯಾವಳಿಯ ಭಾಗವಾಗಿದ್ದ ಏಕೈಕ ಆವೃತ್ತಿಯಾಗಿತ್ತು. ಆ ವರ್ಷ IPL ನಲ್ಲಿ 11 ಪಾಕಿಸ್ತಾನಿ ಆಟಗಾರರು ಭಾಗವಹಿಸಿದ್ದರು. IPL 2008 ರಲ್ಲಿ ಭಾಗವಹಿಸಿದ 11 ಪಾಕಿಸ್ತಾನಿ ಆಟಗಾರರ ಪಟ್ಟಿ ಇಲ್ಲಿದೆ.

  ಸೊಹೈಲ್ ತನ್ವೀರ್ (ರಾಜಸ್ಥಾನ್ ರಾಯಲ್ಸ್)

  ಶಾಹಿದ್ ಅಫ್ರಿದಿ (ಡೆಕ್ಕನ್ ಚಾರ್ಜರ್ಸ್)

  ಶೋಯೆಬ್ ಮಲಿಕ್ (ದೆಲ್ಲಿ ಡೇರ್ ಡೆವಿಲ್ಸ್)

  ಶೋಯೆಬ್ ಅಖ್ತರ್ (ಕೋಲ್ಕತ್ತಾ ನೈಟ್ ರೈಡರ್ಸ್)

  ಮಿಸ್ಬಾ-ಉಲ್-ಹಕ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

  ಮೊಹಮ್ಮದ್ ಆಸಿಫ್ (ದೆಹಲಿ ಡೇರ್ ಡೆವಿಲ್ಸ್)

  ಕಮ್ರಾನ್ ಅಕ್ಮಲ್ (ರಾಜಸ್ಥಾನ್ ರಾಯಲ್ಸ್)

  ಸಲ್ಮಾನ್ ಬಟ್ (ಕೋಲ್ಕತ್ತಾ ನೈಟ್ ರೈಡರ್ಸ್)

  ಉಮರ್ ಗುಲ್ (ಕೋಲ್ಕತ್ತಾ ನೈಟ್ ರೈಡರ್ಸ್)

  ಯೂನಿಸ್ ಖಾನ್ (ರಾಜಸ್ಥಾನ್ ರಾಯಲ್ಸ್)

  ಮೊಹಮ್ಮದ್ ಹಫೀಜ್ (ಕೋಲ್ಕತ್ತಾ ನೈಟ್ ರೈಡರ್ಸ್)

  ಐಪಿಎಲ್‌ನಲ್ಲಿ ಶಾಹಿದ್ ಅಫ್ರಿದಿ, ಅವರು 2008 ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಪ್ರತಿನಿಧಿಸಿದ್ದರು.

  ಅಖ್ತರ್ ಮತ್ತು ಅಫ್ರಿದಿ ಹೊರತುಪಡಿಸಿ, ಐಪಿಎಲ್ 2008 ರ ಭಾಗವಾಗಿದ್ದ ಪಾಕಿಸ್ತಾನದ ಇತರ ಪ್ರಮುಖ ಕ್ರಿಕೆಟಿಗರು ಮಿಸ್ಬಾ-ಉಲ್-ಹಕ್, ಸೊಹೇಲ್ ತನ್ವಿರ್, ಕಮ್ರಾನ್ ಅಕ್ಮಲ್, ಸಲ್ಮಾನ್ ಬಟ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಉಮರ್ ಗುಲ್, ಯೂನಿಸ್ ಖಾನ್, ಮೊಹಮ್ಮದ್ ಆಸಿಫ್ ಅವರುಗಳಾಗಿದ್ದಾರೆ.

  ಇದನ್ನೂ ಓದಿ: IPL 2022: ಹಾರ್ದಿಕ್​ ವಿಕೆಟ್ ಕಿತ್ತಿದ್ದಕ್ಕೆ ಕೃನಾಲ್​ ಪಾಂಡ್ಯಗೆ ಮನೆಲಿ ಬೈದ್ರಾ? ಮ್ಯಾಚ್ ಮುಗಿದ ಮೇಲೆ ಏನಾಯ್ತು?

  ಪಾಕಿಸ್ತಾನದ ಬಾಬರ್ ಅಜಮ್ ಪ್ರಸ್ತುತ ವಿಶ್ವದ ನಂಬರ್ 1 ಟಿ20 ಬ್ಯಾಟರ್ ಆಗಿದ್ದಾರೆ. ಬಲಗೈ ಬ್ಯಾಟರ್ ಆಗಿರುವ ಅವರು  ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ.
  Published by:guruganesh bhat
  First published: