B S Chandrasekhar: ಭಾರತದ ಸ್ಪಿನ್ ಮಾಂತ್ರಿಕ ಕನ್ನಡಿಗ ಬಿಎಸ್ ಚಂದ್ರಶೇಖರ್ ಆಸ್ಪತ್ರೆಗೆ ದಾಖಲು

ಸುದ್ದಿ ಸಂಸ್ಥೆ ಎಎನ್ ಐ ಈ ಬಗ್ಗೆ ವರದಿ ಮಾಡಿದ್ದು, ಚಂದ್ರಶೇಖರ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಿದೆ.

 B S Chandrasekhar

B S Chandrasekhar

 • Share this:
  ಬೆಂಗಳೂರು (ಜ. 18): ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಸ್ಪಿನ್ ಬೌಲರ್ ದಿಗ್ಗಜ ಬಿಎಸ್ ಚಂದ್ರಶೇಖರ್ ಅನಾರೋಗ್ಯದಿಂದ ಬಳಲುತ್ತಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಎಸ್ ಚಂದ್ರಶೇಖರ್ ಅವರಿಗೆ 75 ವರ್ಷ ವಯಸ್ಸಾಗಿದ್ದು ಅವರ ಆರೋಗ್ಯದ ಬಗ್ಗೆ ಆಸ್ಪತ್ರೆಯ ಮೂಲಗಳು ಮಾಹಿತಿಯನ್ನು ನೀಡಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಂದ್ರಶೇಖರ್ ಅವರ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

  ಸುದ್ದಿ ಸಂಸ್ಥೆ ಎಎನ್ ಐ ಈ ಬಗ್ಗೆ ವರದಿ ಮಾಡಿದ್ದು, ಚಂದ್ರಶೇಖರ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಿದೆ. ಚಂದ್ರಶೇಖರ್ ಅವರು ಮೈಸೂರು ಮೂಲದವರು. ಲೆಗ್ ಸ್ಪಿನ್ನರ್ ಆಗಿದ್ದ ಅವರು 1964ರಿಂದ 1979ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

  Washington Sundar: ಭಾರತದ ಮಾನ ಕಾಪಾಡಿದ ಮಗನ ಬಗ್ಗೆ ಬೇಸರ ಹೊರಹಾಕಿದ ವಾಷಿಂಗ್ಟನ್ ಸುಂದರ್ ತಂದೆ

  "ಮನೆಯಲ್ಲಿ ಕ್ರಿಕೆಟ್ ನೋಡುತ್ತಿದ್ದ ಚಂದ್ರಶೇಖರ್ ಅವರು ಇದ್ದಕ್ಕಿದ್ದಂತೆ ಆಯಾಸವಾಗುತ್ತಿದೆ ಎಂದರು. ಮಾತನಾಡುವ ವೇಳೆ ತೊದಲುತ್ತಿದ್ದರು, ಕೂಡಲೆ ಅವರನ್ನು ಆತ್ಪತ್ರೆಗೆ ಕರೆದುಕೊಂಡು ಬರಲಾಯಿತು. ಈಗ ಅವರು ಉತ್ತಮವಾಗಿದ್ದು, ಎರಡು ದಿನಗಳಲ್ಲಿ ಮನೆಗೆ ಮರಳಲಿದ್ದಾರೆ" ಎಂದು ಚಂದ್ರಶೇಖರ್ ಪತ್ನಿ ಸಂಧ್ಯಾ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.

  ತಮ್ಮ ಮಾರಕ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಿದ್ದ ಇವರು ಇಎಎಸ್ ಪ್ರಸನ್ನ, ಬಿಷನ್ ಸಿಂಗ್ ಬೇಡಿ ಹಾಗೂ ಎಸ್ ವೆಂಕಟ ರಾಘವನ್ ಅವರ ಜೊತೆಗೆ ಬಿಎಸ್ ಚಂದ್ರ ಶೇಖರ್ ಭಾರತ ತಂಡದ ದೊಡ್ಡ ಅಸ್ತ್ರವಾಗಿದ್ದರು. 16 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

  India vs Australia Live: ಆಸ್ಟ್ರೇಲಿಯಾದ 7 ವಿಕೆಟ್ ಪತನ: ಕುತೂಹಲಕಾರಿ ಕದನಕ್ಕೆ ಮಳೆ ಅಡ್ಡಿ

  ಚಂದ್ರಶೇಖರ್ ಅವರು ಒಟ್ಟು 58 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು 242 ವಿಕೆಟ್‌ಗಳನ್ನು ಕಿತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಳಿಸಿದ ರನ್‌ಗಿಂತ ಅಧಿಕ ವಿಕೆಟ್ ಪಡೆದ ವಿಶ್ವದ ಕೇವಲ ಇಬ್ಬರೇ ಆಟಗಾರರ ಪೈಕಿ ಚಂದ್ರಶೇಖರ್ ಕೂಡ ಒಬ್ಬರಾಗಿದ್ದಾರೆ.

  1972ರಲ್ಲಿ ಚಂದ್ರ ಶೇಖರ್ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. 2002ರಲ್ಲಿ ವಿಸ್ಡನ್‌ನ "ಶತಮಾನದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ" ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು.
  Published by:Vinay Bhat
  First published: