ಇಂಗ್ಲೆಂಡ್ ಕ್ರಿಕೆಟಿಗರಿಂದ ಆದ ಮಾನಸಿಕ ಕಿರುಕುಳದ ಅನುಭವ ಬಿಚ್ಚಿಟ್ಟ ಅಜೀಮ್ ರಫೀಕ್

Azeem Rafiq- ಇಂಗ್ಲೆಂಡ್ ಕ್ರಿಕೆಟ್ ಕ್ಷೇತ್ರದಲ್ಲಿ ಏಷ್ಯನ್ ಮೂಲದ ಆಟಗಾರರ ಬಗ್ಗೆ ಅಸಹನೆ ಮತ್ತು ಅಸಡ್ಡೆ ಧೋರಣೆ ಇದೆ. ವರ್ಣಭೇದ ಭಾವನೆ ತುಂಬಿದೆ ಎಂದು ಪಾಕ್ ಮೂಲದ ಕ್ರಿಕೆಟಿಗ ಅಜೀಮ್ ರಫೀಕ್ ಆರೋಪ ಮಾಡಿದ್ದಾರೆ.

ಅಜೀಮ್ ರಫೀಕ್

ಅಜೀಮ್ ರಫೀಕ್

  • Share this:
ಲಂಡನ್, ನ. 17: ಪಾಕಿಸ್ತಾನ ಮೂಲದ ಇಂಗ್ಲೆಂಡ್ ಆಲ್​ರೌಂಡರ್ ಅಜೀಮ್ ರಫೀಕ್ ಇತ್ತೀಚೆಗೆ ಭಾರೀ ಸಂಚಲನ ಮೂಡಿಸುವ ಸಂಗತಿಗಳನ್ನ ಹೊರಗೆಡವಿದ್ದಾರೆ. ಅವರು ಮಾಡಿದ ಆರೋಪಗಳು ಕ್ರಿಕೆಟ್ ಲೋಕದ ಕೆಲ ಘನ ಮಾನವೀಯ ವಿಚಾರಗಳ ಮೇಲೆ ಬೆಳಕು ಚೆಲ್ಲುವಂತೆ ಮಾಡಿವೆ. ಜನರನ್ನ ಚರ್ಚೆಗೆ ನೂಕುತ್ತಿವೆ. ಇಂಗ್ಲೆಂಡ್ ಕ್ರಿಕೆಟ್​ನಲ್ಲಿ ಹೊಗೆಯಾಡುತ್ತಿರುವ ವರ್ಣಭೇದ ಮನೋಭಾವವನ್ನು ಅಜೀಮ್ ರಫೀಕ್ ಹೊರಜಗತ್ತಿಗೆ ತೋರಿಸಿದ್ದಾರೆ. ಅಜೀಮ್ ರಫೀಕ್ ಅವರು ಯಾರ್ಕ್ ಶೈರ್ ಕೌಂಟಿ ತಂಡದ ಮಾಜಿ ಕ್ಯಾಪ್ಟನ್ ಮತ್ತು ಆಟಗಾರ ಆಗಿದ್ದಾರೆ. ಯಾರ್ಕ್ ಶೈರ್ ತಂಡದಲ್ಲಿ ತಮ್ಮನ್ನು ಸ್ಥಳೀಯ ಆಟಗಾರರು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ಅವರು ಬ್ರಿಟನ್ ಸಂಸದರ ಮುಂದೆ ವಿವರವಾಗಿ ಬಿಚ್ಚಿಟ್ಟಿದ್ದಾರೆ.

30 ವರ್ಷದ ಅಜೀಮ್ ರಫೀಕ್ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಎದುರಾದ ವರ್ಣಭೇದ ಸಂಬಂಧಿತ ಕಿರುಕುಳ ಆರೋಪದಲ್ಲಿ ಒಂಬತ್ತು ಮಂದಿ ಪ್ರಮುಖ ಕ್ರಿಕೆಟಿಗರನ್ನ ಹೆಸರಿಸಿದ್ದಾರೆ. ಅದರಲ್ಲಿ ಮಾಜಿ ಮತ್ತು ಹಾಲಿ ಕ್ರಿಕೆಟಿಗರೂ ಇದ್ಧಾರೆ. ವೈಕೇಲ್ ವಾನ್, ಗ್ಯಾರಿ ಬಲಾನ್ಸ್, ಅಲೆಕ್ಸ್ ಹೇಲ್ಸ್, ಡೇವಿಡ್ ಲಾಯ್ಡ್, ಮ್ಯಾಥ್ಯೂ ಹೊಗಾರ್ಡ್, ಟಿಮ್ ಬ್ರೆಸ್ನನ್, ಆಂಡ್ರ್ಯೂ ಗಾಲೆ, ಮಾರ್ಟಿನ್ ಮಾಕ್ಸಾನ್ ಮತ್ತು ಜೋ ರೂಟ್ ಅವರಿಂದ ತಮ್ಮ ಮೇಲೆ ವಿವಿಧ ಸ್ತರಗಳಲ್ಲಿ ಆದ ವರ್ಣಭೇದ ಧೋರಣೆಯನ್ನ ಅಜೀಮ್ ರಫೀಕ್ ವಿವರಿಸಿದ್ದಾರೆ.

ಬಾಲಕನಿದ್ದಾಗ ಬಲವಂತವಾಗಿ ಮದ್ಯ ಕುಡಿಸಿದರು:

ಪಾಕಿಸ್ತಾನದಲ್ಲಿ ಜನಿಸಿದ ಅಜೀಮ್ ರಫೀಕ್ ಅವರು 2001ರಲ್ಲಿ 10 ವರ್ಷದವರಿದ್ದಾಗ ಇಂಗ್ಲೆಂಡ್​ಗೆ ವರ್ಗವಾದರು. ಅವರು 15 ವರ್ಷದವರಿದ್ದಾಗ ಸ್ಥಳೀಯ ಕ್ರಿಕೆಟ್ ಕ್ಲಬ್​ನಲ್ಲಿ ಆಡುತ್ತಿದ್ದರು. ಆಗ ಅಲ್ಲಿಯ ಆಟಗಾರರೊಬ್ಬರು ಇವರಿಗೆ ಬಲವಂತವಾಗಿ ವೈನ್ ಕುಡಿಸಿದ್ದರಂತೆ. ಯಾರ್ಕ್ ಶೈರ್ ಮತ್ತು ಹ್ಯಾಂಪ್​ಶೈರ್ ತಂಡಗಳಿಗೆ ಆಡಿದ ಆಟಗಾರನಿಂದ ಈ ಕೃತ್ಯ ನಡೆದದ್ದು ಎಂದು ರಫೀಕ್ ಹೇಳುತ್ತಾರೆ.

ಏಷ್ಯನ್ ಮೂಲದ ಆಟಗಾರರನ್ನ ತುಚ್ಛವಾಗಿ ಕಾಣುತ್ತಾರೆ:

ಭಾರತದ ಉಪಖಂಡದಿಂದ ಬಂದ ಆಟಗಾರರ ಬಗ್ಗೆ ಇಂಗ್ಲೆಂಡ್​ನ ಕೆಲ ಕ್ರಿಕೆಟಿಗರಿಗೆ ಬಹಳ ಅಸಡ್ಡೆ ಭಾವನೆ ಇದೆಯಂತೆ. ಅದರಲ್ಲೂ ಪಾಕಿಸ್ತಾನೀ ಆಟಗಾರರೆಂದರೆ ಇನ್ನೂ ತುಚ್ಛವಾಗಿ ಕಾಣುತ್ತಾರಂತೆ. “ಆನೆ ತೊಳೆಯುವವರು” (Elephant Washers), “ಪಾಕಿ”, “ನೀವೆಲ್ಲಾ ಟಾಯ್ಲೆಟ್ ಬಳಿ ಕುಳಿತುಕೊಳ್ಳುವವರು” ಇತ್ಯಾದಿ ಪದಗಳಿಂದ ಇವರನ್ನ ಹೀಯಾಳಿಸುತ್ತಾರಂತೆ.

ಕೆವಿನ್ ಅಂದರೆ ಏನು?: 

ಇಂಗ್ಲೆಂಡ್ ತಂಡದಲ್ಲಿ ಆಡಿರುವ ಅಲೆಕ್ಸ್ ಹೇಲ್ಸ್ ಮತ್ತು ಗ್ಯಾರಿ ಬಲಾನ್ಸ್ ಅವರೂ ಇಂಥ ನಡವಳಿಕೆ ತೊರುತ್ತಿದ್ದುದನ್ನು ರಫೀಕ್ ಉಲ್ಲೇಖಿಸಿದ್ದಾರೆ. ಈ ಇಬ್ಬರು ಕ್ರಿಕೆಟಿಗರು ಏಷ್ಯನ್ ಆಟಗಾರರನ್ನ ಕೆವಿನ್ ಎಂದು ಸಂಬೋಧಿಸುತ್ತಿದ್ದರಂತೆ. ಕೆವಿನ್ ಎಂಬುದು ಕರಿಯ ಎಂಬ ಅರ್ಥದಲ್ಲಿ ಬಳಕೆಯಾಗುವ ಪದ. ಇದನ್ನ ಬಹಳ ಅಸಹ್ಯ ರೀತಿಯಲ್ಲಿ ಏಷ್ಯಾ ಮೂಲದ ಕ್ರಿಕೆಟಿಗರನ್ನ ಪ್ರಯೋಗಿಸುತ್ತಿದ್ದರು ಎಂದು ರಫೀಕ್ ಹೇಳುತ್ತಾರೆ. ಅಲೆಕ್ಸ್ ಹೇಲ್ಸ್ ತಮ್ಮ ಕರಿ ಬಣ್ಣದ ನಾಯಿಗೆ ಕೆವಿನ್ ಎಂದು ಹೆಸರಿಟ್ಟಿದ್ದನ್ನ ಎಲ್ಲರೆದುರು ಹೇಳಿಕೊಂಡಿದ್ದರಂತೆ.

ಇದನ್ನೂ ಓದಿ: Virat Kohli: ಅಬ್ಬಾ..! ಕೊಹ್ಲಿ ಯಾರಿಗೂ ಕಡಿಮೆ ಇಲ್ಲ.. ದುಬಾರಿ ವಾಚ್ ಅವರ ಬಳಿಯೂ ಇದೆ!

ಮೈಕೇಲ್ ವಾನ್ ಬಗ್ಗೆ:

ಇಂಗ್ಲೆಂಡ್​ನ ಮಾಜಿ ಕ್ಯಾಪ್ಟನ್ ಮೈಕೇಲ್ ವಾನ್ ಬಗ್ಗೆಯೂ ರಫೀಕ್ ಅಸಮಾಧಾನ ವ್ಯಕ್ತಪಡಿಸಿದ್ಧಾರೆ. “ನೀವು ಬಹಳ ಮಂದಿ ಆಗಿಬಿಟ್ಟಿದ್ದೀರಾ. ಇದಕ್ಕೆ ಏನಾದರು ಮಾಡಬೇಕು ಎಂದು ವಾನ್ ಹೇಳಿದ್ದರು” ಎಂದು 2009ರ ಘಟನೆಯೊಂದನ್ನ ರಫೀಕ್ ಸ್ಮರಿಸಿದ್ದಾರೆ.

ಜೋ ರೂಟ್ ಬಗ್ಗೆ:

ಇನ್ನು, ಇಂಗ್ಲೆಂಡ್​ನ ಪ್ರತಿಭಾನ್ವಿತ ಕ್ರಿಕೆಟಿಗ ಜೋ ರೂಟ್ ಅವರನ್ನೂ ರಫೀಕ್ ಬಿಟ್ಟಿಲ್ಲ. ಜೋ ರೂಟ್ ಒಳ್ಳೆಯ ಮನುಷ್ಯ. ಆದರೆ, ತಮ್ಮನ್ನು ಅಲೆಕ್ಸ್ ಹೇಲ್ಸ್ ಮೊದಲಾದವರು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರೂ ನೋಡಿಕೊಂಡು ಸುಮ್ಮನಿರುತ್ತಿದ್ದರು ಎಂದಿದ್ದಾರೆ. ಆದರೆ, ಜೋ ರೂಟ್ ಅವರು ತಮಗೆ ಇದೇನೂ ಗೊತ್ತಿಲ್ಲ. ತಮ್ಮ ಕಣ್ಣಿಗೆ ಈ ವರ್ಣಭೇದ ಘಟನೆಗಳು ಬಿದ್ದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದರು. ಜೋ ರೂಟ್ ಅವರಂಥ ಆಟಗಾರನಿಂದ ಈ ಪ್ರತಿಕ್ರಿಯೆ ನಿರೀಕ್ಷಿಸುವುದಿಲ್ಲ ಎಂದು ರಫೀಕ್ ಹೇಳಿದ್ದಾರೆ.

ಇಂಗ್ಲೆಂಡ್​ನಾದ್ಯಂತ ಇದೆ ಈ ಸಮಸ್ಯೆ:

ಇದೆಲ್ಲಾ ರಫೀಕ್ ಅವರಿಗೆ ಯಾರ್ಕ್​ಶೈರ್ ಕೌಂಟಿ ತಂಡದಲ್ಲಿ ಆದ ಅನುಭವಗಳು. ಆದರೆ, ಅವರ ಪ್ರಕಾರ, ಇಂಥ ವರ್ಣಭೇದ ಭಯಾನಕ ಧೋರಣೆ ಯಾರ್ಕ್ ಶೈರ್​ನಲ್ಲಿ ಮಾತ್ರವಲ್ಲ ಇಂಗ್ಲೆಂಡ್​ನಾದ್ಯಂತ ಇದೆ ಎಂದು ಹೇಳಿದ್ದಾರೆ. ನಾವೆದ್ ಹಸನ್, ಅದಿಲ್ ರಷೀದ್ ಮೊದಲಾದ ಏಷ್ಯನ್ ಮೂಲದ ಆಟಗಾರರಿಗೂ ಇವೆಲ್ಲಾ ಅನುಭವಗಳು ಆಗಿವೆ ಎಂಬುದು ಅಜೀಮ್ ರಫೀಕ್ ಅನಿಸಿಕೆ.

ಇದನ್ನೂ ಓದಿ: David Warner| ನೀವು ಪ್ರೀತಿಸುವ ತಂಡದಿಂದ ಕಾರಣವೇ ಇಲ್ಲದೆ ಕೈಬಿಟ್ಟಾಗ ನೋವಾಗುತ್ತದೆ: SRH ಬಗ್ಗೆ ವಾರ್ನರ್ ಬೇಸರ!

ಆಫ್ ಸ್ಪಿನ್ನರ್ ಆಗಿದ್ದ ಅಜೀಮ್ ರಫೀಕ್ ಬಹಳ ಪ್ರತಿಭಾನ್ವಿತ ಕ್ರಿಕೆಟಿಗರು. ಸಣ್ಣ ವಯಸ್ಸಿನಲ್ಲೇ ಛಾಪು ಮೂಡಿಸಿದವರು. ಒಂದು ಸಮಯದಲ್ಲಿ ಯಾರ್ಕ್​ಶೈರ್ ತಂಡದ ನಾಯಕರಾಗಿಯೂ ಬೆಳೆದಿದ್ದರು.

ಯಾರ್ಕ್​ಶೈರ್ ಎಂದರೆ ಭಾರತೀಯರಿಗೆ ನೆನಪಾಗುವುದು ಸಚಿನ್ ತೆಂಡೂಲ್ಕರ್. ಯಾರ್ಕ್​ಶೈರ್ ತಂಡ ಬಹಳ ಸಂಪ್ರದಾಯಬದ್ಧವಾಗಿದ್ದ ಕೌಂಟಿ ತಂಡವಾಗಿತ್ತು. ಸಚಿನ್ ತೆಂಡೂಲ್ಕರ್ ಅವರು ಯಾರ್ಕ್​ಶೈರ್​ನಲ್ಲಿ ಆಡಿದ ಮೊದಲ ಇಂಗ್ಲೆಂಡೇತರ ಕ್ರಿಕೆಟಿಗ ಎನಿಸಿದ್ದಾರೆ. ಸಚಿನ್ ಹೋದ ಬಳಿಕ ಯಾರ್ಕ್​ಶೈರ್ ಹೆಚ್ಚೆಚ್ಚು ತೆರೆದುಕೊಳ್ಳುತ್ತಾ ಹೋಗಿದೆ. ಆದರೆ, ಅದರ ಮಧ್ಯೆ ಈಗ ವರ್ಣಭೇದದ ಹುಳುಕೂ ಅಡಗಿರುವುದು ಅಜೀಮ್ ರಫೀಕ್ ಆರೋಪದಿಂದ ತಿಳಿದುಬರುತ್ತಿದೆ.
Published by:Vijayasarthy SN
First published: