ನನ್ನ ತಪ್ಪಿನಿಂದಾಗಿ ನ್ಯೂಜಿಲೆಂಡ್ ವಿಶ್ವಕಪ್​ ಫೈನಲ್​ನಲ್ಲಿ ಸೋತಿದೆ; ತಪ್ಪೊಪ್ಪಿಕೊಂಡ ಅಂಪೈರ್ ಧರ್ಮಸೇನ

Kumar Dharmasena: ಧರ್ಮಸೇನ ನಿರ್ಧಾರದ ಬಗ್ಗೆ ಅನೇಕರು ಅಪಸ್ವರ ಎತ್ತಿದ್ದರು. ಇನ್ನೂ, ಕೆಲವರು ಈ ನಿರ್ಧಾರ ಸರಿ ಎಂದು ಹೇಳಿದ್ದರು. ಈ ವಿಚಾರವಾಗಿ ಅವರೇ ಈಗ ಮೌನ ಮುರಿದಂತಾಗಿದೆ.

Rajesh Duggumane | news18
Updated:July 22, 2019, 10:03 AM IST
ನನ್ನ ತಪ್ಪಿನಿಂದಾಗಿ ನ್ಯೂಜಿಲೆಂಡ್ ವಿಶ್ವಕಪ್​ ಫೈನಲ್​ನಲ್ಲಿ ಸೋತಿದೆ; ತಪ್ಪೊಪ್ಪಿಕೊಂಡ ಅಂಪೈರ್ ಧರ್ಮಸೇನ
ಧರ್ಮಸೇನ
  • News18
  • Last Updated: July 22, 2019, 10:03 AM IST
  • Share this:
ವಿಶ್ವಕಪ್​ ಫೈನಲ್​ನಲ್ಲಿ ನ್ಯೂಜಿಲೆಂಡ್​-ಇಂಗ್ಲೆಂಡ್​ ಸೆಣೆಸಿತ್ತು. ಈ ರೋಚಕ ಹಣಾಹಣಿಯಲ್ಲಿ ಇಂಗ್ಲೆಂಡ್​ ಗೆದ್ದು ಬೀಗಿತ್ತು. ಅಂಪೈರ್​ ಕುಮಾರ್​ ಧರ್ಮಸೇನ ಮಾಡಿದ ತಪ್ಪಿನಿಂದಾಗಿ ನ್ಯೂಜಿಲೆಂಡ್​ ಸೋತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈಗ ಸ್ವತಃ ಕುಮಾರ್​ ಧರ್ಮಸೇನಾ ಈ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ವಿಶ್ವಕಪ್​  ಫೈನಲ್​ನಲ್ಲಿ ನ್ಯೂಜಿಲೆಂಡ್ ನೀಡಿದ 241ರನ್​ಗಳ ಗುರಿ ಬೆನ್ನು ಹತ್ತಿದ್ದ ಇಂಗ್ಲೆಂಡ್​ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಕೊನೆಯ ಓವರ್​ ಅಂತೂ ರೋಚಕ ಹಂತ ತಲುಪಿತ್ತು. ಈ ವೇಳೆ ಇಂಗ್ಲೆಂಡ್​ ಆಟಗಾರ ಬೆನ್​ ಸ್ಟೋಕ್ಸ್​​ ಬಾರಿಸಿದ ಹೊಡೆತ ಬೌಂಡರಿ ಸಮೀಪಿಸಿತ್ತು. ಇದನ್ನು ತಡೆ ನ್ಯೂಜಿಲೆಂಡ್​ ಆಟಗಾರ ಸ್ಟಂಪ್​ನತ್ತ ಎಸೆದಿದ್ದರು. ಆದರೆ, ಎರಡನೇ ರನ್​ ಕದಿಯುವ ತವಕದಲ್ಲಿದ್ದ ಸ್ಟೋಕ್ಸ್​ ಬ್ಯಾಟ್​ಗೆ ತಾಗಿದ ಬಾಲ್​ ಬೌಂಡರಿ ತಲುಪಿತ್ತು. ಈ ವೇಳೆ ಅಂಪೈರ್​ ಕುಮಾರ್​ ಧರ್ಮಸೇನ ಇಂಗ್ಲೆಂಡ್​​ಗೆ ಆರು ರನ್​ ನೀಡಿದ್ದರು. ಇದು ನ್ಯೂಜಿಲೆಂಡ್​ ಸೋಲಿಗೆ ಪ್ರಮುಖ ಕಾರಣವಾಗಿತ್ತು.

ಈ ಬಗ್ಗೆ ಸ್ಥಳೀಯ ಮಾಧ್ಯಮಗಳ ಜೊತೆ ಮಾತನಾಡಿರುವ ಧರ್ಮಸೇನ, “ಟಿವಿಯಲ್ಲಿ ರಿಪ್ಲೇ ನೋಡಿದಾಗ ನಾನು ನೀಡಿದ ನಿರ್ಧಾರ ತಪ್ಪು ಎಂಬುದು ನನಗೆ ಅರಿವಾಗಿತ್ತು. ಆದರೆ, ಮೈದಾನದಲ್ಲಿ ಸ್ಪಷ್ಟವಾಗಿ ಇದನ್ನು ತೋರಿಸುವ ಪರದೆ ಇಲ್ಲ. ಹಾಗಾಗಿ,  ನನ್ನ ನಿರ್ಧಾರದ ಬಗ್ಗೆ ನನಗೆ ಬೇಸರವಿಲ್ಲ,” ಎಂದಿದ್ದಾರೆ ಅವರು.

ಧರ್ಮಸೇನ ನಿರ್ಧಾರದ ಬಗ್ಗೆ ಅನೇಕರು ಅಪಸ್ವರ ಎತ್ತಿದ್ದರು. ಇನ್ನೂ, ಕೆಲವರು ಈ ನಿರ್ಧಾರ ಸರಿ ಎಂದು ಹೇಳಿದ್ದರು. ಈ ವಿಚಾರವಾಗಿ ಅವರೇ ಈಗ ಮೌನ ಮುರಿದಂತಾಗಿದೆ.

First published:July 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading