• Home
  • »
  • News
  • »
  • sports
  • »
  • Avani Lekhara: ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಕಂಚಿನ ಪದಕಗಳನ್ನು ಗೆದ್ದ ನಂತರ ಅವನಿ ಹೇಳಿದ್ದೇನು ಗೊತ್ತೇ?

Avani Lekhara: ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಕಂಚಿನ ಪದಕಗಳನ್ನು ಗೆದ್ದ ನಂತರ ಅವನಿ ಹೇಳಿದ್ದೇನು ಗೊತ್ತೇ?

Avani Lekhara

Avani Lekhara

Paralympics 2021: ಅವನಿ 50 ಮೀ ರೈಫಲ್ 3 ಸ್ಥಾನದ ಎಸ್ಎಚ್1 ಸ್ಪರ್ಧೆಯಲ್ಲಿ ಕಂಚಿನ ಪದಕ ಸಹ ಗೆಲ್ಲುವ ಮೂಲಕ ಒಂದೇ ಆವೃತ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಪದಕಗಳನ್ನು ಪಡೆದ ಮೊದಲ ಮಹಿಳೆ ಮತ್ತು ಒಟ್ಟಾರೆ ಎರಡನೇ ಭಾರತೀಯ ಎಂಬ ದಾಖಲೆ ಮುಡಿಗೇರಿಸಿಕೊಂಡಿದ್ದಾರೆ.

  • Share this:

ಈ ಬಾರಿಯ ಟೋಕಿಯೋ ಒಲಂಪಿಕ್ಸ್‌ನಲ್ಲಿ ಭಾಗವಹಿಸಿದ ಅತೀ ಕಿರಿಯ ಪ್ಯಾರಾ ಅಥ್ಲೀಟ್ ಜೈಪುರ ಮೂಲದ 19 ವರ್ಷದ ಅವನಿ ಲೆಖಾರಾ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ದಾಖಲೆಗೆ ಭಾಜನರಾಗಿದ್ದಾರೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಎಸ್ಎಚ್1 ಪಂದ್ಯದಲ್ಲಿ ಅವನಿ ಚಿನ್ನದ ಪದಕ ಗಳಿಸಿದ್ದಾರೆ. ಪ್ಯಾರಾಲಿಂಪಿಕ್ ನಲ್ಲಿ ಇದುವರೆಗೆ ಚಿನ್ನ ಗೆದ್ದ ಭಾರತೀಯ ಆಟಗಾರರಲ್ಲಿ ಅವನಿ ನಾಲ್ಕನೆಯವರಾಗಿದ್ದಾರೆ. ಇಷ್ಟೇ ಅಲ್ಲದೆ ಅವನಿ 50 ಮೀ ರೈಫಲ್ 3 ಸ್ಥಾನದ ಎಸ್ಎಚ್1 ಸ್ಪರ್ಧೆಯಲ್ಲಿ ಕಂಚಿನ ಪದಕ ಸಹ ಗೆಲ್ಲುವ ಮೂಲಕ ಒಂದೇ ಆವೃತ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಪದಕಗಳನ್ನು ಪಡೆದ ಮೊದಲ ಮಹಿಳೆ ಮತ್ತು ಒಟ್ಟಾರೆ ಎರಡನೇ ಭಾರತೀಯ ಎಂಬ ದಾಖಲೆ ಮುಡಿಗೇರಿಸಿಕೊಂಡಿದ್ದಾರೆ.


ಶುಕ್ರವಾರದಂದು ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾ ಆಯೋಜಿಸಿದ್ದ ವಾಸ್ತವಿಕ ಸಂವಾದದಲ್ಲಿ ಮಾತನಾಡಿದ ಅವನಿ “ಉತ್ತಮ, ಸ್ನೇಹಪರ ಮತ್ತು ಬೆಂಬಲಿತ ವಾತಾವರಣವು ಪ್ಯಾರಾಲಿಂಪಿಕ್ಸ್ ನಲ್ಲಿ ನಾನು ನನ್ನ ಕ್ರೀಡೆಯ ಮುಂಚೆ ಉತ್ತಮ ಮನಸ್ಥಿತಿಯನ್ನು ಹೊಂದುವುದಕ್ಕೆ ತುಂಬಾ ಸಹಾಯ ಮಾಡಿತು”, ಎಂದು ಹೇಳಿದರು.


ನನ್ನ ತರಬೇತುದಾರರಾದ ಜೆ.ಪಿ.ನೌಟಿಯಾಲ್, ಸುಭಾಷ್ ರಾಣಾ, ಸುಮಾ, ಇಲ್ಲಿ ನನ್ನ ಸಹಾಯಕ ಸಿಬ್ಬಂದಿ, ತಂಡದ ಎಲ್ಲಾ ಸದಸ್ಯರು ಹೀಗೆ ನಾನು ತುಂಬಾ ಅದ್ಭುತ ತಂಡವನ್ನು ಹೊಂದಿದ್ದು ನನಗೆ ತುಂಬಾ ಸಹಾಯಕವಾಯಿತು" ಎಂದು ಅವನಿ ಹೇಳಿದರು.


Tokyo Paralympics- ಆವನಿ ಲೇಖರಗೆ ಚಿನ್ನ; ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಇಂದು 4 ಪದಕ

ನಾನು ಏನಾದರೂ ತಪ್ಪು ಮಾಡುತ್ತಿದ್ದಾಗ ಅಥವಾ ಏನಾದರೂ ಸಮಸ್ಯೆ ಎದುರಾದಾಗ ಸುಮಾ ನನ್ನನ್ನು ಸಾಕಷ್ಟು ಪ್ರೇರೇಪಿಸಿದರು. ಆದ್ದರಿಂದ, ಇದು ತಂಡದ ಪ್ರಯತ್ನ ಮತ್ತು ಈ ರೀತಿಯ ಅದ್ಭುತ ತಂಡವನ್ನು ಪಡೆದಿರುವುದಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ" ಎಂದು ಅವನಿ ಹೇಳಿದರು.


1176 ಅಂಕಗಳನ್ನು ಗಳಿಸಿ 50 ಮೀ ರೈಫಲ್ 3 ಸ್ಥಾನಗಳ ಎಸ್ ಎಚ್ 1 ಸ್ಪರ್ಧೆಯ ಫೈನಲ್ ಗೆ ಅವನಿ ಎರಡನೇ ಸ್ಥಾನಕ್ಕೆ ಅರ್ಹತೆ ಪಡೆದರು. ಫೈನಲ್‌ನಲ್ಲಿ, ಕಂಚಿನ ಶೂಟ್-ಆಫ್ ನಲ್ಲಿ ಉಕ್ರೇನ್ ನ ಇರಿನಾ ಅವರನ್ನು 10.5 ಅಂಕಗಳನ್ನು ಗಳಿಸಿ ಸೋಲಿಸಿದರು.


ಫೈನಲ್‌ನಲ್ಲಿ ಉತ್ತಮವಾಗಿ ಮಾಡಬೇಕು ಎಂದು ನಾನು ಅಂದು ಕೊಂಡಿದ್ದು, ಅದೇ ರೀತಿಯಲ್ಲಿ ನಾನು ಮಾಡಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂದು ಅವನಿ ಹೇಳಿದರು.Tokyo Paralympics Avani Lekhara wins gold medal in shooting event
Avani Lekhara


Tokyo Paralympics: ಚಿನ್ನ ತಂದುಕೊಟ್ಟ ಅವನಿ ಲೇಖರ! ಭಾರತಕ್ಕೆ ಇಂದು ಒಂದೇ ದಿನ ನಾಲ್ಕು ಪದಕ!

ನಾನು ಫೈನಲ್ ಪಂದ್ಯಕ್ಕೂ ಮುಂಚೆ ತುಂಬಾ ಚಿಂತಿತಳಾಗಿದ್ದೆ, ನಾನು ಎಂದಿಗೂ 3ಪಿ ಯಲ್ಲಿ ಪದಕ ಗೆದ್ದಿರಲಿಲ್ಲ. ಇದು 3ಪಿ ಯಲ್ಲಿ ನನ್ನ ಮೊದಲ ಅಂತರರಾಷ್ಟ್ರೀಯ ಪದಕವಾಗಿದೆ. ಆದ್ದರಿಂದ, ನಾನು ಹೆಚ್ಚು ಆತಂಕಗೊಂಡಿದ್ದೆ. ಆದರೆ ನಾನು ಒಂದು ಸಮಯದಲ್ಲಿ ಒಂದು ಶಾಟ್ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದಾಗ ಕಳೆದ ಪಂದ್ಯದಂತೆ ನಾನು ಹೊಡೆತಗಳ ಮೇಲೆ ನನ್ನ ಗಮನವನ್ನು ಕೇಂದ್ರೀಕರಿಸಿದೆ" ಎಂದು ಅವನಿ ವಿವರಿಸಿದರು.


ನನ್ನ 100% ವನ್ನು ಪ್ರತಿಯೊಂದು ಸ್ಪರ್ಧೆಯಲ್ಲೂ ನೀಡಬಯಸುತ್ತೇನೆ. ಇನ್ನಷ್ಟು ಅತ್ಯುತ್ತಮವಾಗಿ ಆಡುವ ಛಲವನ್ನು ನನ್ನ ಮನಸ್ಸಿನಲ್ಲಿ ಇರಿಸಿಕೊಂಡು ಮುಂದಿನ ಕ್ರೀಡೆಯಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.


First published: