Matthew Wade: ಮರಗೆಲಸದಿಂದ ವಿಶ್ವಕಪ್​ವರೆಗೆ..ಆಸ್ಟ್ರೇಲಿಯಾ ಕ್ರಿಕೆಟಿಗ ಮ್ಯಾಥ್ಯೂ ವೇಡ್ ಕಥೆ ಗೊತ್ತಾ?

Matthew Wade: ಮ್ಯಾಥ್ಯೂ ವೇಡ್ ಆಸ್ಟ್ರೇಲಿಯಾ ತಂಡ 2021 ಟಿ20 ವಿಶ್ವಕಪ್ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲೊ ಒಬ್ಬರು. ಇಂದು, ಆಸ್ಟ್ರೇಲಿಯಾದ ವಿಶ್ವಕಪ್ ಹೀರೋಗಳಲ್ಲಿ ಒಬ್ಬರಾಗಿ ಆಗಿ ವೇಡ್ ಗುರುತಿಸಿಕೊಂಡಿದ್ದಾರೆ ಸದ್ಯ ಅದರ ಕ್ರಿಕೆಟ್​ ಜೀವನ ಮತ್ತು ವೈಯ್ಯಕ್ತಿ ಜೀವನ ಬಗ್ಗೆ ಸುದ್ದಿ ಹರಿದಾಡುತ್ತಿದೆ.

ಮ್ಯಾಥ್ಯೂ ವೇಡ್

ಮ್ಯಾಥ್ಯೂ ವೇಡ್

  • Share this:
    ನ್ಯೂಜಿಲೆಂಡ್ (new zealand)​​ ವಿರುದ್ಧ ಭರ್ಜರಿ ಪ್ರದರ್ಶನ ತೋರಿಸುವ ಮೂಲಕ ಆಸ್ಟ್ರೇಲಿಯಾ (Australia) ತಂಡ 2021ರ ಟಿ20 ವಿಶ್ವಕಪ್​ ವಿಜಯವನ್ನು ತನ್ನದಾಗಿಸಿಕೊಂಡಿದೆ. ವಿಶ್ವಕಪ್ (world Cup) ಗೆದ್ದ ಬಳಿಕ ಆಸ್ಟ್ರೇಲಿಯಾದ ಪ್ರತಿ ಕ್ರಿಕೆಟಿಗನ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಅನೇಕರು ಅವರ ವೈಯ್ಯಕ್ತಿಕ ಜೀವನ ಮೆಲುಕು ಹಾಕುತ್ತಿದ್ದಾರೆ. ಅದರಂತೆ ಮೈದಾನದಲ್ಲಿ ಗಮನ ಸೆಳೆದ ಆಸ್ಟ್ರೇಲಿಯ ತಂಡದ ವಿಕೆಟ್​ ಕೀಪರ್​, ಬ್ಯಾಟ್ಸ್​ಮನ್​ ಮ್ಯಾಥ್ಯೂ ವೇಡ್​ (Matthew Wade) ಕೂಡ ಚರ್ಚೆಯಲ್ಲಿದ್ದಾರೆ.

    ಮ್ಯಾಥ್ಯೂ ವೇಡ್ ಆಸ್ಟ್ರೇಲಿಯಾ ತಂಡ 2021 ಟಿ20 ವಿಶ್ವಕಪ್ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲೊ ಒಬ್ಬರು. ಇಂದು, ಆಸ್ಟ್ರೇಲಿಯಾದ ವಿಶ್ವಕಪ್ ಹೀರೋಗಳಲ್ಲಿ ಒಬ್ಬರಾಗಿ ಆಗಿ ವೇಡ್ ಗುರುತಿಸಿಕೊಂಡಿದ್ದಾರೆ ಸದ್ಯ ಅದರ ಕ್ರಿಕೆಟ್​ ಜೀವನ ಮತ್ತು ವೈಯ್ಯಕ್ತಿ ಜೀವನ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಕ್ರಿಕೆಟ್​ ಜೀವನದ ನಡುವೆ ಅವರೇನು ಮಾಡುತ್ತಿದ್ದರು ಎಂಬ ವಿಚಾರ ಅವರ ಅಭಿಮಾನಿಗಳನ್ನು ಅಚ್ಚರಿಯನ್ನುಂಟು ಮಾಡಿದೆ.

    ದುಬೈನಲ್ಲಿ (Dubai) ನಡೆದ ಪಾಕಿಸ್ತಾನ  ವಿರುದ್ಧದ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮ್ಯಾಥ್ಯೂ ವೇಡ್ 17 ಎಸೆತಗಳಲ್ಲಿ ಅಜೇಯ 41 ರನ್ ಗಳಿಸಿದ್ದರು. ಅವರು ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿಯ ಚೆಂಡನ್ನು ಸರಿಯಾಗಿ ಬಳಸಿಕೊಂಡರು. ಅಫ್ರಿದಿ ಅವರ 19 ನೇ ಓವರ್‌ನಲ್ಲಿ ಸತತ ಮೂರು ಸಿಕ್ಸರ್‌ಗಳನ್ನು ಹೊಡೆದು ಆಸ್ಟ್ರೇಲಿಯ ವಿಜಯಿಯಾಗಲು ಶ್ರಮಿಸಿದರು ಮತ್ತು ಪಾಕಿಸ್ತಾನವನ್ನು ವಿಶ್ವಕಪ್‌ನಿಂದ ಹೊರಹಾಕಿದರು.





    ಅನುಮಾನದಲ್ಲಿದ್ದ ಮ್ಯಾಥ್ಯೂ ವೇಡ್!

    ಅಂದಹಾಗೆಯೇ ಈ ಬಾರಿ ನಡೆದ ವಿಶ್ವಕಪ್‌ಗೆ ಮ್ಯಾಥ್ಯೂ ವೇಡ್ ಆಯ್ಕೆಯಾಗುತ್ತಾರಾ? ಎಂಬ ಬಗ್ಗೆ ಹಲವು ಅನುಮಾನಗಳಿದ್ದವು. ಆದರೆ, ಅದೃಷ್ಟವಶಾತ್ ಅವಕಾಶ ಸಿಕ್ಕಿತು ಮತ್ತು ಪ್ರತಿ ಪಂದ್ಯದಲ್ಲೂ ತಾನೇನು ಎಂಬುದನ್ನು ಅವರು ಸಾಬೀತುಪಡಿಸಿದರು. ಪಾಕಿಸ್ತಾನದ 177 ರನ್‌ಗಳನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ, 96 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಆ ಸಮಯದಲ್ಲಿ ಅನೇಕರು ಪಾಕಿಸ್ತಾನದ ಗೆಲುವಿನ ಬಗ್ಗೆ ಭವಿಷ್ಯ ನುಡಿದರು. ಆದಾಗ್ಯೂ, ಆರನೇ ವಿಕೆಟ್‌ಗೆ ಮಾರ್ಕಸ್ ಸ್ಟೋಯಾನಿಸ್ ಜೊತೆ ಮ್ಯಾಥ್ಯೂ ವೇಡ್ ಅವರ ಅಜೇಯ ಜೊತೆಯಾಟವು ಆಸ್ಟ್ರೇಲಿಯಾಕ್ಕೆ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಮುನ್ನಡೆ ನೀಡಿತು.

    ಇದನ್ನು ಓದಿ: Australia Champions- ಆಸ್ಟ್ರೇಲಿಯಾ ಹೊಸ ಟಿ20 ವಿಶ್ವ ಚಾಂಪಿಯನ್ಸ್; ಕಿವೀಸ್ ಪಡೆಗೆ ನಿರಾಸೆ

    ಕೈಬಿಟ್ಟ ತಂಡ

    ಕೆಲ ವರ್ಷಗಳ ಹಿಂದೆ ಮ್ಯಾಥ್ಯೂ ವೇಡ್ ಅವರನ್ನು ಆಸ್ಟ್ರೇಲಿಯಾ ತಂಡದಿಂದ ಕೈಬಿಡಲಾಗಿತ್ತು. ಆಸ್ಟ್ರೇಲಿಯಾದ ಕ್ರಿಕೆಟ್​ ತಂಡದ ನಿರ್ಧಾರವನ್ನು ಅನುಸರಿಸಿ, ರಾಷ್ಟ್ರೀಯ ತಂಡಕ್ಕೆ ಮರಳುವ ಮ್ಯಾಥ್ಯೂ ವೇಡ್ನ ಭರವಸೆಯು ವಿಫಲವಾಯಿತು. ಆ ಕಾಲದಲ್ಲೇ ಬದುಕು ಕಟ್ಟಿಕೊಳ್ಳಲು ಮರಗೆಲಸ ಆರಂಭಿಸಿದರು.

    ಮರಗೆಲಸ ಪ್ರಾರಂಭಿಸಿದ ಮ್ಯಾಥ್ಯೂ ವೇಡ್!

    2017-18ರ ಬಾಂಗ್ಲಾದೇಶ ವಿರುದ್ಧದ ಸರಣಿಗೆ ಅವರನ್ನು ಕೈಬಿಡಲಾಯಿತು. ಆಯ್ಕೆ ಸಮಿತಿಯ ಈ ನಿರ್ಧಾರದ ನಂತರ, ಮ್ಯಾಥ್ಯೂ ವೇಡ್ ತನ್ನ ಕ್ರಿಕೆಟ್ ವೃತ್ತಿಜೀವನ ಮುಗಿದಿದೆ ಎಂದು ಭಾವಿಸಿದರು. ಆ ಸಮಯದಲ್ಲಿ ಅವರು ಟ್ಯಾಸ್ಮೆನಿಯಾದ ತಮ್ಮ ಮನೆಗೆ ಹಿಂದಿರುಗಿದರು ಮತ್ತು ಮರಗೆಲಸವನ್ನು ಪ್ರಾರಂಭಿಸಿದರು. ಹಾಗಾಗಿ 2021 ವಿಶ್ವಕಪ್ ಪಂದ್ಯಕ್ಕೆ ಕರೆದುಕೊಳ್ಳುತ್ತಾರಾ ಅಥವಾ ಕೈ ಬಿಡುತ್ತಾರಾ ಎಂಬ ಗೊಂದಲ ಅವರನ್ನು ಕಾಡಿತ್ತು. ಕೊನೆಗೆ ತಂಡ ಅವನ್ನು ಕರೆದುಕೊಳ್ಳುವ ಮೂಲಕ ಉತ್ತಮ ಕೆಲವನ್ನು ಮಾಡಿದೆ.



    ಇದನ್ನು ಓದಿ: Maxwell-Vini Raman: ಗ್ಲೆನ್ ಮ್ಯಾಕ್ಸ್​ವೆಲ್ ಮದುವೆಯಾಗುತ್ತಿರುವ ವಿನಿ ರಾಮನ್ ಯಾರು? ಇಲ್ಲಿದೆ ಮಾಹಿತಿ

    33 ವರ್ಷದ ಮ್ಯಾಥ್ಯೂ ವೇಡ್ ಇಲ್ಲಿಯವರೆಗೆ 36 ಟೆಸ್ಟ್, 97 ODI ಮತ್ತು 54 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 4 ಶತಕ ಮತ್ತು 5 ಅರ್ಧಶತಕ ಸೇರಿದಂತೆ 1613 ರನ್ ಗಳಿಸಿದ್ದಾರೆ. ಏಕದಿನದಲ್ಲಿ ಅವರು 1 ಶತಕ ಮತ್ತು 11 ಅರ್ಧಶತಕಗಳೊಂದಿಗೆ 1867 ರನ್ ಗಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 3 ಅರ್ಧ ಶತಕ ಹಾಗೂ 729 ರನ್ ಗಳಿಸಿದ್ದಾರೆ.
    Published by:Harshith AS
    First published: