ಕ್ರಿಕೆಟ್ ಜಗತ್ತಿನಲ್ಲಿ ಡಬಲ್ ಹ್ಯಾಟ್ರಿಕ್: ಹೊಸ ಇತಿಹಾಸ ಬರೆದ ಆಸ್ಟ್ರೇಲಿಯನ್ ಬೌಲರ್

Megan Schutt: ಇದಕ್ಕೂ ಮುನ್ನ 26 ವರ್ಷದ ಷುಟ್ ಮಾರ್ಚ್‌ನಲ್ಲಿ ಭಾರತ ವಿರುದ್ಧದ ಟಿ 20 ಪಂದ್ಯದಲ್ಲಿ ತನ್ನ ಮೊದಲ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. 

zahir | news18-kannada
Updated:September 12, 2019, 5:20 PM IST
ಕ್ರಿಕೆಟ್ ಜಗತ್ತಿನಲ್ಲಿ ಡಬಲ್ ಹ್ಯಾಟ್ರಿಕ್: ಹೊಸ ಇತಿಹಾಸ ಬರೆದ ಆಸ್ಟ್ರೇಲಿಯನ್ ಬೌಲರ್
megan-schutt
zahir | news18-kannada
Updated: September 12, 2019, 5:20 PM IST
ಅಂಟಿಗಾ: ಆಸ್ಟ್ರೇಲಿಯಾ ಮಹಿಳಾ ತಂಡದ ವೇಗದ ಬೌಲರ್ ಮೇಗನ್ ಷುಟ್ ಕ್ರಿಕೆಟ್​ ಜಗತ್ತಿನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧಿಸಿದ ಷುಟ್ ನೂತನ ವಿಶ್ವ ದಾಖಲೆ ಬರೆದರು.

ಈ ಮೂಲಕ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ (ಏಕದಿನ ಮತ್ತು ಟಿ 20) ಎರಡು ಹ್ಯಾಟ್ರಿಕ್ ಪಡೆದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮೇಗನ್ (24 ಕ್ಕೆ 3) ಅವರ ಮಾರಕ ದಾಳಿ ಮುಂದೆ ವೆಸ್ಟ್ ಇಂಡೀಸ್ ಬಾಲಂಗೋಚಿ ಆಟಗಾರ್ತಿಯರು ಮಂಡಿಯೂರಿದರು. ಪರಿಣಾಮ 24ಕ್ಕೆ 3 ವಿಕೆಟ್ ಪಡೆದ ಮೇಗನ್ ಕೆರಿಬಿಯನ್ ತಂಡವನ್ನು 180ಕ್ಕೆ ಕಟ್ಟಿಹಾಕಿದರು.

ಕೊನೆಯ 3 ಎಸೆತಗಳಲ್ಲಿ ಹ್ಯಾಟ್ರಿಕ್

ಮೇಗನ್ ಷುಟ್ ಮೊದಲ 9 ಓವರ್​ಗಳಲ್ಲಿ ಯಾವುದೇ ವಿಕೆಟ್ ಕಬಳಿಸಿರಲಿಲ್ಲ. ಆದರೆ ಅಂತಿಮ ಓವರ್​ನ ಕೊನೆಯ ಮೂರು ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿ ಹೊಸ ಇತಿಹಾಸ ನಿರ್ಮಿಸಿದರು.

ಇದಕ್ಕೂ ಮುನ್ನ 26 ವರ್ಷದ ಷುಟ್ ಮಾರ್ಚ್‌ನಲ್ಲಿ ಭಾರತ ವಿರುದ್ಧದ ಟಿ 20 ಪಂದ್ಯದಲ್ಲಿ ತನ್ನ ಮೊದಲ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.  ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಆಟಗಾರ್ತಿಯರಾದ ಸ್ಮೃತಿ ಮಂದಾನಾ, ನಾಯಕ ಮಿಥಾಲಿ ರಾಜ್ ಮತ್ತು ದೀಪ್ತಿ ಶರ್ಮಾ ಅವರನ್ನು ಕರಾರುವಾಕ್ ದಾಳಿ ಮೂಲಕ ಪೆವಿಲಿಯನ್​ಗಟ್ಟಿದ್ದರು.


Loading...First published:September 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...