ಟೀಂ ಇಂಡಿಯಾದ ಈ ಆಟಗಾರನ ಜೊತೆ ನಾನು ಡಿನ್ನರ್​ಗೆ ರೆಡಿ ಎಂದ ಆಸೀಸ್ ಮಹಿಳಾ ಆಟಗಾರ್ತಿ!

Murali Vijay: ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರನಾಗಿರುವ ಮುರಳಿ ವಿಜಯ್ ಇತ್ತೀಚೆಗೆ ಇನ್​ಸ್ಟಾಗ್ರಾಂ ಲೈವ್​ನಲ್ಲಿ ಬಂದು ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದರು.

ಟೀಂ ಇಂಡಿಯಾ ಆಟಗಾರರು ಹಾಗೂ ಎಲೀಸ್ ಪೆರ್ರಿ.

ಟೀಂ ಇಂಡಿಯಾ ಆಟಗಾರರು ಹಾಗೂ ಎಲೀಸ್ ಪೆರ್ರಿ.

 • Share this:
  ಕೊರೋನಾ ಲಾಕ್​ಡೌನ್​ನಿಂದಾಗಿ ಕ್ರಿಕೆಟ್ ಜಗತ್ತು ಸ್ತಬ್ದಗೊಂಡಿದ್ದು ಯಾವುದೇ ಪಂದ್ಯಾವಳಿಗಳು ನಡೆಯುತ್ತಿಲ್ಲ. ಹೀಗಾಗಿ ಆಟಗಾರರು ಮನೆಯಲ್ಲಿ ಕುಳಿತು ಕುಟುಂಬದ ಜೊತೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬ್ಯುಸಿಯಾಗಿದ್ದಾರೆ.

  ಅದರಲ್ಲೂ ಇತ್ತೀಚೆಗೆ ಕ್ರಿಕೆಟ್ ಆಟಗಾರರು ಇನ್​​ಸ್ಟಾಗ್ರಾಂನಲ್ಲಿ ಲೈವ್ ಬರುವುದು ಸಾಮಾನ್ಯವಾಗಿ ಬಿಟ್ಟಿದೆ. ಅಂತೆಯೆ ಮೊನ್ನೆಯಷ್ಟೆ ಭಾರತ ಕ್ರಿಕೆಟ್ ತಂಡದಲ್ಲಿ ಅವಕಾಶ ವಂಚಿತವಾಗಿರುವ ಆರಂಭಿಕ ಬ್ಯಾಟ್ಸ್​ಮನ್​​ ಮುರಳಿ ವಿಜಯ್ ಇನ್​ಸ್ಟಾಲೈವ್​ನಲ್ಲಿ ಬಂದು ತಮ್ಮ ಮನದಾಸೆಯೊಂದನ್ನು ವ್ಯಕ್ತಪಡಿಸಿದ್ದರು.

  Murali Vijay Reveals He Wants to Take Ellyse Perry Out to Dinner ‘She is so beautiful’
  ಮುರಳಿ ವಿಜಯ್.


  ವಾಸಿಮ್ ಅಕ್ರಮ್ ನಾಯಕತ್ವದಲ್ಲಿ 1999ರ ವಿಶ್ವಕಪ್ ಫೈನಲ್ ಫಿಕ್ಸ್..!

  ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರನಾಗಿರುವ ಮುರಳಿ ವಿಜಯ್ ಇನ್​ಸ್ಟಾಗ್ರಾಂ ಲೈವ್​ನಲ್ಲಿ ಬಂದು ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಅದರಲ್ಲಿ ಪ್ರಮುಖವಾಗಿ ನೀವು ಯಾವ ಇಬ್ಬರು ವ್ಯಕ್ತಿಗಳ ಜೊತೆಗೆ ಡಿನ್ನರ್ ಹೋಗಲು ಬಯಸುತ್ತೀರಿ? ಎಂದು ಮುರಳಿ ವಿಜಯ್ ಅವರನ್ನು ಪ್ರಶ್ನಿಸಲಾಗಿತ್ತು.

  ಅಚ್ಚರಿ ಎಂಬಂತೆ ವಿಜಯ್ ಅವರು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯ ಹೆಸರನ್ನು ಮೊದಲು ಪ್ರಸ್ತಾಪಿಸಿದ್ದರು. ಬಳಿಕ ಭಾರತ ತಂಡದ ಸ್ಟಾರ್ ಓಪನರ್ ಶಿಖರ್ ಧವನ್ ಅವರ ಹೆಸರನ್ನು ಹೇಳಿದ್ದರು.

  'ಮೊದಲು ಎಲೀಸ್ ಪೆರ್ರಿ. ಏಕೆಂದರೆ ಆಕೆ ಬಹಳ ಸುಂದರವಾಗಿದ್ದಾಳೆ. ಮತ್ತೊಂದು ಶಿಖರ್ ಧವನ್. ಆತ ಬಹಳ ತಮಾಶೆಯ ವ್ಯಕ್ತಿ. ಆದರೆ, ನಾನು ಧವನ್ ಜೊತೆ ತಮಿಳಿನಲ್ಲಿ ಮಾತನಾಡುತ್ತೇನೆ ಆತ ಹಿಂದಿಯಲ್ಲಿ ಮಾತನಾಡುತ್ತಿರುತ್ತಾನೆ ಅಷ್ಟೆ' ಎಂದಿದ್ದರು.

  Murali Vijay asks Ellyse Perry for dinner, Australian woman cricketer gives hilarious reply
  ಎಲೀಸ್ ಪೆರ್ರಿ.


  ಧೋನಿ ಆಯ್ಕೆಗೆ ಕಂಟಕವಾಗಿರುವುದು ಕೆ.ಎಲ್​ ರಾಹುಲ್..!

  ಸದ್ಯ ವಿಜಯ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಎಲೀಸ್ ಪೆರ್ರಿ, 'ವಿಜಯ್ ಜೊತೆ ಡಿನ್ನರ್ ಮಾಡಲು ಯಾವುದೇ ಅಭ್ಯಂತರವಿಲ್ಲ. ಆದರೆ, ಡಿನ್ನರ್ ಬಿಲ್ ಮಾತ್ರ ಅವರೇ ಕಟ್ಟಬೇಕು' ಎಂಬ ಷರತ್ತನ್ನು ವಿಧಿಸಿದ್ದಾರೆ.

     ಇದೇವೇಳೆ ನೀವು ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಲು ಇಷ್ಟ ಪಡುತ್ತೀರಾ ಅಥವಾ ವೇಗಿ ಜಸ್​ಪ್ರೀತ್​ ಬೌಲಿಂಗ್​ನಲ್ಲಿ ಬ್ಯಾಟಿಂಗ್ ಮಾಡಲು ಭಯಸುತ್ತೀರಾ ಅಂತ ಕೇಳಿದ್ದಕ್ಕೆ ಯೋಚಿಸಿ ಉತ್ತರಿಸಿದ ಎಲೀಸ್, ನಾನು​ ಕೊಹ್ಲಿಗೆ ಬೌಲಿಂಗ್ ಮಾಡುತ್ತೇನೆ ಅಂತ ಉತ್ತರಿಸಿದರು.

  ಬೂಮ್ರಾ ಬೌಲಿಂಗ್​ ಸಹವಾಸವೇ ಬೇಡ ಅಂದುಕೊಂಡಿದ್ದ ಪೆರ್ರಿ, ಬೌಲಿಂಗ್​ನಲ್ಲಿ ಹೊಡೆಸಿಕೊಂಡರೂ ಪರವಾಗಿಲ್ಲ ಅಂತ, ಕೊಹ್ಲಿಗೆ ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡರು.
  First published: