ಕೊಹ್ಲಿ, ರೋಹಿತ್​​ ಹಿಂದಿಕ್ಕಿ ಅತ್ಯುತ್ತಮ ಬ್ಯಾಟ್ಸ್​ಮನ್​ ಎನಿಸಿಕೊಂಡ ಕನ್ನಡಿಗ ಕೆ. ಎಲ್ ರಾಹುಲ್

K L Rahul: ಡಿಸೆಂಬರ್​​ 3ರಿಂದ ಉಭಯ ದೇಶಗಳ ನಡುವೆ ಬಾರ್ಡರ್​ ಗವಾಸ್ಕರ್​ ಟ್ರೋಫಿ ಕೂಡ ಆರಂಭಗೊಳ್ಳಲಿದ್ದು, ಅದಕ್ಕಾಗಿ ಕಾತುರರಾಗಿದ್ದೇವೆ ಎಂದು ಸ್ಮಿತ್‌ ಹೇಳಿದ್ದಾರೆ.

ಕೆ. ಎಲ್ ರಾಹುಲ್

ಕೆ. ಎಲ್ ರಾಹುಲ್

 • Share this:
  ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್​ಮನ್​ ಸ್ಟೀವ್ ಸ್ಮಿತ್ ಅವರು, ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬದಲು ಕೆ. ಎಲ್ ರಾಹುಲ್ ಅತ್ಯುತ್ತಮ ಆಟಗಾರ ಎಂದು ಹೇಳಿದ್ದಾರೆ. ರಾಹುಲ್ ತಮ್ಮ ಬ್ಯಾಟಿಂಗ್ ಮೂಲಕ ನನ್ನನ್ನು ಇಂಪ್ರೆಸ್ ಮಾಡಿದ್ದಾರೆ ಎಂದು ಸ್ಮಿತ್ ಹೇಳಿದ್ದಾರೆ.

  ಸ್ಟೀವ್ ಸ್ಮಿತ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯ ಮೂಲಕ ಅಭಿಮಾನಿಗಳೊಂದಿಗೆ ಲೈವ್‌ ಚಾಟ್‌ ನಡೆಸುತ್ತಿದ್ದರು. ಈ ಸಂದರ್ಭ ಅಭಿಮಾನಿಯೋರ್ವ ಭಾರತದ ಯಾವೊಬ್ಬ ಆಟಗಾರ ನಿಮ್ಮ ಗಮನ ಸೆಳೆದಿದ್ದಾರೆ? ಎಂಬ ಪ್ರಶ್ನೆಗೆ ಉತ್ತರಿಸಿದ ಸ್ಮಿತ್,  ಕೆ.ಎಲ್.ರಾಹುಲ್​​ ಓರ್ವ ಅದ್ಭುತ ಆಟಗಾರನಾಗಿದ್ದು, ಅವರ ಬ್ಯಾಟಿಂಗ್​ ಶೈಲಿಯಿಂದ ನನ್ನನ್ನು ಇಂಪ್ರೆಸ್​ ಮಾಡಿದ್ದಾರೆ ಎಂದು ನುಡಿದಿದ್ದಾರೆ.

  ಕಿಂಗ್ ಕೊಹ್ಲಿಯನ್ನು ಮೀರಿಸಿದ್ದಾರಂತೆ ಈ ಬ್ಯಾಟ್ಸ್​ಮನ್..!

  ಇನ್ನು ಇದೇವೇಳೆ ಡಿಸೆಂಬರ್​​ 3ರಿಂದ ಉಭಯ ದೇಶಗಳ ನಡುವೆ ಬಾರ್ಡರ್​ ಗವಾಸ್ಕರ್​ ಟ್ರೋಫಿ ಕೂಡ ಆರಂಭಗೊಳ್ಳಲಿದ್ದು, ಅದಕ್ಕಾಗಿ ಕಾತುರರಾಗಿದ್ದೇವೆ ಎಂದಿದ್ದಾರೆ. ಜೊತೆಗೆ ರವೀಂದ್ರ ಜಡೇಜಾ ಬಗ್ಗೆ ಕೂಡಾ ಮೆಚ್ಚುಗೆಯ ಮಾತಗಳನ್ನಾಡಿರುವ ಸ್ಮಿತ್,​ ಅವರೊಬ್ಬ ಅದ್ಭುತ ಕ್ಷೇತ್ರ ರಕ್ಷಕ. ಎಂ. ಎಸ್. ಧೋನಿ ಲೆಜೆಂಡ್​ ಎಂದಿದ್ದಾರೆ.

  2015ರಲ್ಲಿ ವಿಶ್ವಕಪ್​ ಗೆದ್ದಿರುವುದು ನನ್ನ ಉತ್ತಮ ಕ್ಷಣಗಳಲ್ಲಿ ಒಂದು ಎಂದಿದ್ದು, ಬರ್ಮಿಂಗ್​ಹ್ಯಾಮ್​​ನಲ್ಲಿ ನಡೆದ ಮೊದಲ ಆಸೀಸ್​ ಟೆಸ್ಟ್​ ಸರಣಿಯಲ್ಲಿ 144 ರನ್​ ಗಳಿಸಿದ್ದು ಟೆಸ್ಟ್​​ ಟೂರ್ನಿಯ ಅದ್ಭುತ ಬ್ಯಾಟಿಂಗ್​ ಕ್ಷಣಗಳಲ್ಲಿ ಒಂದು ಎಂದು ಹೇಳಿದ್ದಾರೆ.

  ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಸಲುವಾಗಿ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಡಿ. 3 ರಿಂದ 7ರ ವರೆಗೆ ಬ್ರಿಸ್ಬೇನ್ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್​ ಆಡಲಿದೆ. ಡಿ. 11 ರಿಂದ 15ರ ತನಕ ಅಡಿಲೇಡ್​ನಲ್ಲಿ ಎರಡನೇ ಪಂದ್ಯ ಆಯೋಜಿಸಲಾಗಿದೆ. ವಿಶೇಷ ಎಂದರೆ ಎರಡನೇ ಟೆಸ್ಟ್ ಡೇ ನೈಟ್​ ಪಂದ್ಯವಾಗಲಿದ್ದು, ಪಿಂಕ್​ ಬಾಲ್​ನಲ್ಲಿ ರೋಚಕ ಕದನ ನಿರೀಕ್ಷಿಸಲಾಗಿದೆ. ಇನ್ನೂ ಡಿಸೆಂಬರ್ 26 ರಿಂದ ಮೆಲ್ಬೋರ್ನ್​ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್​​ ಆರಂಭವಾದರೆ, ಅಂತಿಮ ನಾಲ್ಕನೇ ಟೆಸ್ಟ್​ ಜನವರಿ 3 ರಿಂದ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ಆಯೋಜಿಸಲಾಗಿದೆ.  5 ಸ್ಟೇಡಿಯಂ, 36 ದಿನ: IPL ಆಯೋಜನೆಗೆ ಭರ್ಜರಿ ಪ್ಲ್ಯಾನ್..!

  2018-19ರಲ್ಲಿ ಭಾರತ ತಂಡ ಆಸೀಸ್‌ ಪ್ರವಾಸ ಕೈಗೊಂಡಿದ್ದ ವೇಳೆ ನಾಲ್ಕು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತ್ತು. "ಸರಣಿ ಆರಂಭಕ್ಕೆ ಕಾಯಲು ಆಗುತ್ತಿಲ್ಲ. ಅದೊಂದು ಅದ್ಭುತ ಸರಣಿ ಆಗಲಿದೆ," ಎಂದು ಸ್ಮಿತ್‌ ಹೇಳಿದ್ದಾರೆ.
  First published: