VIDEO: ಕ್ರಿಕೆಟ್​ನಲ್ಲೊಂದು ವಿಚಿತ್ರ ಘಟನೆ: ಟಾಸ್ ಹಾಕಲು ಸಹ ಆಟಗಾರ್ತಿಯನ್ನು ಕರೆದ ನಾಯಕಿ..!

ಇಂತಹದೊಂದು ಅದೃಷ್ಟ ಪರೀಕ್ಷೆಯನ್ನು ದಕ್ಷಿಣ ಆಫ್ರಿಕಾ ತಂಡ ಜಿಂಬಾಬ್ವೆ ವಿರುದ್ಧ ಪರೀಕ್ಷಿಸಿತ್ತು. ನಾಯಕ ಫಾಫ್ ಡುಪ್ಲೆಸಿಸ್ ಟಾಸ್ ನಾಣ್ಯವನ್ನು ಹಾರಿಸಲು ಸಹ ಆಟಗಾರ ಜೆಪಿ ಡುಮಿನಿಯನ್ನು ಕರೆದಿದ್ದರು.

zahir | news18-kannada
Updated:October 1, 2019, 11:59 AM IST
VIDEO: ಕ್ರಿಕೆಟ್​ನಲ್ಲೊಂದು ವಿಚಿತ್ರ ಘಟನೆ: ಟಾಸ್ ಹಾಕಲು ಸಹ ಆಟಗಾರ್ತಿಯನ್ನು ಕರೆದ ನಾಯಕಿ..!
Sl vs aus
  • Share this:
ಕ್ರಿಕೆಟ್​ ಅನ್ನು ಅದೃಷ್ಟದ ಆಟ ಎನ್ನಲಾಗುತ್ತದೆ. ಗೆಲ್ಲುವ ಪಂದ್ಯವನ್ನು ಸೋಲುವುದು, ಸೋಲುವ ಪಂದ್ಯವನ್ನು ಗೆಲ್ಲುವುದು ಕ್ರಿಕೆಟ್ ಮೈದಾನದಲ್ಲಿ ಸರ್ವೇ ಸಾಮಾನ್ಯ. ಇಂತಹ ಅದೃಷ್ಟದ ಆಟದಲ್ಲಿ ನಾಯಕಿಯೇ ನತದೃಷ್ಟೆಯಾದರೆ? ಹೌದು ಇಂತಹದೊಂದು ಘಟನೆಗೆ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಣ ಟಿ-20 ಪಂದ್ಯ ಸಾಕ್ಷಿಯಾಗಿದೆ.

ಸಾಮಾನ್ಯವಾಗಿ ಟಾಸ್ ನಡೆಯುವ ವೇಳೆ ಉಭಯ ತಂಡಗಳ ನಾಯಕರುಗಳು ಇರುತ್ತಾರೆ. ಅದು ಬಿಟ್ಟರೆ ರೆಫರಿ ಮತ್ತು ಕಮೇಂಟೇಟರ್ ಅಷ್ಟೆ. ಆದರೆ ಸಿಡ್ನಿಯಲ್ಲಿ ನಡೆದ ಮಹಿಳಾ ಕ್ರಿಕೆಟ್ ಪಂದ್ಯದ ವೇಳೆ ಟಾಸ್ ಅಂಗಳದಲ್ಲಿ ಮೂವರು ಆಟಗಾರ್ತಿಯರಿದ್ದರು.

ಇನ್ನೇನು ಟಾಸ್ ಹಾಕಬೇಕು ಎನ್ನುವಾಗ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲೇನಿಂಗ್ ವಿಚಿತ್ರ ನಿರ್ಧಾರವನ್ನು ತಿಳಿಸಿದ್ದರು. ತಂಡದ ಆಟಗಾರ್ತಿ ಅಲಿಸ್ಸಾ ಹೀಲಿಯನ್ನು ಕರೆದು ಟಾಸ್ ನಾಣ್ಯವನ್ನು ಚಿಮ್ಮಿಸುವಂತೆ ಕೇಳಿಕೊಂಡರು. ಮೆಗ್ ಊಹೆ ಫಲಿಸಿತು. ಆಸೀಸ್ ತಂಡವೇ ಟಾಸ್​ನ್ನು ಗೆದ್ದುಕೊಂಡರು.

ಇದನ್ನೂ ಓದಿ: ಸೆಕ್ಸ್ ಬೇಕೆನಿಸಿದಾಗ ಮಾಡಿಬಿಡಬೇಕು: ಹೊಸ ಚರ್ಚೆಗೆ ಕಾರಣವಾಯ್ತು ನಟಿಯ ಹೇಳಿಕೆ..!

ನಾಯಕಿ ಮೆಗ್​ ಇಂತಹದೊಂದು ನಿರ್ಧಾರ ಮಾಡಲು ಮುಖ್ಯ ಕಾರಣ, ನತದೃಷ್ಟೇ ಎಂಬುದು. ನಾನು ಬಹುತೇಕ ಪಂದ್ಯದಲ್ಲಿ ಟಾಸ್ ಸೋತಿದ್ದೇನೆ. ನನಗೆ ಅದೃಷ್ಟವಿಲ್ಲ ಅನಿಸುತ್ತದೆ. ಹೀಗಾಗಿ ಅಲಿಸ್ಸಾರನ್ನು ಕರೆದಿರುವುದಾಗಿ ಮೆಗ್ ತಿಳಿಸಿದ್ದಾರೆ. ಈ ಅದೃಷ್ಟದ ಲೆಕ್ಕಾಚಾರದ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.ಈ ಹಿಂದೆ ಕೂಡ ಇಂತಹದೊಂದು ಅದೃಷ್ಟ ಪರೀಕ್ಷೆಯನ್ನು ದಕ್ಷಿಣ ಆಫ್ರಿಕಾ ತಂಡ ಜಿಂಬಾಬ್ವೆ ವಿರುದ್ಧ ಪರೀಕ್ಷಿಸಿತ್ತು. ನಾಯಕ ಫಾಫ್ ಡುಪ್ಲೆಸಿಸ್ ಟಾಸ್ ನಾಣ್ಯವನ್ನು ಹಾರಿಸಲು ಸಹ ಆಟಗಾರ ಜೆಪಿ ಡುಮಿನಿಯನ್ನು ಕರೆದಿದ್ದರು. ಇದೀಗ ಅಂತಹದ್ದೇ ಪ್ರಯೋಗ ಮಹಿಳಾ ಕ್ರಿಕೆಟ್​ನಲ್ಲೂ ನಡೆದಿದೆ. ಈ ಟಿ-20 ಪಂದ್ಯದಲ್ಲಿ ಲಂಕಾನ್ನರ ವಿರುದ್ಧ ಆಸೀಸ್ ಮಹಿಳೆಯರು 41 ರನ್​ಗಳಿಂದ ಗೆದ್ದು ಬೀಗಿದರು.

ಇದನ್ನೂ ಓದಿ: ನಗ್ನ ಫೋಟೋ ಹಂಚಿ ಪಡ್ಡೆ ಹುಡುಗರ ಹಾರ್ಟ್​ ಬೀಟ್ ಹೆಚ್ಚಿಸಿದ ಮಾದಕ ಮದನಾರಿ..!
First published:October 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading