AUS vs SL, 1st T20I: ಹುಟ್ಟುಹಬ್ಬದ ದಿನ ಅಬ್ಬರಿಸಿದ ವಾರ್ನರ್; ಲಂಕಾನ್ನರನ್ನು ಹೆಡೆಮುರಿ ಕಟ್ಟಿದ ಆಸೀಸ್

134 ರನ್​ಗಳ ಭರ್ಜರಿ ಜಯದೊಂದಿಗೆ ಆಸ್ಟ್ರೇಲಿಯಾ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಡೇವಿಡ್ ವಾರ್ನರ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

ಡೇವಿಡ್ ವಾರ್ನರ್

ಡೇವಿಡ್ ವಾರ್ನರ್

  • Share this:
ಬೆಂಗಳೂರು (ಅ. 27): ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸಿದೆ. ಹುಟ್ಟುಹಬ್ಬದ ದಿನ ಅಬ್ಬರಿಸಿ ಬೊಬ್ಬರಿದ ಡೇವಿಡ್ ವಾರ್ನರ್ ಮಿಂಚಿನ ಶತಕ ಸಿಡಿಸಿ ತನ್ನ ತಂಡವನ್ನು 134 ರನ್​​ಗಳಿಂದ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.


ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆಸ್ಟ್ರೇಲಿಯಾ ಬೊಂಬಾಟ್ ಆರಂಭ ಪಡೆದುಕೊಂಡಿತು. ನಿಷೇಧದ ಬಳಿಕ ಇದೇ ಮೊದಲ ಬಾರಿ ಆಸೀಸ್ ಪರ ಟಿ-20 ಪಂದ್ಯವನ್ನಾಡಲು ಮೈದಾನಕ್ಕಿಳಿದ ಡೇವಿಡ್ ವಾರ್ನರ್ ಅಬ್ಬರಿಸಿದರು. ಜೊತೆಗೆ ಇಂದು ವಾರ್ನರ್ ಅವರ ಹುಟ್ಟುಹಬ್ಬವಾಗಿದ್ದು ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿದರು.

 



(VIDEO): ನೆಟ್​ನಲ್ಲಿ ಶ್ರೀಶಾಂತ್ ಭರ್ಜರಿ ಬೌಲಿಂಗ್​ ಅಭ್ಯಾಸ; ಕ್ಲೀನ್ ಬೌಲ್ಡ್​ ಆದ ಸಚಿನ್

ಮೊದಲ ವಿಕೆಟ್​ಗೆ ಆ್ಯರೋನ್ ಫಿಂಚ್ ಹಾಗೂ ವಾರ್ನರ್ 11 ಓವರ್ ಮುಕ್ತಾಯದ ಹೊತ್ತಿಗೆ 122 ರನ್​ಗಳ ಕಾಣಿಕೆ ನೀಡಿದರು. ಫಿಂಚ್ 36 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಬಾರಿಸಿ 64 ರನ್ ಗಳಿಸಿದರು. ಬಳಿಕ ಬಂದ ಗ್ಲೆನ್ ಮ್ಯಾಕ್ಸ್​​ವೆಲ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು.

ಲಂಕಾ ಬೌಲರ್​​ಗಳನ್ನು ಕಾಡಿದ ವಾರ್ನರ್ ಹಾಗೂ ಮ್ಯಾಕ್ಸ್​ವೆಲ್​ ಜೋಡಿ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿತು. ಮ್ಯಾಕ್ಸ್​ವೆಲ್ ಕೇವಲ 28 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ ಕೊನೆಯ ಓವರ್​ನಲ್ಲಿ 62 ರನ್​ಗೆ ಔಟ್ ಆದರು.

ಇತ್ತ ಕೊನೆಯಲ್ಲಿ ವಾರ್ನರ್ ಶತಕ ಬಾರಿಸಿ ಬ್ಯಾಟ್ ಎತ್ತಿದರು. ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್​ಗೆ 2 ವಿಕೆಟ್ ಕಳೆದುಕೊಂಡು ಬರೋಬ್ಬರಿ 233 ರನ್ ಕಲೆಹಾಕಿತು. ವಾರ್ನರ್ 56 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್ ಚಚ್ಚಿ ಅಜೇಯ 100 ರನ್ ಗಳಿಸಿದರು.

ಐಪಿಎಲ್ ಮಾದರಿಯಲ್ಲಿ ಟೆಸ್ಟ್​ ಪಂದ್ಯ; ಹೀಗಾದ್ರೆ ಯಾವ ತಂಡಕ್ಕೆ ಎಷ್ಟು ಪಾಯಿಂಟ್?

 



234 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ತಂಡದ ಪರ ಡಸನ್ ಶನಕಾ 17 ಹಾಗೂ ಕುಸಲ್ ಪೆರೇರಾ 16 ರನ್ ಗಳಿಸಿದ್ದೇಹೆಚ್ಚು. ಉಳಿದ ಬ್ಯಾಟ್ಸ್​ಮನ್​ಗಳ ಸ್ಕೋರ್ 15ರ ಗಡಿ ದಾಟಲಿಲ್ಲ.

ಆ್ಯಡಂ ಜಂಪಾ ಸ್ಪಿನ್ ಬಲೆಗೆ ಸಿಲುಕಿದ ಶ್ರೀಲಂಕಾ 20 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು 99 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲಿಪ್ಪಿಗೊಂಡಿತು. ಜಂಪಾ 3 ವಿಕೆಟ್ ಕಿತ್ತರೆ, ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮಿನ್ಸ್​ ತಲಾ 2 ವಿಕೆಟ್ ಪಡೆದರು.

134 ರನ್​ಗಳ ಭರ್ಜರಿ ಜಯದೊಂದಿಗೆ ಆಸ್ಟ್ರೇಲಿಯಾ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಡೇವಿಡ್ ವಾರ್ನರ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.
First published: