Australia vs Pakistan , ICC Cricket World Cup 2019: ಪಾಕ್​ ವಿರುದ್ಧ ಆಸೀಸ್ ಆರಂಭಿಕರ ಭರ್ಜರಿ ಆರಂಭ

ವಿಶ್ವಕಪ್‌ ಇತಿಹಾಸದಲ್ಲಿ ಉಭಯ ತಂಡಗಳು 9 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಆಸ್ಪ್ರೇಲಿಯಾ ತಂಡ ಐದರಲ್ಲಿ ಗೆದ್ದರೆ, ಪಾಕ್ ನಾಲ್ಕು ಮ್ಯಾಚ್​ಗಳಲ್ಲಿ ತಮ್ಮ ಪಾರುಪತ್ಯ ಮೆರೆದಿದೆ.

zahir | news18
Updated:June 12, 2019, 4:19 PM IST
Australia vs Pakistan , ICC Cricket World Cup 2019: ಪಾಕ್​ ವಿರುದ್ಧ ಆಸೀಸ್ ಆರಂಭಿಕರ ಭರ್ಜರಿ ಆರಂಭ
ICC
  • News18
  • Last Updated: June 12, 2019, 4:19 PM IST
  • Share this:
ಟೌಂಟನ್: ವಿಶ್ವಕಪ್​ನ 17ನೇ ಪಂದ್ಯದಲ್ಲಿ ಇಂದು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದಿರುವ ಪಾಕ್ ನಾಯಕ ಸರ್ಫರಾಜ್ ಅಹ್ಮದ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಆಸೀಸ್ ನಾಯಕ ಆರೋನ್ ಫಿಚ್ ಹಾಗೂ ಡೇವಿಡ್ ವಾರ್ನರ್​ ಇನಿಂಗ್ಸ್ ಆರಂಭಿಸಿದ್ದು, ಬಿರುಸಿನ ಆಟಕ್ಕೆ ಒತ್ತು ನೀಡಿದ್ದಾರೆ.

ಭಾರತದ ವಿರುದ್ಧದ ಸೋಲಿನ ಬಳಿಕ ಆಸ್ಟ್ರೇಲಿಯಾ ಜಯದ ಲಯಕ್ಕೆ ಮರಳುವ ಹಂಬಲದಲ್ಲಿದ್ದು, ಹೀಗಾಗಿ ಇಂದಿನ ಪಂದ್ಯದಲ್ಲಿ ತಂಡದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿಕೊಂಡಿದೆ. ತಂಡದ ಪ್ರಮುಖ ಬೌಲಿಂಗ್ ಅಸ್ತ್ರ ಮಾರ್ಕಸ್ ಸ್ಟೋಯ್ನಿಸ್ ಬದಲಿಗೆ ಶಾನ್ ಮಾರ್ಶ್​ಗೆ ಸ್ಥಾನ ನೀಡಲಾಗಿದ್ದು, ಹಾಗೆಯೇ ಸ್ಪಿನ್ನರ್ ಆ್ಯಡಂ ಜಾಂಪಾ ಅವರನ್ನು ಕೈಬಿಟ್ಟು ಕೇನ್ ರಿಚರ್ಡ್ಸಸನ್ ಅವಕಾಶ ನೀಡಿದೆ.

ಹಾಗೆಯೇ ಇಂಗ್ಲೆಂಡ್​ ತಂಡವನ್ನು ತವರಿನಲ್ಲಿ 14 ರನ್​ಗಳಿಂದ ಸೋಲಿಸಿ ಆತ್ಮ ವಿಶ್ವಾಸದಲ್ಲಿರುವ ಪಾಕಿಸ್ತಾನ ತಂಡ ಇಂದಿನ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದೆ. ಶದಬ್ ಖಾನ್ ಬದಲಿಗೆ ಯುವ ಆಟಗಾರ ಶಾಹೀನ್ ಆಫ್ರಿದಿಯನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ವಿಶ್ವಕಪ್‌ ಇತಿಹಾಸದಲ್ಲಿ ಉಭಯ ತಂಡಗಳು 9 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಆಸ್ಪ್ರೇಲಿಯಾ ತಂಡ ಐದರಲ್ಲಿ ಗೆದ್ದರೆ, ಪಾಕ್ ನಾಲ್ಕು ಮ್ಯಾಚ್​ಗಳಲ್ಲಿ ತಮ್ಮ ಪಾರುಪತ್ಯ ಮೆರೆದಿದೆ. ಪ್ರಸಕ್ತ ಟೂರ್ನಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕಾಂಗರೂ ಬಳಗ ಗೆಲುವಿಗಾಗಿ ಹಾತೊರೆಯುತ್ತಿದೆ. ಮತ್ತೊಂದೆಡೆ ಒಂದು ಹೀನಾಯ ಸೋಲು, ಮತ್ತೊಂದು ಭರ್ಜರಿ ಜಯದೊಂದಿಗೆ ಪಾಕಿಸ್ತಾನ 7ನೇ ಸ್ಥಾನವನ್ನು ಪಡೆದುಕೊಂಡಿದೆ. ಶ್ರೀಲಂಕಾ ವಿರುದ್ಧದ ಕಳೆದ ಪಂದ್ಯವು ಮಳೆಯ ರದ್ದಾಗಿರುವುದರಿಂದ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಒತ್ತಡ ಪಾಕ್ ತಂಡದ ಮೇಲಿದೆ.

ಇತ್ತೀಚಿನ ವರದಿ ಬಂದಾಗ ಆಸ್ಟ್ರೇಲಿಯಾ ತಂಡವು 18 ಓವರ್​​ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 113 ರನ್​ಗಳಿಸಿದೆ.

ಸಂಕ್ಷಿಪ್ತ ಸ್ಕೋರ್:

ಆಸ್ಟ್ರೇಲಿಯಾ- 112/0ಆರೋನ್ ಫಿಂಚ್: 61

ಡೇವಿಡ್ ವಾರ್ನರ್: 41

ಉಭಯ ತಂಡಗಳು ಇಂತಿದೆ:
ಪಾಕಿಸ್ತಾನ : ಸರ್ಫರಾಜ್ ಅಹ್ಮದ್(ನಾಯಕ) ಇಮಾಮ್-ಉಲ್-ಹಕ್, ಫಖರ್ ಜಮಾನ್, ಬಾಬರ್ ಆಝಮ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ವಹಾಬ್ ರಿಯಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಮೊಹಮ್ಮದ್ ಅಮೀರ್

ಆಸ್ಟ್ರೇಲಿಯಾ : ಆರೋನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಶಾನ್ ಮಾರ್ಶ್, ಸ್ಟೀವನ್ ಸ್ಮಿತ್, ಉಸ್ಮಾನ್ ಖ್ವಾಜಾ, ಗ್ಲೆನ್ ಮ್ಯಾಕ್ಸ್​ವೆಲ್, ಅಲೆಕ್ಸ್ ಕ್ಯಾರಿ, ನಾಥನ್ ಕೌಲ್ಟರ್-ನೈಲ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್
First published:June 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ