Australia vs Pakistan , ICC Cricket World Cup 2019: ಅಮೀರ್ ಮಾರಕ ದಾಳಿಗೆ ನಲುಗಿದ ಆಸೀಸ್ ದಾಂಡಿಗರು: ಪಾಕ್​ಗೆ ಸ್ಪರ್ಧಾತ್ಮಕ ಮೊತ್ತದ ಸವಾಲು

ಆದರೆ ಮತ್ತೊಂದೆಡೆ ಅಮೋಘ ಇನಿಂಗ್ಸ್ ಆಡಿದ ಡೇವಿಡ್ ವಾರ್ನರ್​ 102 ಎಸೆತಗಳಲ್ಲಿ ಶತಕ ಪೂರೈಸಿ ಮೂಲಕ ಮಿಂಚಿದರು. ಇದರಲ್ಲಿ 1 ಸಿಕ್ಸರ್ ಹಾಗೂ 11 ಭರ್ಜರಿ ಬೌಂಡರಿಗಳು ಮೂಡಿ ಬಂದಿದ್ದವು. ತಂಡದ ಮೊತ್ತ 241 ಆಗಿದ್ದಾಗ ಭರ್ಜರಿ ಹೊಡೆತಕ್ಕೆ ಕೈ ಹಾಕಿದ ವಾರ್ನರ್ (107) ಶಾಹೀನ್ ಅಫ್ರಿದಿ ವಿಕೆಟ್ ಒಪ್ಪಿಸಿದರು.

zahir | news18
Updated:June 12, 2019, 7:02 PM IST
Australia vs Pakistan , ICC Cricket World Cup 2019: ಅಮೀರ್ ಮಾರಕ ದಾಳಿಗೆ ನಲುಗಿದ ಆಸೀಸ್ ದಾಂಡಿಗರು: ಪಾಕ್​ಗೆ ಸ್ಪರ್ಧಾತ್ಮಕ ಮೊತ್ತದ ಸವಾಲು
ಅಮೀರ್
  • News18
  • Last Updated: June 12, 2019, 7:02 PM IST
  • Share this:
ಟೌಂಟನ್: ವಿಶ್ವಕಪ್‌ನ 17ನೇ ಪಂದ್ಯದಲ್ಲಿ ಪಾಕ್ ತಂಡಕ್ಕೆ ಆಸ್ಟ್ರೇಲಿಯಾ​  307 ರನ್​ಗಳ ಸ್ಪರ್ಧಾತ್ಮಕ ಸವಾಲು ನೀಡಿದೆ. ಆರಂಭಿಕ ಆಟಗಾರರಾದ ಡೇವಿಡ್​ ವಾರ್ನರ್ (107) ಹಾಗೂ ಆರೋನ್ ಫಿಂಚ್(82) ಕೆಚ್ಚೆದೆಯ ಪ್ರದರ್ಶನದ ಹೊರತಾಗಿಯು ಕಾಂಗರೂ ಪಡೆ 49 ಓವರ್​ಗಳಿಗೆ ಆಲೌಟಾಯಿತು.

ಇದಕ್ಕೂ ಮುನ್ನ ಟಾಸ್ ಗೆದ್ದ ಪಾಕ್ ನಾಯಕ ಸರ್ಫರಾಜ್ ಅಹ್ಮದ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಇಳಿದ  ಡೇವಿಡ್ ವಾರ್ನರ್ ಮತ್ತು ನಾಯಕ ಆರೋನ್ ಫಿಂಚ್ ಭರ್ಜರಿ ಆರಂಭ ಒದಗಿಸಿದರು.

ಮೊದಲ ಹತ್ತು ಓವರ್​ನಲ್ಲಿ ತಾಳ್ಮೆಯ ಆಟದೊಂದಿಗೆ ಇನಿಂಗ್ಸ್ ಕಟ್ಟಿದ್ದ ಈ ಜೋಡಿ, ಬಳಿಕ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಪರಿಣಾಮ 16 ಓವರ್​ ಆಗುವಷ್ಟರಲ್ಲಿ ತಂಡದ ಮೊತ್ತವು 100ರ ಗಡಿದಾಟಿತ್ತು. ಈ ನಡುವೆ 63 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಫಿಂಚ್ ಹೊಡಿಬಡಿ ಆಟಕ್ಕೆ ಮುಂದಾದರು.

ಈ ಮಧ್ಯೆ ಯುವ ವೇಗಿ ಮೊಹಮ್ಮದ್ ಅಮೀರ್ ಎಸೆತಕ್ಕೆ ಬಲಿಯಾದ ಫಿಂಚ್ (82)​ ಪಾಕ್​ನ ಮೊದಲ ಯಶಸ್ಸಾಗಿ ಹೊರ ನಡೆದರು. ಅದಾಗಲೇ ಮೊದಲ ವಿಕೆಟ್​ಗೆ 146 ರನ್​ಗಳ ಜೊತೆಯಾಟ ನೀಡಿದ್ದ ಫಿಂಚ್ ಮತ್ತು ವಾರ್ನರ್ ಆಸೀಸ್ ತಂಡಕ್ಕೆ ಭದ್ರ ಬುನಾದಿ ಹಾಕುವಲ್ಲಿ ಯಶಸ್ವಿಯಾಗಿದ್ದರು.

ಇನ್ನು ಅತ್ಯುತ್ತಮ ಹೊಡೆತಗಳಿಂದ ಗಮನ ಸೆಳೆದ ವಾರ್ನರ್ ಮತ್ತೊಂದು ಅರ್ಧಶತಕಗಳಿಸಿ ಗಮನ ಸೆಳೆದರು. ಆದರೆ ಒನ್​ಡೌನ್ ಬಳಿಕ ಕ್ರೀಸ್​ಗೆ ಆಗಮಿಸಿದ ಸ್ಟೀವ್ ಸ್ಮಿತ್ (10) ಬಂದ ವೇಗದಲ್ಲೇ ಮರಳಿ ನಿರಾಸೆ ಮೂಡಿಸಿದರು. ಈ ವೇಳೆ ಎಚ್ಚರಿಕೆಯ ಆಟದತ್ತ ಮುಖ ಮಾಡಿದ ವಾರ್ನರ್ 31 ಓವರ್​ನಲ್ಲಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಈ ಮೊತ್ತಕ್ಕೆ 23 ರನ್​ಗಳು ಸೇರುವಷ್ಟರಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ (20) ಸಹ ಪೆವಿಲಿಯನ್ ಕಡೆ ಮುಖ ಮಾಡಿದರು.



ಆದರೆ ಮತ್ತೊಂದೆಡೆ ಅಮೋಘ ಇನಿಂಗ್ಸ್ ಆಡಿದ ಡೇವಿಡ್ ವಾರ್ನರ್​ 102 ಎಸೆತಗಳಲ್ಲಿ ಶತಕ ಪೂರೈಸಿ ಮೂಲಕ ಮಿಂಚಿದರು. ಇದರಲ್ಲಿ 1 ಸಿಕ್ಸರ್ ಹಾಗೂ 11 ಭರ್ಜರಿ ಬೌಂಡರಿಗಳು ಮೂಡಿ ಬಂದಿದ್ದವು. ತಂಡದ ಮೊತ್ತ 241 ಆಗಿದ್ದಾಗ ಭರ್ಜರಿ ಹೊಡೆತಕ್ಕೆ ಕೈ ಹಾಕಿದ ವಾರ್ನರ್ (107) ಶಾಹೀನ್ ಅಫ್ರಿದಿ ವಿಕೆಟ್ ಒಪ್ಪಿಸಿದರು.
Loading...



ವಾರ್ನರ್​ ನಿರ್ಗಮನದ ಮೇಲುಗೈ ಸಾಧಿಸಿದ ಪಾಕ್ ಬೌಲರ್​ಗಳ ಮುಂದೆ ಆಸೀಸ್ ಬ್ಯಾಟ್ಸ್​ಮನ್​ ಮಂಡಿಯೂರಿದರು. ಉಸ್ಮಾನ್ ಖ್ವಾಜಾ (18) ಹಾಗೂ ಅಲೆಕ್ಸ್ ಕ್ಯಾರಿ (20) ಒಂದಷ್ಟು ಪ್ರತಿರೋಧ ತೋರಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳು ಎರಡಂಕಿ ಗಳಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಉತ್ತಮ ಆರಂಭದ ಹೊರತಾಗಿಯು ದಿಢೀರ್ ಕುಸಿತಕ್ಕೆ ಒಳಗಾದ ತಂಡವು 49 ಓವರ್​ಗಳಲ್ಲಿ ಸರ್ವಪತನ ಕಂಡಿತು.

ಇನ್ನು ಮಾರಕ ದಾಳಿ ಸಂಘಟಿಸಿದ ಮೊಹಮ್ಮದ್ ಅಮೀರ್ ಹತ್ತು ಓವರ್​ಗಳಲ್ಲಿ ಕೇವಲ 30 ರನ್​ ನೀಡಿ ಐದು ವಿಕೆಟ್ ಉರುಳಿಸಿ ಮಿಂಚಿದರು. ಇವರಿಗೆ ಸಾಥ್ ನೀಡಿದ ಹಸನ್ ಅಲಿ 67 ಕ್ಕೆ 3 ವಿಕೆಟ್ ಕಬಳಿಸಿ ಗಮನ ಸೆಳೆದರು.

 
First published:June 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...