Australia vs Pakistan , ICC Cricket World Cup 2019: ವಾರ್ನರ್ ಭರ್ಜರಿ ಶತಕ: ಪಾಕ್​ಗೆ ಸ್ಪರ್ಧಾತ್ಮಕ ಸವಾಲು ನೀಡಿದ ಆಸ್ಟ್ರೇಲಿಯಾ

ಇನ್ನು ಅತ್ಯುತ್ತಮ ಹೊಡೆತಗಳಿಂದ ಗಮನ ಸೆಳೆದ ವಾರ್ನರ್ ಮತ್ತೊಂದು ಅರ್ಧಶತಕಗಳಿಸಿ ಗಮನ ಸೆಳೆದರು. ಆದರೆ ಒನ್​ಡೌನ್ ಬಳಿಕ ಕ್ರೀಸ್​ಗೆ ಆಗಮಿಸಿದ ಸ್ಟೀವ್ ಸ್ಮಿತ್ (10) ಬಂದ ವೇಗದಲ್ಲೇ ಮರಳಿ ನಿರಾಸೆ ಮೂಡಿಸಿದರು.

zahir | news18
Updated:June 12, 2019, 6:46 PM IST
Australia vs Pakistan , ICC Cricket World Cup 2019: ವಾರ್ನರ್ ಭರ್ಜರಿ ಶತಕ: ಪಾಕ್​ಗೆ ಸ್ಪರ್ಧಾತ್ಮಕ ಸವಾಲು ನೀಡಿದ ಆಸ್ಟ್ರೇಲಿಯಾ
@ICC
  • News18
  • Last Updated: June 12, 2019, 6:46 PM IST
  • Share this:
ಟೌಂಟನ್: ವಿಶ್ವಕಪ್‌ನ 17ನೇ ಪಂದ್ಯದಲ್ಲಿ ಪಾಕ್ ವಿರುದ್ಧ ಆಸ್ಟ್ರೇಲಿಯಾ  307 ರನ್​ಗಳ ಸವಾಲು ನೀಡಿದೆ. ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಭರ್ಜರಿ ಶತಕ ನೆರವಿನಿಂದ ಕಾಂಗರೂ ಪಡೆ ಬೃಹತ್ ಮೊತ್ತ ದಾಖಲಿಸಿತು.

ಟಾಸ್ ಸೋತು ಬ್ಯಾಟಿಂಗ್‌ ಅವಕಾಶ ಪಡೆದ ಆಸೀಸ್ ಬಳಗಕ್ಕೆ ನಾಯಕ ಆರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಭರ್ಜರಿ ಆರಂಭ ಒದಗಿಸಿದರು. ಮೊದಲ ಹತ್ತು ಓವರ್​ನಲ್ಲಿ ತಾಳ್ಮೆಯ ಆಟದೊಂದಿಗೆ ಇನಿಂಗ್ಸ್ ಕಟ್ಟಿದ್ದ ಈ ಜೋಡಿ, ಬಳಿಕ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಪರಿಣಾಮ 16 ಓವರ್​ ಆಗುವಷ್ಟರಲ್ಲಿ ತಂಡದ ಮೊತ್ತವು 100ರ ಗಡಿದಾಟಿತ್ತು. ಈ ನಡುವೆ 63 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಫಿಂಚ್ ಹೊಡಿಬಡಿ ಆಟಕ್ಕೆ ಮುಂದಾದರು.

ಈ ಮಧ್ಯೆ ಯುವ ವೇಗಿ ಮೊಹಮ್ಮದ್ ಅಮೀರ್ ಎಸೆತಕ್ಕೆ ಬಲಿಯಾದ ಫಿಂಚ್ (82)​ ಪಾಕ್​ನ ಮೊದಲ ಯಶಸ್ಸಾಗಿ ಹೊರ ನಡೆದರು. ಅದಾಗಲೇ ಮೊದಲ ವಿಕೆಟ್​ಗೆ 146 ರನ್​ಗಳ ಜೊತೆಯಾಟ ನೀಡಿದ್ದ ಫಿಂಚ್ ಮತ್ತು ವಾರ್ನರ್ ಆಸೀಸ್ ತಂಡಕ್ಕೆ ಭರ್ಜರಿ ಅಡಿಪಾಯ ಹಾಕುವಲ್ಲಿ ಯಶಸ್ವಿಯಾಗಿದ್ದರು.

ಇನ್ನು ಅತ್ಯುತ್ತಮ ಹೊಡೆತಗಳಿಂದ ಗಮನ ಸೆಳೆದ ವಾರ್ನರ್ ಮತ್ತೊಂದು ಅರ್ಧಶತಕಗಳಿಸಿ ಗಮನ ಸೆಳೆದರು. ಆದರೆ ಒನ್​ಡೌನ್ ಬಳಿಕ ಕ್ರೀಸ್​ಗೆ ಆಗಮಿಸಿದ ಸ್ಟೀವ್ ಸ್ಮಿತ್ (10) ಬಂದ ವೇಗದಲ್ಲೇ ಮರಳಿ ನಿರಾಸೆ ಮೂಡಿಸಿದರು. ಈ ವೇಳೆ ಎಚ್ಚರಿಕೆಯ ಆಟದತ್ತ ಮುಖ ಮಾಡಿದ ವಾರ್ನರ್ 31 ಓವರ್​ನಲ್ಲಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಈ ಮೊತ್ತಕ್ಕೆ 23 ರನ್​ಗಳು ಸೇರುವಷ್ಟರಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಸಹ ಪೆವಿಲಿಯನ್ ಕಡೆ ಮುಖ ಮಾಡಿದರು.

ಆದರೆ ಮತ್ತೊಂದೆಡೆ ಅಮೋಘ ಇನಿಂಗ್ಸ್ ಆಡಿದ ಡೇವಿಡ್ ವಾರ್ನರ್​ 102 ಎಸೆತಗಳಲ್ಲಿ ಶತಕ ಪೂರೈಸಿ ಮೂಲಕ ಮಿಂಚಿದರು. ಇದರಲ್ಲಿ 1 ಸಿಕ್ಸರ್ ಹಾಗೂ 11 ಭರ್ಜರಿ ಬೌಂಡರಿಗಳು ಮೂಡಿ ಬಂದಿದ್ದವು. ತಂಡದ ಮೊತ್ತ 241 ಆಗಿದ್ದಾಗ ಭರ್ಜರಿ ಹೊಡೆತಕ್ಕೆ ಕೈ ಹಾಕಿದ ವಾರ್ನರ್ (107) ಶಾಹೀನ್ ಅಫ್ರಿದಿ ವಿಕೆಟ್ ಒಪ್ಪಿಸಿದರು.

ಅಮೀರ್ ಮಾರಕ ದಾಳಿಗೆ ನಲುಕಿದ ಆಸೀಸ್ ಆಟಗಾರರು ತಮ್ಮ ಆಟವನ್ನು 49 ಓವರ್​ಗೆ ಸೀಮಿತಗೊಳಿಸಿ 307 ರನ್​ಗಳಿಗೆ ಸರ್ವಪತನ ಕಂಡಿತು.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ- 307

ಡೇವಿಡ್ ವಾರ್ನರ್- 107
ಆರೋನ್ ಫಿಂಚ್ -82

ಮೊಹಮ್ಮದ್ ಅಮೀರ್- 30/5
First published:June 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ