Australia vs Pakistan , ICC Cricket World Cup 2019: ಆಸೀಸ್ ಬೌಲರ್​ಗಳ ಎದುರು ಮಂಡಿಯೂರಿದ ಪಾಕ್ ಬ್ಯಾಟ್ಸ್​ಮನ್​ಗಳು

ಇನ್ನೊಂದೆಡೆ ಕ್ರೀಸ್ ಕಚ್ಚಿ ಆಡುತ್ತಿದ್ದ ಇಮಾಮ್​ರೊಂದಿಗೆ ಅನುಭವಿ ಆಟಗಾರ ಮೊಹಮ್ಮದ್ ಹಫೀಜ್ ಜೊತೆಗೂಡಿದರು.

zahir | news18
Updated:June 12, 2019, 10:43 PM IST
Australia vs Pakistan , ICC Cricket World Cup 2019: ಆಸೀಸ್ ಬೌಲರ್​ಗಳ ಎದುರು ಮಂಡಿಯೂರಿದ ಪಾಕ್ ಬ್ಯಾಟ್ಸ್​ಮನ್​ಗಳು
.
  • News18
  • Last Updated: June 12, 2019, 10:43 PM IST
  • Share this:
ಟೌಂಟನ್: ವಿಶ್ವಕಪ್‌ನ 17ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಆಸ್ಟ್ರೇಲಿಯಾ ತಂಡ 41 ರನ್​ಗಳ ಭರ್ಜರಿ ಜಯ ಸಾಧಿಸಿದೆ.​ ಆಸೀಸ್ ನೀಡಿದ 307 ರನ್​ಗಳ ಕಠಿಣ ಗುರಿ ಬೆನ್ನತ್ತಿದ್ದ ಪಾಕ್ ತಂಡ 266 ರನ್​ಗಳಿಗೆ ಸರ್ವಪತನ ಕಾಣುವ ಮೂಲಕ ಸೋಲೊಪ್ಪಿಕೊಂಡಿದೆ. ಕೊನೆಯ ಹಂತದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯವನ್ನು ಬೌಲರ್​ಗಳ ಸಂಘಟಿತ ದಾಳಿ ಮೂಲಕ ಗೆದ್ದುಕೊಳ್ಳುವಲ್ಲಿ ಕಾಂಗರೂ ಪಡೆ ಕೊನೆಗೂ ಯಶಸ್ವಿಯಾಯಿತು.

ಇದಕ್ಕೂ ಮುನ್ನ ಟಾಸ್ ಗೆದ್ದ ಪಾಕ್ ನಾಯಕ ಸರ್ಫರಾಜ್ ಅಹ್ಮದ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಇಳಿದ  ಡೇವಿಡ್ ವಾರ್ನರ್ ಮತ್ತು ನಾಯಕ ಆರೋನ್ ಫಿಂಚ್ ಭರ್ಜರಿ ಆರಂಭ ಒದಗಿಸಿದರು.

ಮೊದಲ ಹತ್ತು ಓವರ್​ನಲ್ಲಿ ತಾಳ್ಮೆಯ ಆಟದೊಂದಿಗೆ ಇನಿಂಗ್ಸ್ ಕಟ್ಟಿದ್ದ ಈ ಜೋಡಿ, ಬಳಿಕ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಪರಿಣಾಮ 16 ಓವರ್​ ಆಗುವಷ್ಟರಲ್ಲಿ ತಂಡದ ಮೊತ್ತವು 100ರ ಗಡಿದಾಟಿತ್ತು. ಈ ನಡುವೆ 63 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಫಿಂಚ್ ಹೊಡಿಬಡಿ ಆಟಕ್ಕೆ ಮುಂದಾದರು.

ಈ ಮಧ್ಯೆ ಯುವ ವೇಗಿ ಮೊಹಮ್ಮದ್ ಅಮೀರ್ ಎಸೆತಕ್ಕೆ ಬಲಿಯಾದ ಫಿಂಚ್ (82)​ ಪಾಕ್​ನ ಮೊದಲ ಯಶಸ್ಸಾಗಿ ಹೊರ ನಡೆದರು. ಅದಾಗಲೇ ಮೊದಲ ವಿಕೆಟ್​ಗೆ 146 ರನ್​ಗಳ ಜೊತೆಯಾಟ ನೀಡಿದ್ದ ಫಿಂಚ್ ಮತ್ತು ವಾರ್ನರ್ ಆಸೀಸ್ ತಂಡಕ್ಕೆ ಭದ್ರ ಬುನಾದಿ ಹಾಕುವಲ್ಲಿ ಯಶಸ್ವಿಯಾಗಿದ್ದರು.

ಇನ್ನು ಅತ್ಯುತ್ತಮ ಹೊಡೆತಗಳಿಂದ ಗಮನ ಸೆಳೆದ ವಾರ್ನರ್ ಮತ್ತೊಂದು ಅರ್ಧಶತಕಗಳಿಸಿ ಗಮನ ಸೆಳೆದರು. ಆದರೆ ಒನ್​ಡೌನ್ ಬಳಿಕ ಕ್ರೀಸ್​ಗೆ ಆಗಮಿಸಿದ ಸ್ಟೀವ್ ಸ್ಮಿತ್ (10) ಬಂದ ವೇಗದಲ್ಲೇ ಮರಳಿ ನಿರಾಸೆ ಮೂಡಿಸಿದರು. ಈ ವೇಳೆ ಎಚ್ಚರಿಕೆಯ ಆಟದತ್ತ ಮುಖ ಮಾಡಿದ ವಾರ್ನರ್ 31 ಓವರ್​ನಲ್ಲಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಈ ಮೊತ್ತಕ್ಕೆ 23 ರನ್​ಗಳು ಸೇರುವಷ್ಟರಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ (20) ಸಹ ಪೆವಿಲಿಯನ್ ಕಡೆ ಮುಖ ಮಾಡಿದರು.ಆದರೆ ಮತ್ತೊಂದೆಡೆ ಅಮೋಘ ಇನಿಂಗ್ಸ್ ಆಡಿದ ಡೇವಿಡ್ ವಾರ್ನರ್​ 102 ಎಸೆತಗಳಲ್ಲಿ ಶತಕ ಪೂರೈಸಿ ಮೂಲಕ ಮಿಂಚಿದರು. ಇದರಲ್ಲಿ 1 ಸಿಕ್ಸರ್ ಹಾಗೂ 11 ಭರ್ಜರಿ ಬೌಂಡರಿಗಳು ಮೂಡಿ ಬಂದಿದ್ದವು. ತಂಡದ ಮೊತ್ತ 241 ಆಗಿದ್ದಾಗ ಭರ್ಜರಿ ಹೊಡೆತಕ್ಕೆ ಕೈ ಹಾಕಿದ ವಾರ್ನರ್ (107) ಶಾಹೀನ್ ಅಫ್ರಿದಿ ವಿಕೆಟ್ ಒಪ್ಪಿಸಿದರು.
Loading...ವಾರ್ನರ್​ ನಿರ್ಗಮನದ ಮೇಲುಗೈ ಸಾಧಿಸಿದ ಪಾಕ್ ಬೌಲರ್​ಗಳ ಮುಂದೆ ಆಸೀಸ್ ಬ್ಯಾಟ್ಸ್​ಮನ್​ ಮಂಡಿಯೂರಿದರು. ಉಸ್ಮಾನ್ ಖ್ವಾಜಾ (18) ಹಾಗೂ ಅಲೆಕ್ಸ್ ಕ್ಯಾರಿ (20) ಒಂದಷ್ಟು ಪ್ರತಿರೋಧ ತೋರಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳು ಎರಡಂಕಿ ಗಳಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಉತ್ತಮ ಆರಂಭದ ಹೊರತಾಗಿಯು ದಿಢೀರ್ ಕುಸಿತಕ್ಕೆ ಒಳಗಾದ ತಂಡವು 49 ಓವರ್​ಗಳಲ್ಲಿ ಸರ್ವಪತನ ಕಂಡಿತು.

ಇನ್ನು ಮಾರಕ ದಾಳಿ ಸಂಘಟಿಸಿದ ಮೊಹಮ್ಮದ್ ಅಮೀರ್ ಹತ್ತು ಓವರ್​ಗಳಲ್ಲಿ ಕೇವಲ 30 ರನ್​ ನೀಡಿ ಐದು ವಿಕೆಟ್ ಉರುಳಿಸಿ ಮಿಂಚಿದರು. ಇವರಿಗೆ ಸಾಥ್ ನೀಡಿದ ಹಸನ್ ಅಲಿ 67 ಕ್ಕೆ 3 ವಿಕೆಟ್ ಕಬಳಿಸಿ ಗಮನ ಸೆಳೆದರು.

ಅಮೀರ್


308 ರನ್​ಗಳ ಸವಾಲಿನ ಮೊತ್ತವನ್ನು ಬೆನ್ನತ್ತಿದ್ದ ಪಾಕ್ ಆರಂಭ ಉತ್ತಮವಾಗಿರಲಿಲ್ಲ. ವೈಯುಕ್ತಿಕ ಖಾತೆ ತೆರೆಯುವ ಮುನ್ನವೇ ಆರಂಭಿಕ ಫಖರ್ ಜಮಾನ್ ಸೊನ್ನೆಯೊಂದಿಗೆ ಪೆವಿಲಿಯನ್​ಗೆ ಮರಳಿದ್ದರು. ಈ ಹಂತದಲ್ಲಿ ಜತೆಗೂಡಿದ ಇಮಾಮ್ ಉಲ್ ಹಕ್ ಹಾಗೂ ಬಾಬರ್ ಅಜಾಮ್ ತಂಡದ ಇನಿಂಗ್ಸ್​ ಕಟ್ಟಲು ಪಣ ತೊಟ್ಟರು. ಆಸೀಸ್ ವೇಗಿಗಳ ಮಾರಕ ಎಸೆತಗಳನ್ನು ಇಮಾಮ್ ಉಲ್ ಹಕ್ ಎಚ್ಚರಿಕೆಯಿಂದ ಎದುರಿಸಿದರೆ, ಬಾಬರ್ ಆಜಂ ಹೊಡಿಬಡಿ ಆಟಕ್ಕೆ ಒತ್ತು ನೀಡಿದರು.

ಪರಿಣಾಮ ನಿಧಾನಗತಿಯಲ್ಲಿ ತಂಡದ ರನ್ ಏರಿಕೆಯತ್ತ ಸಾಗಿತು. ಈ ವೇಳೆ ದಾಳಿಗಿಳಿದ ನಾಥನ್ ಕೌಲ್ಟರ್​ ನೈಲ್​ ಎಸೆತವನ್ನು ಸರಿಯಾಗಿ ಗುರುತಿಸುವಲ್ಲಿ ಎಡವಿದ ಬಾಬರ್(30) ತಮ್ಮ ವಿಕೆಟ್ ಒಪ್ಪಿಸಿದರು. ಅದಾಗಲೇ 54 ರನ್​ಗಳ ಜೊತೆಯಾಟವಾಡಿದ್ದ ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ್ದರು.

ಇನ್ನೊಂದೆಡೆ ಕ್ರೀಸ್ ಕಚ್ಚಿ ಆಡುತ್ತಿದ್ದ ಇಮಾಮ್​ರೊಂದಿಗೆ ಅನುಭವಿ ಆಟಗಾರ ಮೊಹಮ್ಮದ್ ಹಫೀಜ್ ಜೊತೆಗೂಡಿದರು. ಉತ್ತಮ ಜತೆಯಾಟದಲ್ಲಿ ಭಾಗಿಯಾದ ಹಫೀಜ್ ಬಿರುಸಿನ ಆಟದತ್ತ ಹೆಚ್ಚು ಗಮನ ಹರಿಸಿದರು. ಇದರಿಂದ 18ನೇ ಓವರ್​ನಲ್ಲೇ ತಂಡದ ಮೊತ್ತ 100ರ ಅಂಚಿಗೆ ಬಂದು ತಲುಪಿತ್ತು.

ಹಫೀಜ್ ಜೊತೆಚ 80 ರನ್​ಗಳ ಉತ್ತಮ ಜೊತೆಯಾಟದ ಕಾಣಿಕೆ ನೀಡಿದ ಇಮಾಮ್ ಉಲ್ ಹಕ್ ಅರ್ಧಶತಕ ಬಾರಿಸಿ ಗಮನ ಸೆಳೆದರು. ಆದರೆ ಬ್ಯಾಟ್​ ಮೇಲೆಕ್ಕೆತ್ತಿದ ಬೆನ್ನಲ್ಲೇ ಇಮಾಮ್ (53) ಕಮ್ಮಿನ್ಸ್​ಗೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು.

ಇದರ ನಡುವೆ ದಾಳಿಗಿಳಿದ ಆಸೀಸ್ ನಾಯಕ ಆರೋನ್ ಫಿಂಚ್ ತಮ್ಮ ಸ್ಪಿನ್ ಬೌಲಿಂಗ್​ ಮೂಲಕ ಅಪಾಯಕಾರಿ ಹಫೀಜ್​ರನ್ನು ಹೊರದಬ್ಬಿದರು. 46 ರನ್​ಗಳಿಸಿದ್ದ ಹಫೀಜ್ ಬೆನ್ನಲ್ಲೇ ಶೊಯೇಬ್ ಮಲ್ಲಿಕ್ ಔಟಾಗುವ ಮೂಲಕ ಪಾಕ್ ಪಾಳಯಕ್ಕೆ ಶಾಕ್ ನೀಡಿದರು.

147 ರನ್‌ಗಳಿಗೆ ಪ್ರಮುಖ ಐದು ವಿಕೆಟುಗಳನ್ನು ಕಳೆದುಕೊಂಡ ಪಾಕಿಸ್ತಾನದ ಅನಾಭವಿ ಆಟಗಾರರು ವಿಕೆಟ್ ಕೈಚೆಲ್ಲುವ ಮೂಲಕ ತಂಡವನ್ನು ಇಕ್ಕಟಿಗೆ ಸಿಲುಕಿಸಿದರು. ನಿರ್ಣಾಯಕ ಹಂತದಲ್ಲಿ ನಾಯಕನ ಆಟವಾಡಿದ ಸರ್ಫರಾಜ್ ಅಹ್ಮದ್ ಬೌಲರ್ ವಹಾಬ್​ ರಿಯಾಜ್​ರೊಂದಿಗೆ ಗೆಲುವಿ ಹೋರಾಟವನ್ನು ಮುಂದುವರಿಸಿದರು.

ಉತ್ತಮ ಜೊತೆಯಾಟದೊಂದಿಗೆ ಗಮನ ಸೆಳೆದ ಈ ಜೋಡಿ 40 ಓವರ್​ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 7 ವಿಕೆಟ್ ನಷ್ಟಕ್ಕೆ 230ಕ್ಕೆ ತಂದು ನಿಲ್ಲಿಸಿದರು. 39 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್​ನೊಂದಿಗೆ ಬ್ಯಾಟ್ ಬೀಸುತ್ತಿದ್ದ ವಯಾಬ್​ಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ಕೊನೆಗೂ ಸ್ಟಾರ್ಕ್​ ಯಶಸ್ವಿಯಾದರು. ಪರಿಣಾಮ ಕೀಪರ್ ಕ್ಯಾಚಿತ್ತು 45 ರನ್​ಗಳ ತಮ್ಮ ಹೋರಾಟವನ್ನು ವಹಾಬ್ ರಿಯಾಜ್ ಅಂತ್ಯಗೊಳಿಸಿದರು.

ಇನ್ನು ಅತೀ ನಿರ್ಣಾಯಕ ಎಂಬಂತಹ ಘಟ್ಟದಲ್ಲಿ ಮೊಹಮ್ಮದ್ ಅಮೀರ್ ಕ್ಲೀನ್ ಬೌಲ್ಡ್​ ಮೂಲಕ ವಿಕೆಟ್​ ಒಪ್ಪಿಸಿದರೆ, ಕೊನೆಯವರೆಗೂ ಏಕಾಂಗಿಯಾಗಿ ಕೆಚ್ಚೆದೆಯ ಪ್ರದರ್ಶನ ನೀಡಿದ ಪಾಕ್ ನಾಯಕ ಸರ್ಫರಾಜ್ (40) ರನೌಟ್​ಗೆ ಬಲಿಯಾದರು. ಈ ಮೂಲಕ ಪಾಕ್ ತಂಡವು 266 ರನ್​ಗಳಿಗೆ ಸರ್ವಪತನ ಕಂಡಿತು. ಸಂಘಟಿತ ಪ್ರದರ್ಶನದ ನೀಡಿದ ಆಸೀಸ್ ಪಡೆ ಕೊನೆಗೂ 41 ರನ್​ಗಳ ಅಂತರದಿಂದ ಗೆದ್ದು ಬೀಗಿದರು.
ಆಸ್ಟ್ರೇಲಿಯಾ ಪರ ಕಮ್ಮಿನ್ಸ್ 33 ರನ್​ಗಳಿಗೆ 3 ವಿಕೆಟ್ ಉರುಳಿಸಿದರೆ, ಸ್ಟಾರ್ಕ್​ 43 ರನ್​ಗಳಿಗೆ 2 ವಿಕೆಟ್ ಕಬಳಿಸಿ ಮಿಂಚಿದರು.
First published:June 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...