AUS vs PAK: ವಾರ್ನರ್ ದಾಖಲೆಯ ತ್ರಿಶತಕ; 589 ರನ್​ಗೆ ಡಿಕ್ಲೇರ್ ಘೋಷಿಸಿದ ಆಸ್ಟ್ರೇಲಿಯಾ!

ಆಸ್ಟ್ರೇಲಿಯಾ ಒಟ್ಟು 127 ಓವರ್ ಆಡಿ 3 ವಿಕೆಟ್ ನಷ್ಟಕ್ಕೆ 589 ರನ್​ಗೆ ಡಿಕ್ಲೇರ್ ಘೊಷಿಸಿತು. ಇದು ಡೇ ನೈಟ್ ಟೆಸ್ಟ್​ ಪಂದ್ಯದಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ. ಡೇವಿಡ್ ವಾರ್ನರ್ 418 ಎಸೆತಗಳಲ್ಲಿ 39 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ ಅಜೇಯ 335 ರನ್ ಕಲೆಹಾಕಿದರು.

ಇನ್ನು ಟೆಸ್ಟ್ ತಂಡದಲ್ಲಿ ಆರಂಭಿಕರಾಗಿ ಅಲೆಸ್ಟರ್ ಕುಕ್ ಹಾಗೂ ಡೇವಿಡ್ ವಾರ್ನರ್ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನು ಟೆಸ್ಟ್ ತಂಡದಲ್ಲಿ ಆರಂಭಿಕರಾಗಿ ಅಲೆಸ್ಟರ್ ಕುಕ್ ಹಾಗೂ ಡೇವಿಡ್ ವಾರ್ನರ್ ಸ್ಥಾನ ಪಡೆದುಕೊಂಡಿದ್ದಾರೆ.

  • Share this:
ಬೆಂಗಳೂರು (ನ. 30): ಅಡಿಲೇಡ್​ನಲ್ಲಿ ಸಾಗುತ್ತಿರುವ ಪಾಕಿಸ್ತಾನ ವಿರುದ್ಧದ ಎರಡನೇ ಡೇ ನೈಟ್ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಡೇವಿಡ್ ವಾರ್ನರ್ ಅವರ ಅಮೋಘ ತ್ರಿಶತಕ ಹಾಗೂ ಮಾರ್ನಸ್ ಲಬುಸ್ಚಗ್ನೆ ಅವರ ಶತಕದ ನೆರವಿನಿಂದ ಆಸೀಸ್ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 589 ರನ್​ ಡಿಕ್ಲೇರ್ ಮಾಡಿಕೊಂಡಿದೆ.

ಡೇವಿಡ್ ವಾರ್ನರ್ ತಮ್ಮ ವೃತ್ತಿಜೀವನದ ಮೊದಲ ತ್ರಿಶತಕ ಬಾರಿಸಿ ನಿಷೇಧದ ನಂತರ ಭರ್ಜರಿ ಕಮ್​ಬ್ಯಾಕ್ ಮಾಡಿದ್ದಾರೆ. 389 ಎಸೆತಗಳಲ್ಲಿ 38 ಬೌಂಡರಿ ಬಾರಿಸಿ ವಾರ್ನರ್ 300 ರನ್ ಪೂರೈಸಿದರು.

 ಇದು ಫುಟ್ಬಾಲ್ ಅಥವಾ ಕ್ರಿಕೆಟ್?; ಆಸೀಸ್ ವಿರುದ್ಧದ ಟೆಸ್ಟ್​ನಲ್ಲಿ ಪಾಕ್ ಫೀಲ್ಡರ್​ನ ಎಡವಟ್ಟು ನೀವೇ ನೋಡಿ!

ಇದು ಟೆಸ್ಟ್ ಇತಿಹಾಸದ 31ನೇ ತ್ರಿಶತಕ ಹಾಗೂ ಆಸ್ಟ್ರೇಲಿಯಾ ಪರ 8ನೇ ತ್ರಿಶತಕವಾಗಿದೆ. ಅಲ್ಲದೆ ಆಸ್ಟ್ರೇಲಿಯಾ ಪರ ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ರನ್ ಬಾರಿಸಿದ 2ನೇ ಆಟಗಾರ ವಾರ್ನರ್ ಆಗಿದ್ದಾರೆ.

ಇವರ ಜೊತೆ ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧ ಶಿಕ್ಷೆ ಅನುಭವಿಸಿದ ನಂತರ ಭರ್ಜರಿಯಾಗಿ ಕ್ರಿಕೆಟ್​ಗೆ ಮರಳಿರುವ ಮಾಜಿ ನಾಯಕ ಸ್ಟೀವ್ ಸ್ಮಿತ್ 73 ವರ್ಷದ ಹಿಂದಿನ ದಾಖಲೆ ಮುರಿದ ಸಾಧನೆ ಮಾಡಿದ್ದಾರೆ.

ಸ್ಮಿತ್ ಅತ್ಯಂತ ವೇಗವಾಗಿ 7000 ರನ್ ಪೂರೈಸಿದ ಸಾಧನೆ ಮಾಡಿದರು. 126 ಇನಿಂಗ್ಸ್ ನಲ್ಲಿ 7000 ರನ್ ಗಳಿಸುವಮೂಲಕ ಸ್ಮಿತ್ ಅವರು ಇಂಗ್ಲೆಂಡ್​ನ ವ್ಯಾಲಿ ಹ್ಯಾಮಂಡ್ (135 ಇನಿಂಗ್ಸ್) ಮಾಡಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು.

 ಈ ಬಾರಿಯ ಐಪಿಎಲ್​ನಲ್ಲಿ ಗೇಲ್ ಶತಕದ ದಾಖಲೆ ಪುಡಿಮಾಡುವವರು ಇವರಲ್ಲಿ ಯಾರು?

ಆಸ್ಟ್ರೇಲಿಯಾ ಒಟ್ಟು 127 ಓವರ್ ಆಡಿ 3 ವಿಕೆಟ್ ನಷ್ಟಕ್ಕೆ 589 ರನ್​ಗೆ ಡಿಕ್ಲೇರ್ ಘೊಷಿಸಿತು. ಇದು ಡೇ ನೈಟ್ ಟೆಸ್ಟ್​ ಪಂದ್ಯದಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ. ಡೇವಿಡ್ ವಾರ್ನರ್ 418 ಎಸೆತಗಳಲ್ಲಿ 39 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ ಅಜೇಯ 335 ರನ್ ಕಲೆಹಾಕಿದರು. ಲಬುಸ್ಚಗ್ನೆ 238 ಎಸೆತಗಳಲ್ಲಿ 22 ಬೌಂಡರಿಉ ಸಿಡಿಸಿ 162 ರನ್ ಕಲೆಹಾಕಿದರು. ಇವರಿಬ್ಬರ ಖಾತೆಯಿಂದ 361 ರನ್​ಗಳ ಅಮೋಘ ಜೊತೆಯಾಟ ಮೂಡಿಬಂತು.

ಪಾಕಿಸ್ತಾನ ಪರ ಶಾಹೀನ್ ಆಫ್ರಿದಿ 3 ವಿಕೆಟ್ ಕಿತ್ತರು. ಈಗಾಗಲೇ ಮೊದಲ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಇನ್ನಿಂಗ್ಸ್​ ಹಾಗೂ 5 ರನ್​ಗಳಿಂದ ಗೆಲುವು ಸಾಧಿಸಿದೆ. ಸದ್ಯ 2ನೇ ಟೆಸ್ಟ್​ನಲ್ಲಿ ಪಾಕ್​ಗೆ ಜಯ ಕಷ್ಟವಾಗಿದ್ದು, ಕನಿಷ್ಠ ಡ್ರಾ ಮಾಡುವತ್ತ ಚಿತ್ತನೆಟ್ಟಂತಿದೆ.

 

First published: