AUS vs NZ: ಕಿವೀಸ್ ವಿರುದ್ಧ ಟೆಸ್ಟ್​ ಸರಣಿ ಕ್ಲೀನ್ ಸ್ವೀಪ್; ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತದ ಸಮೀಪ ತಲುಪಿದ ಆಸೀಸ್!

ಆಸ್ಟ್ರೇಲಿಯಾ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಒಟ್ಟು 296 ಪಾಯಿಂಟ್​ನೊಂದಿಗೆ 2ನೇ ಸ್ಥಾನಕ್ಕೇರಿದೆ. ಮೊದಲ ಸ್ಥಾನದಲ್ಲಿ 360 ಅಂಕದೊಂದಿಗೆ ಭಾರತ ತಂಡವಿದೆ.

Vinay Bhat | news18-kannada
Updated:January 6, 2020, 3:48 PM IST
AUS vs NZ: ಕಿವೀಸ್ ವಿರುದ್ಧ ಟೆಸ್ಟ್​ ಸರಣಿ ಕ್ಲೀನ್ ಸ್ವೀಪ್; ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತದ ಸಮೀಪ ತಲುಪಿದ ಆಸೀಸ್!
ಆಸ್ಟ್ರೇಲಿಯಾ ತಂಡ
  • Share this:
ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದ್ದ ನ್ಯೂಜಿಲೆಂಡ್ ತಂಡ ಹೀನಾಯ ಸೋಲಿನೊಂದಿಗೆ ತವರಿಗೆ ಹಿಂತಿರುಗಿದೆ. ಅಂತಿಮ ಮೂರನೇ ಟೆಸ್ಟ್​ ಪಂದ್ಯದಲ್ಲೂ ಕಾಂಗರೂ ಪಡೆ 279 ರನ್​ಗಳ ಅಮೋಘ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್‌ಗೈದಿದೆ.

ಮಾರ್ನಸ್ ಲ್ಯಾಬುಶಾನೆ ದ್ವಿಶತಕ, ಡೇವಿಡ್ ವಾರ್ನರ್ ಶತಕ ಹಾಗೂ ನಥನ್ ಲಿಯಾನ್ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯಾ ಗೆಲುವು ಕಾಣುವಲ್ಲಿ ಯಶಸ್ವಿಯಾಯಿತು.

 



IND vs SL: ನಾಳೆಯ 2ನೇ ಟಿ-20 ಪಂದ್ಯಕ್ಕೂ ವರುಣನ ಅಡ್ಡಿ?; ಇಂದೋರ್ ಹವಾಮಾನ ಇಲಾಖೆ ಏನನ್ನುತ್ತೆ?

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 150.1 ಓವರ್​ನಲ್ಲಿ 454 ರನ್ ಗಳಿಸಿತು. ಮಾರ್ನಸ್ ಲ್ಯಾಬುಶಾನೆ 363 ಎಸೆತಗಳಲ್ಲಿ 215 ರನ್ ಬಾರಿಸಿದರು. ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಶುರು ಮಾಡಿದ ನ್ಯೂಜಿಲೆಂಡ್ ನಥನ್ ಲಿಯಾನ್ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಕೇವಲ 256 ರನ್​ಗೆ ಕಿವೀಸ್ ಸರ್ವಪತನ ಕಂಡಿತು.

198 ರನ್​ಗಳ ಉತ್ತಮ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ ಮತ್ತೊಂದು ಅಮೋಘ ಆಟವಾಡಿತು. ಡೇವಿಡ್ ವಾರ್ನರ್ 159 ಎಸೆತಗಳಲ್ಲಿ ಅಜೇಯ 111 ರನ್ ಸಿಡಿಸಿದರೆ, ಲ್ಯಾಬುಶಾನೆ 59 ರನ್ ಗಳಿಸಿದರು.

ಆಸ್ಟ್ರೇಲಿಯಾ 52 ಓವರ್​​ನಲ್ಲಿ 2 ವಿಕೆಟ್ ಕಳೆದುಕೊಂಡು 217 ರನ್ ಗಳಿಸಿರುವಾಗ ಡಿಕ್ಲೇರ್ ಘೋಷಿಸಿತು. ಈ ಮೂಲಕ ನ್ಯೂಜಿಲೆಂಡ್​ಗೆ ಗೆಲ್ಲಲು 416 ರನ್​ಗಳ ಬೃಹತ್ ಟಾರ್ಗೆಟ್ ನೀಡಿತು.

 



IPL 2020: ಆರ್​ಸಿಬಿ ತಂಡದಲ್ಲಿ ಪಾಕಿಸ್ತಾನ ಕ್ರಿಕೆಟಿಗ; ಈ ವಿಚಾರ ನೀವು ನಂಬಲೇ ಬೇಕು!

ಬೆಟ್ಟದಂತಹ ಗುರಿ ಬೆನ್ನಟ್ಟಿದ ಕಿವೀಸ್ ಮತ್ತೆ ಲಿಯಾನ್ ಸ್ಪಿನ್ ಬಲೆಗೆ ಸಿಲುಕಿತು. ತಂಡದ ಪರ ಕಾಲಿನ್ ಗ್ರ್ಯಾಂಡ್​ಹೋಮ್​ 52 ರನ್ ಗಳಿಸಿದ್ದೆ ಗರಿಷ್ಠ ಮೊತ್ತವಾಗಿತ್ತು. ನ್ಯೂಜಿಲೆಂಡ್ 47.5 ಓವರ್​ನಲ್ಲಿ ಕೇವಲ 136 ರನ್​ಗೆ ಆಲೌಟ್ ಆಗುವ ಮೂಲಕ ಸೋಲಿಗೆ ಶರಣಾಯಿತು.

ಆಸ್ಟ್ರೇಲಿಯಾ 279 ರನ್​ಗಳ ದೊಡ್ಡ ಅಂತರದ ಗೆಲುವಿನೊಂದಿಗೆ ಮೂರು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 3-0 ಅಂತರದಿಂದ ಸರಣಿ ಕ್ಲೀನ್​ಸ್ವೀಪ್ ಮಾಡಿತು. ಟೂರ್ನಿಯಿದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಲ್ಯಾಬುಶಾನೆ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

ಮೂರು ಪಂದ್ಯಗಳ ಟೆಸ್ಟ್​ ಸರಣಿ ಪೈಕಿ ಮೂರರಲ್ಲೂ ಆಸ್ಟ್ರೇಲಿಯಾ 200ಕ್ಕೂ ಅಧಿಕ ರನ್​ಗಳ ಅಂತರದಿಂದ ಗೆಲುವು ಸಾಧಿಸಿತು. ಮೊದಲ ಟೆಸ್ಟ್​ನಲ್ಲಿ 296, ಎರಡನೇ ಟೆಸ್ಟ್​ನಲ್ಲಿ 247 ಹಾಗೂ ಅಂತಿಮ ಟೆಸ್ಟ್​ನಲ್ಲಿ 279 ರನ್​ಗಳ ಜಯ ಸಾಧಿಸಿದ ಸಾಧನೆ ಮಾಡಿತು.

 



IND vs SL: ಪಂದ್ಯ ರದ್ದಾದರೂ ಗುವಾಹಟಿ ಅಭಿಮಾನಿಗಳ ಈ ವಿಡಿಯೋ ಎಲ್ಲರನ್ನು ರೋಮಾಂಚನ ಗೊಳಿಸುತು!

ಆಸ್ಟ್ರೇಲಿಯಾ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಒಟ್ಟು 296 ಪಾಯಿಂಟ್​ನೊಂದಿಗೆ 2ನೇ ಸ್ಥಾನಕ್ಕೇರಿದೆ. ಮೊದಲ ಸ್ಥಾನದಲ್ಲಿ 360 ಅಂಕದೊಂದಿಗೆ ಭಾರತ ತಂಡವಿದೆ.

First published:January 6, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ