AUS vs NZ: ಬೌಲ್ಟ್​ ಹ್ಯಾಟ್ರಿಕ್ ವಿಕೆಟ್, ಖ್ವಾಜಾ-ಅಲೆಕ್ಸ್​ ಜೊತೆಯಾಟದ ನೆರವು; ಕಿವೀಸ್​ಗೆ 244 ರನ್​ಗಳ ಟಾರ್ಗೆಟ್

100 ರನ್​ಗೂ ಮೊದಲೆ ಪ್ರಮುಖ 5 ವಿಕೆಟ್ ಕಳೆದುಕೊಂಡಿದ್ದ ಆಸೀಸ್​ಗೆ ನೆರವಾಗಿದ್ದು ಉಸ್ಮಾನ್ ಖ್ವಾಜಾ ಹಾಗೂ ಅಲೆಕ್ಸ್​ ಕ್ಯಾರಿ. ನಿಧಾನಗತಿಯಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ ವಿಕೆಟ್ ಕೈ ಚೆಲ್ಲದಂತೆ ನೋಡಿಕೊಂಡರು.

Vinay Bhat | news18
Updated:June 29, 2019, 9:43 PM IST
AUS vs NZ: ಬೌಲ್ಟ್​ ಹ್ಯಾಟ್ರಿಕ್ ವಿಕೆಟ್, ಖ್ವಾಜಾ-ಅಲೆಕ್ಸ್​ ಜೊತೆಯಾಟದ ನೆರವು; ಕಿವೀಸ್​ಗೆ 244 ರನ್​ಗಳ ಟಾರ್ಗೆಟ್
ಟ್ರೆಂಟ್ ಬೌಲ್ಟ್​
  • News18
  • Last Updated: June 29, 2019, 9:43 PM IST
  • Share this:
ಬೆಂಗಳೂರು (ಜೂ. 29): ಲಾರ್ಡ್ಸ್​​ ಮೈದಾನದಲ್ಲಿ ನಡೆಯುತ್ತಿರುವ ವಿಶ್ವಕಪ್​​ನ 37ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ. ಆರಂಭದಲ್ಲಿ ದಿಢೀರ್ ಕುಸಿತ ಕಂಡಿತಾದರು ಬಳಿಕ ಉಸ್ಮಾನ್ ಖ್ವಾಜಾ ಹಾಗೂ ಅಲೆಕ್ಸ್​ ಕ್ಯಾರಿ ಅವರ ಶತಕದ ಜೊತೆಯಾಟ ನೆರವಿನಿಂದ ಆಸೀಸ್, ಕಿವೀಸ್​ಗೆ ಗೆಲ್ಲಲು 244 ರನ್​ಗಳ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ನಾಯಕನ ಲೆಕ್ಕಾಚಾರವನ್ನು ಕಿವೀಸ್ ಬೌಲರ್​ಗಳು ಆರಂಭದಲ್ಲೇ ತಲೆಕೆಳಗಾಗಿಸಿದರು. ಫಿಂಚ್ ಕೇವಲ 8 ರನ್​ಗೆ ಔಟ್ ಆದರೆ, ಡೇವಿಡ್ ವಾರ್ನರ್ 16 ರನ್​ಗೆ ನಿರ್ಗಮಿಸಿದು. ಸ್ಟೀವ್ ಸ್ಮಿತ್ ಕೂಡ ಕೇವಲ 5 ರನ್​ಗೆ ಬ್ಯಾಟ್ ಕೆಳಗಿಟ್ಟರೆ, ಮಾರ್ಕಸ್ ಸ್ಟಾಯಿನಿಸ್ ಆಟ 21 ರನ್​ಗೆ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್​​ ಆಟ ಕೇವಲ 1 ರನ್​ಗೆ ಅಂತ್ಯವಾಯಿತು.

ಹೀಗೆ 100 ರನ್​ಗೂ ಮೊದಲೆ ಪ್ರಮುಖ 5 ವಿಕೆಟ್ ಕಳೆದುಕೊಂಡಿದ್ದ ಆಸೀಸ್​ಗೆ ನೆರವಾಗಿದ್ದು ಉಸ್ಮಾನ್ ಖ್ವಾಜಾ ಹಾಗೂ ಅಲೆಕ್ಸ್​ ಕ್ಯಾರಿ. ನಿಧಾನಗತಿಯಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ ವಿಕೆಟ್ ಕೈ ಚೆಲ್ಲದಂತೆ ನೋಡಿಕೊಂಡರು.

India vs England: ಕೇಸರಿ ಬಣ್ಣದ ಹೊಸ ಜೆರ್ಸಿ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತಾ?

92 ರನ್​ಗೆ 5ನೇ ವಿಕೆಟ್ ಕಳೆದುಕೊಂಡಿದ್ದ ತಂಡವನ್ನ 199ಕ್ಕೆ ತಂದಿಟ್ಟರು. ಈ ಮಧ್ಯೆ ಇಬ್ಬರೂ ಅರ್ಧಶತಕ ಸಿಡಿಸಿ ಮಿಂಚಿದರು. ಚೆನ್ನಾಗಿಯೆ ಆಡುತ್ತಿದ್ದ ಕ್ಯಾರಿ, ವಿಲಿಯಮ್ಸನ್ ಬೌಲಿಂಗ್​ನಲ್ಲಿ ಔಟ್ ಆಗಿದ್ದು, ಇವರಿಬ್ಬರ 107 ರನ್​ಗಳ ಜೊತೆಯಾಟಕ್ಕೆ ಬ್ರೇಕ್ ಬಿತ್ತು. 72 ಎಸೆತಗಳಲ್ಲಿ 71 ರನ್ ಬಾರಿಸಿ ಕ್ಯಾರಿ ಉತ್ತಮ ಆಟ ಪ್ರದರ್ಶಿಸಿದರು.

ಅಂತಿಮ ಹಂತದಲ್ಲಿ ಬ್ಯಾಟ್ ಬೀಸಿದ ಖ್ವಾಜಾ ಅತ್ಯುತ್ತಮ ರನ್ ಕಲೆಹಾಕಿದರು. ಆದರೆ ಕೊನೆಯ ಓವರ್​ನಲ್ಲಿ 88(129 ಎಸೆತ) ರನ್ ಗಳಿಸಿರುವಾಗ ಬೌಲ್ಡ್​ ಬೌಲಿಂಗ್​ನಲ್ಲಿ ಖ್ವಾಜಾ ಔಟ್ ಆದರು. ಖ್ವಾಜಾ ಔಟ್ ಆದ ಬೆನ್ನಲ್ಲೆ ಮಿಲೆಚ್ ಸ್ಟಾರ್ಕ್​ ಕ್ಲೀನ್ ಬೌಲ್ಡ್​ ಆದರೆ, ಮುಂದಿನ ಎಸೆತದಲ್ಲೇ ಬೆಹ್ರೆಂಡಾರ್ಫ್​​ ಕೂಡ ಎಲ್​ಬಿಗೆ ಬಲಿಯಾದರು. ಈ ಮೂಲಕ ಬೌಲ್ಟ್​ ಹ್ಯಾಟ್ರಿಕ್ ವಿಕೆಟ್ ಕಿತ್ತರು. ಅಲ್ಲದೆ ಈ ಬಾರಿಯ ವಿಶ್ವಕಪ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ 2ನೇ ಬೌಲರ್ ಆದರು.

ಅಂತಿಮವಾಗಿ ಆಸ್ಟ್ರೇಲಿಯಾ 50 ಓವರ್​ಗೆ 9 ವಿಕೆಟ್ ಕಳೆದುಕೊಂಡು 243 ರನ್ ಕಲೆಹಾಕಿತು. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್​​ 4 ವಿಕೆಟ್ ಕಿತ್ತರೆ, ಫರ್ಗುಸನ್ ಹಾಗೂ ಜೇಮ್ಸ್​ ನೀಶಮ್ ತಲಾ 2 ಹಾಗೂ ವಿಲಿಯಮ್ಸನ್ 1 ವಿಕೆಟ್ ಪಡೆದರು.
First published:June 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ