ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 467 ರನ್ಗೆ ಸರ್ವಪತನ ಕಂಡಿದೆ. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಶುರುಮಾಡಿರುವ ಕಿವೀಸ್ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಕ್ರಿಸ್ಮಸ್ ಮರುದಿನ ನಡೆಯುವ ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲ್ಪಡುವ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಆಸ್ಟ್ರೇಲಿಯವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಅದರಂತೆ ಆಸ್ಟ್ರೇಲಿಯ ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 257 ರನ್ ಗಳಿಸಿತು.
IPL 2020: ಆರ್ಸಿಬಿ 9 ಕೋಟಿ ರೆಡೆ ಮಾಡಿತ್ತು ಈ ಆಟಗಾರನನ್ನು ಕೊಳ್ಳಲು; ಆದ್ರೆ, ಕೊಹ್ಲಿ ಟೀಂ ಸೇರಿದ್ದು 50 ಲಕ್ಷಕ್ಕೆ!
ಎರಡನೇ ದಿನ ಬ್ಯಾಟಿಂಗ್ ಮುಂದುವರೆಸಿದ ಆಸ್ಟ್ರೇಲಿಯಾ ಉತ್ತಮ ಆಟ ಪ್ರದರ್ಶಿಸಿತು. ಟ್ರಾವಿಸ್ ಹೆಡ್(114) ಅಮೋಘ ಶತಕ ಸಿಡಿಸಿ ಮಿಂಚಿದರೆ, ನಾಯಕ ಟಿಮ್ ಪೈನ್(79) ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಇತ್ತ ಸ್ಟೀವ್ ಸ್ಮಿತ್ ಕೂಡ 85 ರನ್ ಗಳಿಸಿದರೆ, ಮಾರ್ನಸ್ ಲಾಬುಶೇನ್ 63 ರನ್ ಗಳಿಸಿದ್ದು ತಂಡ ದೊಡ್ಡ ಮೊತ್ತ ಕಲೆಹಾಕಲು ನೆರವಾಯಿತು.
ಅಂತಿಮವಾಗಿ ಆಸ್ಟ್ರೇಲಿಯಾ 155.1 ಓವರ್‌ನಲ್ಲಿ 467 ರನ್ಗೆ ಆಲೌಟ್ ಆಯಿತು. ಕಿವೀಸ್ ಪರ ನೈಲ್ ವಾಗ್ನರ್ 4 ವಿಕೆಟ್ ಕಿತ್ತರೆ, ಟಿಮ್ ಸೌಥಿ 3, ಗ್ರ್ಯಾಂಡ್ಹೋಮ್ 2 ಹಾಗೂ ಟ್ರೆಂಟ್ ಬೌಲ್ಟ್ 1 ವಿಕೆಟ್ ಪಡೆದರು.
ವಿಶ್ವ ಇಲೆವೆನ್ ವಿರುದ್ಧ ಭಾರತದ 5 ಆಟಗಾರರ ಜೊತೆ ಪಾಕ್ ಪ್ಲೇಯರ್ಸ್?; ಬಿಸಿಸಿಐ ಹೇಳಿದ್ದೇನು?
ಈ ಪಂದ್ಯದಲ್ಲಿ ಆಸ್ಟ್ರೇಲಿಯದ ಸಾರ್ವಕಾಲಿಕ ಶ್ರೇಷ್ಠ ಅಗ್ರ-10 ರನ್ ಸ್ಕೋರರ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಪ್ರಮುಖ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಮತ್ತೊಂದು ಮೈಲುಗಲ್ಲು ತಲುಪಿದರು.
ಬಾಕ್ಸಿಂಗ್ ಡೇ ಟೆಸ್ಟ್ನ ಮೊದಲ ದಿನ ಸ್ಮಿತ್ ವಿಶೇಷ ಸಾಧನೆ ಮಾಡಿದರು. 51ನೇ ಓವರ್‌ನಲ್ಲಿ ಒಂದು ರನ್ ಗಳಿಸಿದ ಸ್ಮಿತ್ ಮಾಜಿ ಟೆಸ್ಟ್ ನಾಯಕ ಗ್ರೆಗ್ ಚಾಪೆಲ್ (7,110 ರನ್) ದಾಖಲೆಯನ್ನು ಹಿಂದಿಕ್ಕಿದರು. ಈ ಮೂಲಕ ಆಸ್ಟ್ರೇಲಿಯದ ಸಾರ್ವಕಾಲಿಕ ಶ್ರೇಷ್ಠ ರನ್ ಸ್ಕೋರರ್‌ಗಳ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದ್ದಾರೆ.
ತನ್ನದೇ ತಂಡದ ಹಿಂದೂ ಆಟಗಾರನ ಜೊತೆ ಪಾಕ್ ಪ್ಲೇಯರ್ಗಳ ಅನುಚಿತ ವರ್ತನೆ; ಅಚ್ಚರಿಯ ಮಾಹಿತಿ ಬಹಿರಂಗ
ಇನ್ನು ಕಳೆದ 32 ವರ್ಷಗಳಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಇದೇ ಮೊದಲ ಬಾರಿ ಎಂಸಿಜಿ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಮುಖಾಮುಖಿಯಾಗಿದ್ದು.
ಈ ಪಂದ್ಯ ವೀಕ್ಷಣೆಗೆ ಮೊದಲ ದಿನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ 80,473 ಪ್ರೇಕ್ಷಕರು ಹಾಜರಿದ್ದರು. ಟೆಸ್ಟ್ ಪಂದ್ಯ ವೀಕ್ಷಣಗೆ ಎಂಸಿಜಿ ಕ್ರೀಡಾಂಗಣದಲ್ಲಿ ಹಾಜರಾದ ದಾಖಲೆಯ ಪ್ರೇಕ್ಷಕರ ಸಂಖ್ಯೆ ಇದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ