IND vs AUS: ಇಡೀ ಪಂದ್ಯದ ಗತಿಯನ್ನೇ ಬದಲಾಯಿಸಿತು ಆ ಒಂದು ರೋಚಕ ಕ್ಯಾಚ್: ಇಲ್ಲಿದೆ ವಿಡಿಯೋ

ಯಜುವೇಂದ್ರ ಚಹಾಲ್ ಬೌಲಿಂಗ್​ನಲ್ಲಿ ಸ್ಟೀವ್ ಸ್ಮಿತ್ ಕೇವಲ 9 ಎಸೆತಗಳಲ್ಲಿ 12 ರನ್ ಗಳಿಸಿ ಸಂಜು ಸ್ಯಾಮ್ಸನ್ ಡೈ ಬಿದ್ದು ಹಿಡಿದ ರೋಚಕ ಕ್ಯಾಚ್​ಗೆ ಬಲಿಯಾಗಬೇಕಾಯಿತು.

Sanju Samson

Sanju Samson

  • Share this:
    ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾರತ 11 ರನ್​ಗಳ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಈ ಮೂಲಕ ಏಕದಿನ ಸರಣಿ ಸೋಲಿನ ಸೇಡು ತೀರಿಸಿಕೊಳ್ಳುವಲ್ಲಿ ಕೊಹ್ಲಿ ಪಡೆ ಮೊದಲ ಹೆಜ್ಜೆಯಿಟ್ಟಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಗೆಲುವು ಅಷ್ಟೊಂದು ಸುಲಭವಾಗಿರಲಿಲ್ಲ. ಕಾಂಗರೂ ಪಡೆಗೆ ಬೆಟ್ಟದಂತಹ ಟಾರ್ಗೆಟ್ ಅನ್ನೇನು ನೀಡಿರಲಿಲ್ಲ. ಆದರೂ ಭಾರತೀಯರು ಎರಡನೇ ಇನ್ನಿಂಗ್ಸ್​ನಲ್ಲಿ ಬೌಲಿಂಗ್ ಜೊತೆಗೆ ಫೀಲ್ಡಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿ ಜಯ ತಮ್ಮದಾಗಿಸಿಕೊಂಡರು.

    ಪ್ರಮುಖವಾಗಿ ಭಾರತ ಗೆಲ್ಲಲು ಕಾರಣವಾಗಿದ್ದು ಶ್ರೇಷ್ಠ ಫೀಲ್ಡರ್ ಸಂಜು ಸ್ಯಾಮ್ಸನ್ ಓಡಿ ಬಂದು ಡೈ ಹೊಡೆದು ಹಿಡಿದ ಸ್ಟೀವ್ ಸ್ಮಿತ್ ಅವರ ಆ ಅದ್ಭುತ ಕ್ಯಾಚ್. ಹೌದು, ಕೊಹ್ಲಿ ಪಡೆ ಏಕದಿನ ಸರಣಿ ಸೋಲಲು ಪ್ರಮುಖ ಕಾರಣ ಸ್ಟೀವ್ ಸ್ಮಿತ್. ಸತತ ಎರಡು ಶತಕ ಸಿಡಿಸಿ ಭಾರತಕ್ಕೆ ಕಂಟಕವಾಗಿ ಪರಿಣಮಿಸಿದರು. ಭರ್ಜರಿ ಫಾರ್ಮ್​ನಲ್ಲಿರುವ ಸ್ಮಿತ್​ರನ್ನು ಟಿ-20 ಯಲ್ಲಿ ಕಟ್ಟಿ ಹಾಕುವುದು ಹೇಗೆ ಎಂಬುದೇ ಭಾರತಕ್ಕೆ ದೊಡ್ಡ ತಲೆನೋವಾಗಿತ್ತು.

    India vs Australia: ಟಿ-20ಯಲ್ಲಿ ಶುಭಾರಂಭ ಮಾಡಿದ ಖುಷಿಯಲ್ಲಿದ್ದ ಭಾರತಕ್ಕೆ ಬರ ಸಿಡಿಲಿನಂತೆ ಬಂತು ಆಘಾತ

    ಆದರೆ, ಯಜುವೇಂದ್ರ ಚಹಾಲ್ ಬೌಲಿಂಗ್​ನಲ್ಲಿ ಸ್ಟೀವ್ ಸ್ಮಿತ್ ಕೇವಲ 9 ಎಸೆತಗಳಲ್ಲಿ 12 ರನ್ ಗಳಿಸಿ ಸಂಜು ಸ್ಯಾಮ್ಸನ್ ಡೈ ಬಿದ್ದು ಹಿಡಿದ ರೋಚಕ ಕ್ಯಾಚ್​ಗೆ ಬಲಿಯಾಗಬೇಕಾಯಿತು. ಇದು ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು. ಅಲ್ಲದೆ ಆಸ್ಟ್ರೇಲಿಯಾದ ರನ್​ ಗತಿ ಕುಸಿಯಲು ಮುಖ್ಯ ಕಾರಣವಾಯಿತು.





    ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ಕೆ. ಎಲ್ ರಾಹುಲ್ ಅವರ 51 ಹಾಗೂ ರವೀಂದ್ರ ಜಡೇಜಾ ಅವರ ಅಜೇಯ 44 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 161 ರನ್ ಗಳಿಸಿತು. ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಯಜುವೇಂದ್ರ ಚಹಾಲ್ ಹಾಗೂ ಟಿ. ನಟರಾಜನ್ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್​ಗಳಲ್ಲಿ 150 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲುಂಡಿತು.





    KL Rahul: ಕೊಹ್ಲಿ, ಫಿಂಚ್, ಬಾಬರ್ ಜೊತೆ ದಾಖಲೆ ಹಂಚಿಕೊಂಡ ಕೆಎಲ್ ರಾಹುಲ್..!

    ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ ಚಹಾಲ್:

    ಹೌದು, ಯಜುವೇಂದ್ರ ಚಹಾಲ್ ಪಂದ್ಯ ಆರಂಭಕ್ಕೂ ಮುನ್ನ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಮಿಚೆಲ್‌ ಸ್ಟಾರ್ಕ್‌ ಎಸೆದ ಬೌನ್ಸರ್‌ನಲ್ಲಿ ರವೀಂದ್ರ ಜಡೇಜಾ ಹೆಲ್ಮೆಟ್‌ಗೆ ಚೆಂಡು ಬಡಿದ ಅವರು ಕಣಕ್ಕಿಳಿಯುವಂತಿರಲಿಲ್ಲ. ಐಸಿಸಿಯ ನೂತನ ನಿಯಮದ ಪ್ರಕಾರ ಗಾಯಗೊಂಡರೆ ಬದಲಿ ಆಟಗಾರರನ್ನು ಕಣಕ್ಕಿಳಿಸಬಹುದು. ಹೀಗಾಗಿ ಜಡೇಜಾ ಸ್ಥಾನದಲ್ಲಿ ಯಜುವೇಂದ್ರ ಚಹಾಲ್ ಮೈದಾನಕ್ಕಿಳಿದರು. ಅದ್ಭುತ ಪ್ರದರ್ಶನ ತೋರಿ ಪಂದ್ಯ ಶ್ರೇಷ್ಠ ಬಾಜಿಕೊಂಡರು.
    Published by:Vinay Bhat
    First published: