news18-kannada Updated:November 15, 2020, 9:38 AM IST
Virat Kohli
ಈಗಾಗಲೇ ಐಪಿಎಲ್ 13ನೇ ಆವೃತ್ತಿಗೆ ತೆರೆಬಿದ್ದಿದ್ದು ಟೀಂ ಇಂಡಿಯಾ ಆಟಗಾರರು ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಸಜ್ಜಾಗುತ್ತಿದ್ದಾರೆ. ನವೆಂಬರ್ 27 ರಿಂದ ಭಾರತದ ಆಸ್ಟ್ರೇಲಿಯಾ ಪೂರ್ಣ ಪ್ರವಾಸ ಆರಂಭವಾಗಲಿದೆ. ಉಭಯ ತಂಡಗಳೆರಡು ಅತ್ಯಂತ ಬಲಿಷ್ಠವಾಗಿರುವುದರಿಂದ ಏಕದಿನ, ಟಿ-20 ಹಾಗೂ ಟೆಸ್ಟ್ ಸರಣಿಗಳು ಸಾಕಷ್ಟು ಕುತೂಹಲ ಕೆರಳಿಸಿವೆ. ಎರಡು ದಿನಗಳ ಹಿಂದಷ್ಟೇ ಸಿಡ್ನಿಗೆ ಬಂದಿಳಿದ ಭಾರತ ಕ್ರಿಕೆಟ್ ತಂಡದ ಸದಸ್ಯರು ಕ್ವಾರಂಟೈನ್ ಅವಧಿಯ ನಡುವೆಯೇ ಅಭ್ಯಾಸ ಆರಂಭಿಸಿದ್ದಾರೆ. ಜೊತೆಗೆ ಎಲ್ಲ ಆಟಗಾರರ ಕೋವಿಡ್-19 ಫಲಿತಾಂಶ ನೆಗೆಟಿವ್ ಬಂದಿದೆ.
ಸಿಡ್ನಿಯ ಒಲಂಪಿಕ್ ಪಾರ್ಕ್ ಹೊಟೇಲ್ನಲ್ಲಿ ಟೀಂ ಇಂಡಿಯಾದ ಆಟಗಾರರು ಕ್ವಾರಂಟೀನ್ನಲ್ಲಿದ್ದು, ದಿ ನ್ಯೂ ಸೌತ್ ವೆಲ್ಷ್ ಸರ್ಕಾರ ಕ್ವಾರಂಟಿನ್ ಅವಧಿಯಲ್ಲಿ ಅಭ್ಯಾಸ ನಡೆಸಲು ಅನುಮತಿ ನೀಡಿದೆ. ಕೆಲ ಆಟಗಾರರು ಜಿಮ್ನಲ್ಲಿ ಬೆವರು ಹರಿಸಿದರೆ, ಹನುಮ ವಿಹಾರಿ, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್ ಬ್ಲ್ಯಾಕ್ಟೌನ್ ಇಂಟರ್ನ್ಯಾಶನಲ್ ನ್ಪೋರ್ಟ್ಸ್ ಪಾರ್ಕ್ನಲ್ಲಿ ಅಭ್ಯಾಸ ನಡೆಸಿದರು.
IPL 2020: ಭರ್ಜರಿ ಪ್ರದರ್ಶನ ನೀಡಿ ಮನೆಗೆ ಬಂದ ಸೂರ್ಯಕುಮಾರ್ ಯಾದವ್ಗೆ ಕಾದಿತ್ತು ಬಿಗ್ ಶಾಕ್
ಬಿಸಿಸಿಐ ಟೀಂ ಇಂಡಿಯಾ ಆಟಗಾರರು ಅಭ್ಯಾಸ ನಡೆಸುತ್ತಿರುವ ಫೋಟೋವನ್ನು ಹಂಚಿಕೊಂಡಿದೆ.
ಭಾರತ vs ಆಸ್ಟ್ರೇಲಿಯಾ ಪಂದ್ಯಗಳು ನವೆಂಬರ್ 27ರಿಂದ ಆರಂಭಗೊಳ್ಳಲಿದೆ. ಪ್ರವಾಸವು ಮೂರು ಏಕದಿನ ಪಂದ್ಯಗಳು, ಮೂರು ಟಿ-20ಐ ಪಂದ್ಯಗಳು ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ. ಇನ್ನೂ ಟೆಸ್ಟ್ ಸರಣಿಗೂ ಮುನ್ನ ಭಾರತ 2 ತ್ರಿದಿನ ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಎರಡೂ ಸಿಡ್ನಿಯಲ್ಲೇ ನಡೆಯಲಿವೆ.
ಸಾಹ ಫಿಟ್:
ಐಪಿಎಲ್ ಟೂರ್ನಿಯ ಅಂತಿಮ ಹಂತದ ವೇಳೆ ಗಾಯಕ್ಕೊಳಗಾಗಿ ಕೊನೆಯ 2 ಪಂದ್ಯಗಳಿಂದ ಹೊರಬಿದ್ದಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಚೇತರಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಸಾಹ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ತಿಂಗಳಿನಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳೆಗೆ ಸಂಪೂರ್ಣ ಫಿಟ್ ಆಗಲಿದ್ದಾರೆ ಎಂದು ಗಂಗೂಲಿ ತಿಳಿಸಿದ್ದಾರೆ.
2021ರ ಐಪಿಎಲ್ ಹರಾಜಿನಲ್ಲಿ ಈ ಆಟಗಾರನನ್ನು ಖರೀದಿಸೋದೆ ನನ್ನ ಗುರಿ- ಡೇವಿಡ್ ವಾರ್ನರ್
ರೋಹಿತ್ ಅನ್ಫಿಟ್:
ಟೀಂ ಇಂಡಿಯಾದ ಪ್ರಮುಖ ಆಟಗಾರ ರೋಹಿತ್ ಶರ್ಮ ಇನ್ನೂ ಸಂಪೂರ್ಣ ಫಿಟ್ನೆಸ್ ಹೊಂದಿಲ್ಲ, ಹೀಗಾಗಿ ಅವರನ್ನು ಆಸ್ಟ್ರೇಲಿಯ ಪ್ರವಾಸದ ಸೀಮಿತ ಓವರ್ಗಳ ಸರಣಿಯಿಂದ ಕೈಬಿಡಲಾಗಿದೆ ಎಂದು ಸೌರವ್ ಗಂಗೂಲಿ ಖಚಿತ ಪಡಿಸಿದ್ದಾರೆ. ರೋಹಿತ್ ಶರ್ಮ ಕೇವಲ ಶೇ. 70ರಷ್ಟು ಫಿಟ್ನೆಸ್ ಹೊಂದಿದ್ದಾರೆ. ಇನ್ನೂ ಶೇ. 30ರಷ್ಟು ಚೇತರಿಕೆ ಕಾಣಬೇಕಿದೆ. ಇದಕ್ಕೆ ಇನ್ನೂ ಸ್ವಲ್ಪ ಕಾಲ ಬೇಕಾಗುತ್ತದೆ ಎಂದು ಗಂಗೂಲಿ ಹೇಳಿದ್ದಾರೆ.
Published by:
Vinay Bhat
First published:
November 15, 2020, 9:38 AM IST