AUS vs IND: ಭಾರತದ ಗೆಲುವಿಗೆ ಕಂಟಕ ಆಗಿರುವುದು ಆಸೀಸ್​ನ ಆ ಇಬ್ಬರು ಆಟಗಾರರು ಎಂದ ಚೇತೇಶ್ವರ್ ಪೂಜಾರ

ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಒಟ್ಟು 4 ಪಂದ್ಯಗಳ ಐದು ದಿನಗಳ ಟೆಸ್ಟ್​ ಸರಣಿ ಆಡಲಿದೆ. ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಆರಂಭವಾಗಲಿದೆ. ಈ ಪಂದ್ಯವು ಹೊನಲು ಬೆಳಕಿನಲ್ಲಿ ನಡೆಯಲಿರುವುದು ವಿಶೇಷ.

ಚೇತೇಶ್ವರ್ ಪೂಜಾರ

ಚೇತೇಶ್ವರ್ ಪೂಜಾರ

  • Share this:
    ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಸರಣಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಉಭಯ ತಂಡಗಳ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತವಾಗಿದ್ದು, ಕಾಂಗರೂಗಳ ನಾಡಿನ ಪಿಚ್ ಕೊಹ್ಲಿ ಪಡೆಗೆ ದೊಡ್ಡ ಸವಾಲಾಗಲಿದೆ. ಈ ನಡುವೆ ಭಾರತದ ಟೆಸ್ಟ್​ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಆಸ್ಟ್ರೇಲಿಯಾ ಆಟಗಾರರ ಕುರಿತು ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಉಪಸ್ಥಿತಿ ಆಸ್ಟ್ರೇಲಿಯಾ ತಂಡಕ್ಕೆ ಬಲ ತುಂಬಿದೆ. ಹಾಗಾಗಿ ಈ ಬಾರಿ ಭಾರತಕ್ಕೆ ಗೆಲುವು ಅಷ್ಟೊಂದು ಸುಲಭವಿಲ್ಲ ಎಂದು ಪೂಜಾರ ಹೇಳಿದ್ದಾರೆ.

    ಜೊತೆಗೆ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್‌ಗಳನ್ನು ಕಟ್ಟಿಹಾಕಲು ಭಾರತೀಯ ಬೌಲರ್​​ಗಳು ಕೂಡ ಸಿದ್ಧರಿದ್ದಾರೆ ಎಂದೂ ತಿಳಿಸಿದ್ದಾರೆ. ಭಾರತ ತಂಡ 2018-19ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕೊಹ್ಲಿ ಪಡೆ 2-1 ಅಂತರದಲ್ಲಿ ಆಸೀಸ್ ಅನ್ನು ಬಗ್ಗುಬಡಿದಿತ್ತು. ಈ ಮೂಲಕ ಕಾಂಗರೂ ನಾಡಲ್ಲಿ ಟೆಸ್ಟ್‌ ಸರಣಿ ಗೆದ್ದ ಏಷ್ಯಾದ ಮೊತ್ತ ಮೊದಲ ರಾಷ್ಟ್ರವೆಂಬ ಇತಿಹಾಸ ನಿರ್ಮಿಸಿತ್ತು.

    India vs Australia: ಭಾರತ-ಆಸ್ಟ್ರೇಲಿಯಾ ಸರಣಿ ಯಾವಾಗ ಆರಂಭ?, ಎಲ್ಲಿ?, ಎಷ್ಟು ಗಂಟೆಗೆ?: ಇಲ್ಲಿದೆ ಸಂಪೂರ್ಣ ಮಾಹಿತಿ

    ಆದರೆ, ಈ ವೇಳೆ ಸ್ಟೀವ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಆಸ್ಟ್ರೇಲಿಯಾ ತಂಡದಿಂದ ನಿಷೇಧಕ್ಕೆ ಒಳಗಾಗಿದ್ದರು. 2018ರಲ್ಲಿ ಚೆಂಡನ್ನು ವಿರೂಪಗೊಳಿಸಲು ಸ್ಯಾಂಡ್‌ ಪೇಪರ್‌ ಬಳಕೆ ಮಾಡಿದ ಸ್ಮಿತ್‌ ಮತ್ತು ವಾರ್ನರ್‌ ಕ್ರಿಕೆಟ್‌ ಆಸ್ಟ್ರೇಲಿಯಾದಿಂದ ಒಂದು ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು.

    "ಈ ಬಾರಿ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಆಸ್ಟ್ರೇಲಿಯಾಕ್ಕೆ ಸೇರ್ಪಡೆಯಾಗಿರುವುದರಿಂದ ತಂಡ 2018-19ಕ್ಕಿಂತ ಹೆಚ್ಚು ಬಲಗೊಂಡಿರಬಹದು. ತಂಡದಲ್ಲಿ ಅಷ್ಟು ಅನುಭವಿ ಆಟಗಾರರ ಭರ್ತಿಯಿಂದ ನಮಗೆ ಗೆಲವು ಅನ್ನೋದು ಸಲೀಸಲ್ಲ. ಹಾಗಾಗಿ ಇಲ್ಲಿಂದ ಹೊರಗೆ ಹೋಗಿ ಗೆದ್ದು ಬರಬೇಕೆಂದರೆ ಶ್ರಮದ ಅತ್ಯವಶ್ಯಕತೆ ಹೆಚ್ಚಿರಬೇಕು" ಎಂದು ಪೂಜಾರ ಹೇಳಿದ್ದಾರೆ.

    "ಸ್ಮಿತ್, ವಾರ್ನರ್‌ ಮತ್ತು ಲಾಬುಶೇನ್‌ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ನಮ್ಮ ತಂಡದ ಬೌಲಿಂಗ್‌ ವಿಭಾಗ ಅದಕ್ಕಿಂತ ಬಲಿಷ್ಠವಾಗಿದೆ. ಕಳೆದ ಬಾರಿಯ ಪ್ರವಾಸದಲ್ಲಿ ಇದ್ದ ಬೌಲರ್‌ಗಳೇ ಈಗಲೂ ಇದ್ದಾರೆ. ಅಂತೆಯೇ ಈ ಹಿಂದಿನ ಯಶಸ್ಸು ಅವರಲ್ಲಿನ ಆತ್ಮವಿಶ್ವಾಸ ಹೆಚ್ಚಿಸಲಿದೆ. ನಮ್ಮ ಪ್ಲ್ಯಾನ್ ಅನ್ನು ಸರಿಯಾದ ಸಮಯದಲ್ಲಿ ಉಪಯೋಗಿಸಿ ಸ್ಮಿತ್, ವಾರ್ನರ್‌ ಮತ್ತು ಲಾಬುಶೇನ್‌ ವಿಕೆಟ್‌ಗಳನ್ನು ಬಹುಬೇಗ ಪಡೆಯುತ್ತೇವೆ" ಎಂದು ಪೂಜಾರ ಎಚ್ಚರಿಕೆ ನೀಡಿದ್ದಾರೆ.

    ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ವಿಚಿತ್ರ ಘಟನೆ: ಔಟ್ ಮಾಡಿದ್ದಕ್ಕೆ ಬ್ಯಾಟ್ಸ್​ಮನ್​ ಬಳಿ ಮೈದಾನದಲ್ಲೇ ಕ್ಷಮೆ ಕೇಳಿದ ಬೌಲರ್

    ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಒಟ್ಟು 4 ಪಂದ್ಯಗಳ ಐದು ದಿನಗಳ ಟೆಸ್ಟ್​ ಸರಣಿ ಆಡಲಿದೆ. ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಆರಂಭವಾಗಲಿದೆ. ಈ ಪಂದ್ಯವು ಹೊನಲು ಬೆಳಕಿನಲ್ಲಿ ನಡೆಯಲಿರುವುದು ವಿಶೇಷ. ಎರಡನೇ ಟೆಸ್ಟ್ ಡಿಸೆಂಬರ್ 26 ರಿಂದ 30ರವರೆಗೆ ಮೆಲ್ಬೋರ್ನ್​ನಲ್ಲಿ, 3ನೇ ಟೆಸ್ಟ್ ಪಂದ್ಯ ಜನವರಿ 7 ರಿಂದ 11 ರವರೆಗೆ ಸಿಡ್ನಿ ಮೈದಾನದಲ್ಲಿ ಹಾಗೂ ಅಂತಿಮ ಟೆಸ್ಟ್​ ಬ್ರಿಸ್ಬೇನ್​ನಲ್ಲಿ ಜನವರಿ 15 ರಿಂದ 19 ರವರೆಗೆ ನಡೆಯಲಿದೆ.
    Published by:Vinay Bhat
    First published: