Cricket World Cup: ರಹೀಮ್-ಮೊಹಮ್ಮದುಲ್ಲ ಹೋರಾಟಕ್ಕೆ ಸಿಗದ ಫಲ; ಆಸೀಸ್​ಗೆ 48 ರನ್​​ಗಳ ಜಯ

ಇಂದಿನ ಪಂದ್ಯದಲ್ಲಿ 333 ರನ್ ಬಾರಿಸಿದ್ದು ಏಕದಿನ ಕ್ರಿಕೆಟ್​​ನಲ್ಲಿ ಇದುವರೆಗೆ ಬಾಂಗ್ಲಾದೇಶ ದಾಖಲಿಸಿದ ಗರಿಷ್ಠ ಸ್ಕೋರ್ ಆಗಿದೆ. 48 ರನ್​ಗಳ ಜಯದೊಂದಿಗೆ ಕಾಂಗರೂ ಪಡೆ ಪಾಯಿಂಟ್ ಪಟ್ಟಿಯಲ್ಲಿ 10 ಅಂಕದೊಂದಿಗೆ ಅಗ್ರ ಸ್ಥಾನಕ್ಕೇರಿದೆ.

ಬಾಂಗ್ಲಾದೇಶ ತಂಡದ ಬ್ಯಾಟ್ಸ್​ಮನ್​​

ಬಾಂಗ್ಲಾದೇಶ ತಂಡದ ಬ್ಯಾಟ್ಸ್​ಮನ್​​

  • News18
  • Last Updated :
  • Share this:
ಬೆಂಗಳೂರು (ಜೂ. 20): ನ್ಯಾಟಿಂಗ್​ಹ್ಯಾಮ್​ನಲ್ಲಿ ನಡೆದ ವಿಶ್ವಕಪ್ 26ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾ 48 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಬಾಂಗ್ಲಾ ಬ್ಯಾಟ್ಸ್​ಮನ್​ಗಳಾದ ಮುಷ್ಫೀಕರ್ ರಹೀಮ್ ಹಾಗೂ ಮೊಹಮ್ಮದುಲ್ಲ ಗೆಲುವಿಗಾಗಿ ಕಠಿಣ ಹೋರಾಟ ನಡೆಸಿದರಾದರು ಅದು ಯಶಸ್ವಿಯಾಗಲಿಲ್ಲ.

382 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾಕ್ಕೆ ಉತ್ತಮ ಆರಂಭ ಸಿಕ್ಕಿಲ್ಲವಾದರು 2ನೇ ವಿಕೆಟ್​ನಲ್ಲಿ ಉತ್ತಮ ಜೊತೆಯಾಟ ಮೂಡಿಬಂತು. ಓಪನರ್​ಗಳ ಪೈಕಿ ಸೌಮ್ಯ ಸರ್ಕಾರ್ ಕೇವಲ 10 ರನ್​ಗೆ ಬ್ಯಾಟ್ ಕೆಳಗಿಟ್ಟರು. ಬಳಿಕ ಜೊತೆಯಾದ ಶಕಿಬ್ ಅಲ್ ಹಸನ್ ಹಾಗೂ ತಮಿಮ್ ಇಕ್ಬಾಲ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಈ ಜೋಡಿ ತಂಡಕ್ಕೆ 79 ರನ್​ಗಳ ಕಾಣಿಕೆ ನೀಡಿದರು. ಆದರೆ ಪ್ರತಿ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದ ಶಕಿಬ್ 41 ಎಸೆತಗಳಲ್ಲಿ 41 ರನ್ ಬಾರಿಸಿ ಔಟ್ ಆಗಿದರೆ, ಅರ್ಧಶತಕ ಬಾರಿಸಿದ್ದ ಇಕ್ಬಾಲ್ ಕೂಡ 62 ರನ್​ಗೆ ನಿರ್ಗಮಿಸಿದ್ದು ತಂಡಕ್ಕೆ ಹೊಡೆತ ಬಿದ್ದಂತಾಯಿತು. ಲಿಟನ್ ದಾಸ್ ಆಟ ಕೂಡ 20 ರನ್​ಗೆ ನಿಂತಿತು.

ಈ ಸಂದರ್ಭ ಜೊತೆಯಾದ ಮುಷ್ಫೀಕರ್ ರಹೀಮ್ ಹಾಗೂ ಮೊಹಮ್ಮದುಲ್ಲ ತಂಡದ ಗೆಲುವಿಗಾಗಿ ಕಠಿಣ ಹೋರಾಟ ನಡೆಸಿದರು. ಅದರಂತೆ ಬ್ಯಾಟ್ ಬೀಸಿದ ಈ ಜೋಡಿ ಆಸೀಸ್ ಬೌಲರ್​ಗಳನ್ನು ಕಾಡಿದರು. ಮೊಹಮ್ಮದುಲ್ಲ ಸ್ಪೋಟಕ ಆಟದ ಮೊರೆಹೋದರೆ, ರಹೀಮ್ ಉತ್ತಮ ಸಾತ್ ನೀಡಿದರು. ಈ ಜೋಡಿ ಕೊನೆಯ ವರೆಗೆ ನಿಂತು ತಂಡಕ್ಕೆ ಗೆಲುವು ನೀಡಲಿದ್ದಾರೆ ಎಂದೇ ನಂಬಲಾಗಿತ್ತು.

ಆದರೆ, ಕಲ್ಟರ್ ನೇಲ್ ಇವರಿಬ್ಬರ ಹೋರಾಟಕ್ಕೆ ಬ್ರೇಕ್ ಹಾಕುವಲ್ಲಿ ಗೆದ್ದರು. 50 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ 69 ರನ್​​ ಗಳಿಸಿ ಮೊಹಮ್ಮದುಲ್ಲ ಪ್ಯಾಟ್ ಕಮಿನ್ಸ್​ಗೆ ಕ್ಯಾಚಿತ್ತು ಔಟ್ ಆದರು. ಈ ಮೂಲಕ ಇವರಿಬ್ಬರ 127 ರನ್​ಗಳ ಅಮೋಘ ಜೊತೆಯಾಟ ಅಂತ್ಯವಾಯಿತು. ಮುಂದಿನ ಎಸೆತದಲ್ಲೇ ಸಬಿರ್ ರೆಹ್ಮಾನ್ ಶೂನ್ಯಕ್ಕೆ ಬೌಲ್ಡ್​ ಆದರು.

ಈ ಮಧ್ಯೆ ಮುಷ್ಫೀರ್ ಆಕರ್ಷಕ ಶತಕ ಸಿಡಿಸಿ ಮಿಂಚಿದರಾದರು ಅದಾಗಲೆ ಗೆಲುವು ಆಸೀಸ್ ಪರ ವಾಲಿತ್ತು. ಅಂತಿಮವಾಗಿ ಬಾಂಗ್ಲಾದೇಶ 50 ಓವರ್​ಗೆ 8 ವಿಕೆಟ್ ಕಳೆದುಕೊಂಡು 333 ರನ್​ ಕಲೆಹಾಕಿತು. ಜೊತೆಗೆ ಬಲಿಷ್ಠ ತಂಡಕ್ಕೆ ಕಠಿಣ ಪೈಪೋಟಿ ನೀಡಿತು. ಮುಷ್ಫೀಕರ್ ರಹೀಮ್ 97 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಸೇರಿ 102 ರನ್ ಬಾರಿಸಿ ಅಜೇಯರಾಗಿ ಉಳಿದರು. ಆಸೀಸ್ ಪರ ಮಿಚೆಲ್ ಸ್ಟಾರ್ಕ್​​, ಕಲ್ಟರ್ ನೇಲ್ ಹಾಗೂ ಸ್ಟಾಯಿನಿಸ್ ತಲಾ 2 ವಿಕೆಟ್ ಕಿತ್ತು ಮಿಂಚಿದರು. ಆ್ಯಡಂ ಜಂಪಾ 1 ವಿಕೆಟ್ ಪಡೆದರು.

ಇಂದಿನ ಪಂದ್ಯದಲ್ಲಿ 333 ರನ್ ಬಾರಿಸಿದ್ದು ಏಕದಿನ ಕ್ರಿಕೆಟ್​​ನಲ್ಲಿ ಇದುವರೆಗೆ ಬಾಂಗ್ಲಾದೇಶ ದಾಖಲಿಸಿದ ಗರಿಷ್ಠ ಸ್ಕೋರ್ ಆಗಿದೆ. 48 ರನ್​ಗಳ ಜಯದೊಂದಿಗೆ ಕಾಂಗರೂ ಪಡೆ ಪಾಯಿಂಟ್ ಪಟ್ಟಿಯಲ್ಲಿ 10 ಅಂಕದೊಂದಿಗೆ ಅಗ್ರ ಸ್ಥಾನಕ್ಕೇರಿದೆ. 166 ರನ್ ಚಚ್ಚಿದ ವಾರ್ನರ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

ಇದಕ್ಕೂ ಮುನ್ನ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಅದರಂತೆ ಓಪನರ್ಗಳಾಗಿ ಕಣಕ್ಕಿಳಿದ ನಾಯಕ ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಶತಕದ ಜೊತೆಯಾಟ ಆಡಿ ಅತ್ಯುತ್ತಮ ಆರಂಭ ನೀಡಿದರು. ಜೊತೆಗೆ ವಾರ್ನರ್ 55 ಎಸೆತಗಳಲ್ಲಿ  ಅರ್ಧಶತಕ ಸಿಡಿಸಿ ಮಿಂಚಿದರೆ, ಫಿಂಚ್ 47 ಎಸೆತಗಳಲ್ಲಿ 50 ರನ್ ಬಾರಿಸಿದರು.

ಸಂದರ್ಭ ಬೌಲಿಂಗ್ ಮಾಡಲು ಬಂದ ಸೌಮ್ಯ ಸರ್ಕಾರ್ ತನ್ನ ಮೊದಲ ಓವರ್ನಲ್ಲೇ ಇವರಿಬ್ಬರ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ಫಿಂಚ್ 53 ರನ್ ಗಳಿಸಿರುವಾಗ ರುಬೆಲ್ಗೆ ಕ್ಯಾಚಿತ್ತು ನಿರ್ಗಮಿಸಿದರು.

ಬಳಿಕ 2ನೇ ವಿಕೆಟ್ಗೆ ವಾರ್ನರ್ ಜೊತೆಯಾದ ಉಸ್ಮಾನ್ ಖ್ವಾಜಾ ಭರ್ಜರಿ ಜೊತೆಯಾಟ ಆಡಿದರು. ಬಾಂಗ್ಲಾ ಬೌಲರ್​ಗಳನ್ನು ಬೆಂಡೆತ್ತಿದ್ದ ವಾರ್ನರ್, ಬೌಂಡರಿ-ಸಿಕ್ಸರ್​ಗಳ ಸುರಿಮಳೆ ಗೈದರು. ಈ ಮಧ್ಯೆ 110 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಚಚ್ಚಿ ವಾರ್ನರ್ ಏಕದಿನ ಕ್ರಿಕೆಟ್​ನಲ್ಲಿ 16ನೇ ಶತಕ ಗಳಿಸಿದರು. ಅಲ್ಲದೆ ಈ ಬಾರಿಯ ವಿಶ್ವಕಪ್​ನಲ್ಲಿ ಎರಡನೇ ಸೆಂಚುರಿ ದಾಖಲಿಸಿದರು. ಇತ್ತ ಖ್ವಾಜಾ ಅರ್ಧಶತಕ ಸಿಡಿಸಿದರು. ಸೆಂಚುರಿ ಬಳಿಕವೂ ಸ್ಫೋಟಕ ಆಟ ಆಡಿದ ವಾರ್ನರ್ 40 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 300ರ ಅಂಚಿಗೆ ತಂದಿಟ್ಟರು.

ವಾರ್ನರ್ ಒಟ್ಟು 147 ಎಸೆತಗಳಲ್ಲಿ 14 ಬೌಂಡರಿ ಹಾಗೂ 5 ಸಿಕ್ಸರ್​​ನೊಂದಿಗೆ 166 ರನ್ ಚಚ್ಚಿ ತಮ್ಮ ಅಮೋಘ ಇನ್ನಿಂಗ್ಸ್​ ಅನ್ನು ಅಂತ್ಯಗೊಳಿಸದರು. ಮ್ಯಾಕ್ಸ್​ವೆಲ್​ ಕೇವಲ 10 ಎಸೆತಗಳಲ್ಲಿ 32 ರನ್ ಬಾರಿಸಿದರು. ಇತ್ತ ಉಸ್ಮಾನ್ ಖ್ವಾಜಾ ಕೊನೆ ಹಂತದಲ್ಲಿ 72 ಎಸೆತಗಳಲ್ಲಿ 89 ರನ್ ಗಳಿಸಿ ಔಟ್ ಆದರು.

49 ಓವರ್ ಆಗುವ ಹೊತ್ತಿಗೆ ಮಳೆ ಸುರಿದು, ಕೆಲ ಹೊತ್ತು ಆಟವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಯಿತು. ಮಳೆ ನಿಂತ ಬಳಿಕ ಕೊನೆಯ 1 ಓವರ್​ನಲ್ಲಿ 13 ರನ್ ಕಲೆಹಾಕಿದ ಆಸ್ಟ್ರೇಲಿಯಾ ಅಂತಿಮವಾಗಿ 50 ಓವರ್​ಗೆ 5 ವಿಕೆಟ್ ಕಳೆದುಕೊಂಡ 381 ರನ್ ಬಾರಿಸಿತು. ಬಾಂಗ್ಲಾ ಪರ ಸೌಮ್ಯ ಸರ್ಕಾರ 3 ವಿಕೆಟ್ ಕಿತ್ತರೆ, ಮುಸ್ತಫಿಜುರ್ ರಹ್ಮಮನ್ 1 ವಿಕೆಟ್ ಪಡೆದಿದ್ದಾರೆ.

  
First published: