ಒಸಾಮ ಎಂದು ನಿಂದಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗ: ಮೊಹೀನ್ ಅಲಿ ಗಂಭೀರ ಆರೋಪ

news18
Updated:September 15, 2018, 5:30 PM IST
ಒಸಾಮ ಎಂದು ನಿಂದಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗ: ಮೊಹೀನ್ ಅಲಿ ಗಂಭೀರ ಆರೋಪ
  • News18
  • Last Updated: September 15, 2018, 5:30 PM IST
  • Share this:
-ನ್ಯೂಸ್ 18 ಕನ್ನಡ

ಲಂಡನ್: ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್​ನಲ್ಲಿ ಸ್ಲೆಡ್ಜಿಂಗ್ ಎಂಬುದು ಸಾಮಾನ್ಯ ಸಂಗತಿ. ಇದು ಹಲವಾರು ಬಾರಿ ಅತಿರೇಕಕ್ಕೆ ಹೋಗಿದ್ದೂ ಇದೆ. ಅಂತಹದೊಂದು ಘಟನೆ ಇಂಗ್ಲೆಂಡ್ ತಂಡದ ಆಲ್​ರೌಂಡರ್ ಮೊಹೀನ್ ಅಲಿ ಅವರ ಜೀವನದಲ್ಲೂ ನಡೆದಿದೆ. 2015ರ ಆ್ಯಷಸ್ ಸರಣಿ ವೇಳೆ ಆಸೀಸ್ ಆಟಗಾರನಿಂದ ಜನಾಂಗೀಯ ನಿಂದನೆಗೆ ಒಳಗಾಗಿದ್ದೆ ಎಂಬ ಆಘಾತಕಾರಿ ವಿಷಯವನ್ನು ಮೊಹೀನ್ ಅಲಿ ತಮ್ಮ ಆತ್ಮಕಥೆಯಲ್ಲಿ ತಿಳಿಸಿದ್ದಾರೆ. ಕಾರ್ಡಿಫ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದ ವೇಳೆ ಅದನ್ನು ತೆಗೆದುಕೊ ಒಸಾಮ ಎಂದು ಆಸ್ಟ್ರೇಲಿಯಾ ಆಟಗಾರನೊಬ್ಬ ನಿಂದಿಸಿದ್ದರು. ಇದು ನನ್ನ ವೃತ್ತಿ ಬದುಕಿನ ಅತ್ಯಂತ ನೋವಿನ ಘಟನೆಯಾಗಿದೆ ಎಂದು ಮೋಹಿನ್ ಅಲಿ ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.

ಈ ಪಂದ್ಯದಲ್ಲಿ 77 ರನ್​ಗಳಿಸಿದ ನಾನು, 5 ವಿಕೆಟ್​ ಕಬಳಿಸಿ ಇಂಗ್ಲೆಂಡ್​ ತಂಡದ ಜಯದ ರೂವಾರಿಯಾಗಿದ್ದೆ ಎಂದು ಮೊಹೀನ್ ತಿಳಿಸಿದ್ದಾರೆ. ಈ ಆಘಾತಕಾರಿ ಘಟನೆಯನ್ನು ಇಂಗ್ಲೆಂಡ್ ತಂಡದ ಆಗಿನ ಕೋಚ್ ಟ್ರೆವರ್ ಬೆಲಿಸ್ ತಿಳಿಸಿದೆ. ಅವರು ಕಳವಳ ವ್ಯಕ್ತಪಡಿಸಿ ಆಸೀಸ್​ ಕೋಚ್ ಡೆರೆನ್ ಲೆಹ್ಮನ್​ ಬಳಿ ಈ ವಿಚಾರವಾಗಿ ಮಾತನಾಡಿದ್ದರು. ಈ ಬಗ್ಗೆ ಆಸೀಸ್ ತಂಡವನ್ನು ಲೆಹ್ಮನ್ ವಿಚಾರಿಸಿದಾಗ, ಆಸೀಸ್ ಆಟಗಾರರು  ಇಲ್ಲ , ಯು ಪಾರ್ಟ್​ ಟೈಮರ್ ಅಂದಿರುವುದಾಗಿ ಸಮಜಾಯಿಸಿ ನೀಡಿದ್ದರು ಎಂದು ಮೊಹೀನ್ ಅಲಿ ತಮ್ಮ ಕ್ರಿಕೆಟ್ ಜೀವನದ ಕಹಿ ಘಟನೆಯನ್ನು ಮೆಲುಕು ಹಾಕಿದ್ದಾರೆ.

ಆದರೆ ಈ ರೀತಿಯ ನಿಂದನೆ ಇದೇ ಮೊದಲೇನಲ್ಲ ಎಂದು ತಿಳಿಸಿರುವ ಮೊಹೀನ್ ಅಲಿ ಅಭ್ಯಾಸ ಪಂದ್ಯಗಳಲ್ಲೂ ಕೂಡ ಇಂತಹ ಘಟನೆಗಳು ಜರುಗುತ್ತದೆ. ಪ್ರ್ಯಾಕ್ಟೀಸ್ ಮ್ಯಾಚ್​ನಲ್ಲಿ ಆಟಗಾರರು ತನಗೆ ಮಧ್ಯ ಬೆರಳನ್ನು ತೋರಿಸಿ ಅವಮಾನ ಮಾಡಿದ್ದರು. ಕಾಂಗರೂ ನೆಲದ ಆಟಗಾರರಲ್ಲಿ ಒರಟುತನ ಇರುವುದನ್ನು ನಿರೀಕ್ಷಿಸಿದ್ದೆ. ಆದರೆ ಈ ರೀತಿಯಲ್ಲಿ ಕೆಟ್ಟದಾಗಿರುತ್ತದೆ ಎಂಬುದು ತಿಳಿದಿರಲಿಲ್ಲ ಎಂದು ಅಲಿ ತಿಳಿಸಿದ್ದಾರೆ. ಅಲ್ಲದೆ ಆಸೀಸ್ ತಂಡದ ಎಲ್ಲ ಆಟಗಾರರನ್ನು ಕೆಟ್ಟವರೆಂದು ಹೇಳಲಾಗುವುದಿಲ್ಲ ಅವರಲ್ಲೂ ಎಲ್ಲರಿಗೂ ಗೌರವ ಕೊಡುವ ಆಟಗಾರರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ದಕ್ಷಿಣ ಆಫ್ರಿಕಾದ ಆಟಗಾರ ಹಾಶೀಂ ಆಮ್ಲರನ್ನು ಭಯೋತ್ಪಾದಕ ಎಂದು ನಿಂದಿಸಲಾಗಿತ್ತು. ಹಾಶೀಂ ಆಮ್ಲ ಕ್ಯಾಚ್ ಹಿಡಿದಾಗ ಕಮೆಂಟರಿ ಮಾಡುತ್ತಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಟೆರೆರಿಸ್ಟ್​ ಕೈಗೆ ಬಾಲ್ ಸಿಕ್ತು ಎಂದು ಮೈಕ್​ನಲ್ಲಿ ಹೇಳಿದ್ದರು. ಈ ರೀತಿಯ ಹೇಳಿಕೆಯಿಂದ ಡೀನ್ ಜೋನ್ಸ್ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಐಸಿಸಿ ಕೂಡ ಡೀನ್ ಜೋನ್ಸ್ ವಿರುದ್ಧ ಕ್ರಮ ಕೈಗೊಂಡು, ವಜಾ ಮಾಡಿತ್ತು. ಇದೀಗ ಮತ್ತೊಮ್ಮೆ ಅದೇ ರೀತಿ ಹೇಳಿಕೆ ಕೇಳಿ ಬಂದಿರುವುದು ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯನ್ನರು ಜನಾಂಗೀಯ ನಿಂದನೆಯನ್ನು ಮುಂದುವರೆಸಿದ್ದಾರಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಮೊಹೀನ್ ಅಲಿ ಅವರ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಈ ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ತಿಳಿಸಿದ್ದಾರೆ.
First published:September 15, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading