Tim Paine- ನಾಲ್ಕು ವರ್ಷ ಹಿಂದಿನ ಅಶ್ಲೀಲ ಸಂದೇಶ; ಆಸ್ಟ್ರೇಲಿಯಾ ಟೆಸ್ಟ್ ನಾಯಕತ್ವ ತ್ಯಜಿಸಿದ ಟಿಮ್ ಪೈನೆ

Sexting Scandal Erupts Again- 2017ರಲ್ಲಿ ತಾಸ್ಮಾನಿಯಾ ಕ್ರಿಕೆಟ್ ತಂಡದಲ್ಲಿ ಉದ್ಯೋಗಿಯಾಗಿದ್ದ ಮಹಿಳೆಯೊಬ್ಬರಿಗೆ ಟಿಮ್ ಪೈನೆ ಅಶ್ಲೀಲ ಸಂದೇಶಗಳನ್ನ ಕಳುಹಿಸಿದ್ದರು. ಇದೀಗ ಈ ಸಂದೇಶಗಳು ಸಾರ್ವತ್ರಿಕವಾಗಿ ಹರಿದಾಡುತ್ತಿರುವುದರಿಂದ ಪೈನೆ ಅವರು ಟೆಸ್ಟ್ ತಂಡದ ನಾಯಕತ್ವ ತ್ಯಜಿಸಿದ್ದಾರೆ.

ಟಿಮ್ ಪೈನೆ

ಟಿಮ್ ಪೈನೆ

 • Share this:
  ನವದೆಹಲಿ, ನ. 19: ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ಕ್ಯಾಪ್ಟನ್ ಟಿಮ್ ಪೈನೆ (Australia Test Captain Tim Paine) ಲೈಂಗಿಕ ಸಂದೇಶ ಹಗರಣದಲ್ಲಿ (Sexting Scandal) ಸಿಲುಕಿಕೊಂಡಿದ್ದಾರೆ. ಅವರ ಮೇಲೆ ತನಿಖೆ ನಡೆಯುತ್ತಿರುವಂತೆಯೇ ಅವರು ತಂಡದ ನಾಯಕತ್ವ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ. ಟಿಮ್ ಪೈನೆ ನಾಲ್ಕು ವರ್ಷಗಳ ಹಿಂದೆ ಮಹಿಳೆಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದು ಇತ್ತೀಚೆಗೆ ತಡವಾಗಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಕ್ಯಾಪ್ಟನ್ಸಿ ತೊರೆದಿದ್ದಾರೆ. ಆದರೆ ಆಟಗಾರನಾಗಿ ಲಭ್ಯ ಇದ್ದಾರೆ. ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸುತ್ತಾ ಭಾವುಕರಾಗಿ ಕಣ್ಣೀರಿಟ್ಟ ಪೈನೆ, “ನಮ್ಮ ಕ್ರೀಡೆಯ ಘನತೆಗೆ ಧಕ್ಕೆ ತಂದಿದ್ದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ” ಎಂದಿದ್ದಾರೆ.

  ಏನಿದು ಘಟನೆ?: ಫಾಕ್ಸ್ ಕ್ರಿಕೆಟ್ ವಾಹಿನಿಯಲ್ಲಿ ಬಿತ್ತರವಾದ ವರದಿ ಪ್ರಕಾರ 2017ರ ಆಷಸ್ ಸರಣಿ ವೇಳೆ ಟಿಮ್ ಪೈನೆ ಅವರು ಮಾಜಿ ಸಹೋದ್ಯೋಗಿಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು. ಇಂಗ್ಲೆಂಡ್ ವಿರುದ್ಧ ಆ ವರ್ಷ ನಡೆದ ಆಷಸ್ ಸರಣಿಯ ಮೊದಲ ಪಂದ್ಯ ಗಾಬ್ಬಾದಲ್ಲಿ ನಡೆದಿತ್ತು. ತಾಸ್ಮೇನಿಯಾ ಕ್ರಿಕೆಟ್ ಸಂಸ್ಥೆಯಲ್ಲಿ ತಮ್ಮ ಜೊತೆ ಕೆಲಸ ಮಾಡಿದ್ದ ಮಹಿಳೆಯೊಬ್ಬರಿಗೆ ಟಿಮ್ ಪೈನೆ ಅವರು ತಮ್ಮ ಖಾಸಗಿ ಅಂಗದ ಫೋಟೋವನ್ನು ಕಳುಹಿಸಿದ್ದರು. ಜೊತೆಗೆ ಹಲವು ಬಾರಿ ಅಶ್ಲೀಲ ಸಂದೇಶಗಳನ್ನೂ ಕಳುಹಿಸಿದ್ದರು. ಆ ಎಲ್ಲಾ ಸಂದೇಶಗಳ ಪೂರ್ಣ ವಿವರ ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು.

  ಇದೀಗ ಟಿಮ್ ಪೈನೆ ತಮ್ಮಿಂದ ತಪ್ಪಾಗಿರುವುದು ಒಪ್ಪಿಕೊಂಡು ಕ್ಯಾಪ್ಟನ್ಸಿಗೆ ರಾಜೀನಾಮೆ ಕೊಟ್ಟು ಕ್ಷಮೆ ಯಾಚಿಸಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಟಿಮ್ ಪೈನೆಯ ರಾಜೀನಾಮೆಯನ್ನ ಅಂಗೀಕರಿಸಿದೆ.

  “ತಮ್ಮ ಕುಟುಂಬ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್​ನ ಹಿತಾಸಕ್ತಿ ದೃಷ್ಟಿಯಿಂದ ಟಿಮ್ ಅವರು ನಾಯಕತ್ವ ತೊರೆದಿದ್ದಾರೆ” ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಚೇರ್ಮನ್ ರಿಚರ್ಡ್ ಫ್ರೂಡೆನ್​ಸ್ಟೀನ್ ಅವರು ಹೇಳಿಕೆ ನೀಡಿದ್ದಾರೆ. ಇದೀಗ ಆಸ್ಟ್ರೇಲಿಯಾ ಟೆಸ್ಟ್ ತಂಡಕ್ಕೆ ಹೊಸ ನಾಯಕನ ಆಯ್ಕೆಗೆ ಪ್ರಕ್ರಿಯೆ ಆರಂಭಗೊಳ್ಳುವ ಸಾಧ್ಯತೆ ಇದೆ.

  ಇದನ್ನೂ ಓದಿ: ಸಿನಿಮಾದಲ್ಲಿರುವಂತೆ ಇಲ್ಲ MS Dhoni-Sakshi ಲವ್​ ಸ್ಟೋರಿ, ಇಲ್ಲಿದೆ ರಿಯಲ್​ ಪ್ರೇಮ್​ಕಹಾನಿ!

  ಟಿಮ್ ಪೇನೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದು 2009ರಲ್ಲಿ. 2018ರಲ್ಲಿ ಅವರು ತಂಡದ ನಾಯಕರಾದರು. ಅವರು ಟೆಸ್ಟ್ ನಾಯಕತ್ವ ವಹಿಸಿದ್ದೂ ವಿವಾದಗಳ ನಡುವೆಯೇ. ಬಾಲ್ ಟ್ಯಾಂಪರೆಂಗ್ (Ball tampering- ಚೆಂಡು ವಿರೂಪಗೊಳಿಸುವಿಕೆ) ಹಗರಣ ಬೆಳಕಿಗೆ ಬಂದು ಸ್ಟೀವ್ ಸ್ಮಿತ್ (Steve Smith) ಅವರು ಟೆಸ್ಟ್ ನಾಯಕ ಸ್ಥಾನ ತ್ಯಜಿಸಬೇಕಾಯಿತು. ಅದಾದ ಬಳಿಕ ಕ್ಯಾಪ್ಟನ್ಸಿ ಹೊಣೆಯನ್ನ ಟಿಮ್ ಪೈನೆಗೆ ನೀಡಲಾಗಿತ್ತು.

  ಕ್ಯಾಪ್ಟನ್ ಆಗುವ ಮುನ್ನವೇ ನಡೆದ Sexting ಹಗರಣ:

  ಆದರೆ, ಟಿಮ್ ಪೈನೆ ಕ್ಯಾಪ್ಟನ್ ಆಗುವ ಒಂದು ವರ್ಷ ಮುನ್ನವೇ ಅವರು ತಮ್ಮ ಮಹಿಳಾ ಸಹೋದ್ಯೋಗಿಗೆ ಅಶ್ಲೀಲ ಸಂದೇಶಗಳನ್ನ ಕಳುಹಿಸಿದ್ದರು. ಆಗಲೇ ಆ ವಿಚಾರ ಬೆಳಕಿಗೆ ಬಂದಿತ್ತು. ಆಗ ತನಿಖೆಯೂ ಆಗಿತ್ತು. ಕ್ರಿಕೆಟ್ ತಾಸ್ಮಾನಿಯಾದ ಮಾನವ ಸಂಪನ್ಮೂಲ ವಿಭಾಗದಿಂದಲೂ ತನಿಖೆ ಆಗಿತ್ತು. ಆದರೆ, ಟಿಮ್ ಪೈನೆಯಿಂದ ಆಸ್ಟ್ರೇಲಿಯಾ ಕ್ರಿಕೆಟ್​ನ ನೀತಿ ನಿಯಮಾವಳಿಗೆ ಯಾವ ಉಲ್ಲಂಘನೆಯೂ ಆಗಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿತ್ತು. ಹೀಗಾಗಿ, 2018ರಲ್ಲಿ ಅವರು ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಳ್ಳಲು ಯಾವ ಅಡ್ಡಿಯೂ ಎದುರಾಗಿರಲಿಲ್ಲ. ಈಗ ಅವರ ಅಶ್ಲೀಲ ಸಂದೇಶದ ಪೂರ್ಣ ವಿವರ ಬೆಳಕಿಗೆ ಬಂದು ಮತ್ತೊಮ್ಮೆ ಆ ಹಗರಣ ಸದ್ದು ಮಾಡುತ್ತಿದೆ. ಈ ಕಾರಣಕ್ಕೆ ಟಿಮ್ ಪೈನೆ ಕ್ಯಾಪ್ಟನ್ಸಿಯಿಂದ ಹಿಂದಕ್ಕೆ ಸರಿದಿದ್ದಾರೆ.

  ಟಿಮ್ ಪೈನೆ ಹೇಳುವುದೇನು?

  ಅಂದು ನಡೆದ ಘಟನೆಗೆ ಈಗಲೂ ನನಗೆ ವಿಷಾದ ಇದೆ. ಆಗ ನನ್ನನ್ನು ದೋಷಮುಕ್ತಗೊಳಿಸಲಾಗಿದ್ದರೂ ಆ ಘಟನೆ ಬಹಳ ಬಾಧಿಸಿದೆ. ನನ್ನ ಹೆಂಡತಿ ಮತ್ತು ಕುಟುಂಬದ ಜೊತೆ ಎಲ್ಲಾ ಮಾಹಿತಿ ಹಂಚಿಕೊಂಡಿದ್ದೆ. ಅವರು ನನ್ನನ್ನ ಕ್ಷಮಿಸಿ ನನಗೆ ಬೆಂಬಲವಾಗಿ ನಿಂತಿದ್ದಕ್ಕೆ ನಾನು ಬಹಳ ಕೃತಜ್ಞನಾಗಿದ್ದೇನೆ ಎಂದು ಟಿಮ್ ಪೈನೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  ಇದನ್ನೂ ಓದಿ: Sex Scandals: ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದ ಕ್ರಿಕೆಟಿಗರು!

  ಆ ಘಟನೆಯನ್ನ ನಾನು ಮರೆತು ನಮ್ಮ ತಂಡಕ್ಕೆ ಸಂಪೂರ್ಣ ಗಮನ ಕೊಟ್ಟಿದ್ದೆ. ಆದರೆ, ಅಂದಿನ ಖಾಸಗಿ ಸಂದೇಶಗಳು ಸಾರ್ವಜನಿಕವಾಗಿ ಈಗ ಹರಿದಾಡುತ್ತಿರುವುದು ಗೊತ್ತಾಯಿತು. 2017ರಲ್ಲಿ ನಾನು ಮಾಡಿದ ಕೆಲಸವು ಆಸ್ಟ್ರೇಲಿಯಾ ಕ್ರಿಕೆಟ್ ಕ್ಯಾಪ್ಟನ್ಸಿಗೆ ಶೋಭೆ ತರುವಂಥದ್ದಲ್ಲ ಎಂದು ನನಗೆ ಅನಿಸಿತು. ಹೀಗಾಗಿ, ಕೂಡಲೇ ಕ್ಯಾಪ್ಟನ್ಸಿಯಿಂದ ಹಿಂದೆ ಸರಿಯುವುದು ಸರಿಯಾದ ನಿರ್ಧಾರ ಅನಿಸಿತು. ಮುಂಬರುವ ಆಷಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಟೆಸ್ಟ್ ತಂಡದ ಮಾನಸಿಕತೆಯ ಮೇಲೆ ಈ ಹಗರಣ ಪ್ರಭಾವ ಬೀರಬಾರದು ಎಂಬ ದೃಷ್ಟಿಯಿಂದಲೂ ರಾಜೀನಾಮೆ ನೀಡುತ್ತಿದ್ದೇನೆ ಎಂದು ಟಿಮ್ ಪೈನೆ ಹೇಳಿದ್ಧಾರೆ.

  ಟಿಮ್ ಪೈನೆ ಕಳುಹಿಸಿದ ಮೆಸೇಜಸ್ ಇವು: 

  Tim paine sexting messages to ex tasmania colleague
  ಟಿಮ್ ಪೈನೆ ಕಳುಹಿಸಿದ್ದ ಅಶ್ಲೀಲ ಸಂದೇಶಗಳು


  ಟಿಮ್ ಪೈನೆ ಮೊದಲಿಗೆ ತಮ್ಮ ಗುಪ್ತಾಂಗದ ಫೋಟೋ ಕಳುಹಿಸಿರುತ್ತಾರೆ. ಬಳಿಕ ಸಂಭೋಗಕ್ಕೆ ಆಹ್ವಾನಿಸುವಂಥ ಪ್ರಚೋದನಾತ್ಮಕವೆನಿಸುವ ಈ ಮೇಲಿನ ಸಂದೇಶಗಳನ್ನ ಕಳುಹಿಸಿದ್ದಾರೆ.
  Published by:Vijayasarthy SN
  First published: