Australia-India Cricket Series –ಆಸ್ಟ್ರೇಲಿಯಾ-ಭಾರತ ಕ್ರಿಕೆಟ್ ಸರಣಿ ವೇಳಾಪಟ್ಟಿ
ಐಪಿಎಲ್ ಟೂರ್ನಿ ಮುಗಿದ ಕೂಡಲೇ ಭಾರತದ ಆಟಗಾರರು ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಲಿದ್ದಾರೆ. ಅಲ್ಲಿ ನವೆಂಬರ್ 26ರಿಂದ 30ವರೆಗೆ ಏಕದಿನ ಸರಣಿ, ಡಿಸೆಂಬರ್ 4ರಿಂದ 8ರವೆಗೆ ಟಿ20 ಸರಣಿ ಹಾಗೂ ಡಿ. 17ರಿಂದ ಜನವರಿ 19ರವರೆಗೆ ಟೆಸ್ಟ್ ಸರಣಿಯಲ್ಲಿ ಆಡಲಿದ್ದಾರೆ.
ಭಾರತದ ಆಸ್ಟ್ರೇಲಿಯಾ ಕ್ರಿಕೆಟ್ ಪ್ರವಾಸದ ವೇಳಾಪಟ್ಟಿ ನಿಶ್ಚಿತವಾಗಿದೆ. ನವೆಂಬರ್ 26ರಿಂದ ಜನವರಿ 19ವರೆಗೆ ಬಹುತೇಕ ಎರಡು ತಿಂಗಳ ಪ್ರವಾಸ ಇದಾಗಿರಲಿದೆ. ಈ ಸರಣಿಯಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ 3 ಏಕದಿನ, 3 ಟಿ20 ಹಾಗೂ 4 ಟೆಸ್ಟ್ ಪಂದ್ಯಗಳ ಸರಣಿಗಳಲ್ಲಿ ಮುಖಾಮುಖಿಯಾಗಲಿವೆ. ಈ ವೇಳೆ ಪಿಂಕ್ ಬಾಲ್ನಲ್ಲಿ ಒಂದು ಡೇ ನೈಟ್ ಟೆಸ್ಟ್ ಪಂದ್ಯ ಕೂಡ ನಡೆಯಲಿದೆ. ಹೊನಲು ಬೆಳಕಿನಲ್ಲಿ ಭಾರತ ಈ ಮುಂಚೆ ಟೆಸ್ಟ್ ಸರಣಿ ಆಡಿದ್ದು ಒಮ್ಮೆ ಮಾತ್ರ. ಡಿಸೆಂಬರ್ 17ರಂದು ಅಡಿಲೇಡ್ನಲ್ಲಿ ನಡೆಯುವ ಪಿಂಕ್ ಬಾಲ್ ಟೆಸ್ಟ್ ಬಗ್ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಆಸಕ್ತಿ ಗರಿಗೆದರಬಹುದು.
ಆದರೆ, ದುಬೈನಲ್ಲಿ ಐಪಿಎಲ್ನಲ್ಲಿ ನಿರತವಾಗಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಆಟಗಾರರಿಗೆ ಈ ಮಹಾ ಸರಣಿಗಳಿಗೆ ಅಣಿಗೊಳ್ಳಲು ಸಮಯಾವಕಾಶ ಕಡಿಮೆ ಸಿಗುತ್ತದೆ. ಐಪಿಎಲ್ ಟೂರ್ನಿ ಮುಗಿಯುವುದು ನವೆಂಬರ್ 10ರಂದು. ಆ ನಂತರ ಭಾರತದ ಆಟಗಾರರು ಆಸ್ಟ್ರೇಲಿಯಾಗೆ ಪ್ರಯಾಣಿಸುವ ನಿರೀಕ್ಷೆ ಇದೆ. 25-17 ಆಟಗಾರರ ತಂಡವನ್ನು ಭಾರತ ಪ್ರಕಟಿಸಲಿದೆ. ಆಸ್ಟ್ರೇಲಿಯಾದಲ್ಲಿ ಕೊರೋನಾ ನಿಯಮದಂತೆ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಬೇಕಾಗುತ್ತದೆ. ಈ ಅವಧಿಯಲ್ಲಿ ಭಾರತದ ಆಟಗಾರರು ತಾಲೀಮು ನಡೆಸುವ ಸಾಧ್ಯತೆ ಇದೆ. ಆದರೆ, ಸರಣಿಗೂ ಮುನ್ನ ಅಭ್ಯಾಸ ಪಂದ್ಯಗಳ ಬಗ್ಗೆ ಇನ್ನೂ ಮಾಹಿತಿ ಇಲ್ಲ.
ಟೆಸ್ಟ್ ಕ್ರಿಕೆಟ್ ಸರಣಿ:
1) ಡಿಸೆಂಬರ್ 17-21:
ಸ್ಥಳ: ಅಡಿಲೇಡ್ ಓವಲ್ (ಇದು ಡೇ ನೈಟ್ ಪಂದ್ಯ ಆಗಿರಲಿದೆ)
2) ಡಿಸೆಂಬರ್ 26-30
ಸ್ಥಳ: ಎಂಸಿಜಿ
3) ಜನವರಿ 7-11
ಸ್ಥಳ: ಸಿಡ್ನಿ
4) ಜನವರಿ 15-19
ಸ್ಥಳ: ಬ್ರಿಸ್ಬೇನ್
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ