ಟೀಮ್ ಇಂಡಿಯಾ ವಿರುದ್ಧದ ಸೋಲಿನ ಬೆನ್ನಲ್ಲೇ ಆಸ್ಟ್ರೇಲಿಯಾಗೆ ದಂಡ..!

Australia

Australia

ಮೊದಲ ಇನಿಂಗ್ಸ್​ನ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು ಕೇವಲ 70 ರನ್​ಗಳ ಅವಶ್ಯತೆಯಿತ್ತು. ಈ ಸಾಧಾರಣ ಗುರಿಯನ್ನು ತಲುಪುವ ಮೂಲಕ ಟೀಮ್ ಇಂಡಿಯಾ 8 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿತು.

  • Share this:

ಮೆಲ್ಬೋರ್ನ್​ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್​ನಲ್ಲಿ 195 ರನ್​ಗಳಿಗೆ ಆಲೌಟ್ ಆದರೆ, ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ ಅಜಿಂಕ್ಯ ರಹಾನೆ ಅವರ ಶತಕದ ನೆರವಿನಿಂದ 326 ರನ್​ ಕಲೆಹಾಕಿತು.


ದ್ವಿತೀಯ ಇನಿಂಗ್ಸ್​ನಲ್ಲಿ ಬೌಲಿಂಗ್ ಪರಾಕ್ರಮ ಮೆರೆದ ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು 200 ರನ್​ಗಳಿಗೆ ನಿಯಂತ್ರಿಸಿತು. ಮೊದಲ ಇನಿಂಗ್ಸ್​ನ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು ಕೇವಲ 70 ರನ್​ಗಳ ಅವಶ್ಯತೆಯಿತ್ತು. ಈ ಸಾಧಾರಣ ಗುರಿಯನ್ನು ತಲುಪುವ ಮೂಲಕ ಟೀಮ್ ಇಂಡಿಯಾ 8 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿತು. ಇದರೊಂದಿಗೆ 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿದೆ.


ಆದರೆ ಮೊದಲೇ ಸೋಲಿನ ಭೀತಿಯಲ್ಲಿದ್ದ ಆಸ್ಟ್ರೇಲಿಯಾ ಈ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿ ದಂಡಕ್ಕೆ ಗುರಿಯಾಗಿದೆ. ಸ್ಲೋ ಓವರ್​ ರೇಟ್​ಗಾಗಿ ಟಿಮ್ ಪೈನ್ ಬಳಗಕ್ಕೆ ಐಸಿಸಿ ಪಂದ್ಯದ ಸಂಭಾವನೆಯ ಶೇ. 40 ದಂಡ ವಿಧಿಸಿದೆ. ಐಸಿಸಿ ಟೆಸ್ಟ್ ನಿಯಮದ ಪ್ರಕಾರ ಪ್ರತಿ ಗಂಟೆಗೆ ಕನಿಷ್ಠ 14.2 ಓವರ್ ಬೌಲಿಂಗ್ ಮಾಡಬೇಕು. ಇದು ತಪ್ಪಿದರೆ ಹೆಚ್ಚುವರಿ ಸಮಯಕ್ಕನುಸಾರ ದಂಡ ವಿಧಿಸಲಾಗುತ್ತದೆ.




ಅದರಂತೆ ಆಸ್ಟ್ರೇಲಿಯಾ ತಂಡಕ್ಕೆ ಸಂಭಾವನೆಯ ಶೇ.40 ರಷ್ಟು ದಂಡ ವಿಧಿಸಲಾಗಿದ್ದು, ಅದರೊಂದಿಗೆ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಗಳಲ್ಲಿ 4 ಪಾಯಿಂಟ್​ಗಳನ್ನು ಕಡಿತಗೊಳಿಸಲಾಗಿದೆ. ಒಟ್ಟಿನಲ್ಲಿ ಸೋಲಿನ ನಿರಾಸೆಯಲ್ಲಿದ್ದ ಆಸೀಸ್​ ಪಡೆಗೆ ಐಸಿಸಿ ದಂಡದ ಬರೆ ಜೊತೆಗೆ ಪಾಯಿಂಟ್ ಕಡಿತ ಶಾಕ್ ನೀಡಿದೆ.

First published: