Shane Warne Death: ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಹೃದಯಾಘಾತದಿಂದ ನಿಧನ

ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ, ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರು 52 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಶೇನ್ ವಾರ್ನ್

ಶೇನ್ ವಾರ್ನ್

  • Share this:
ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ (Shane Warne) ಹೃದಯಾಘಾತದಿಂದ (Heart Attack ) ನಿಧನರಾಗಿರುವುದು ಕ್ರಿಕೆಟ್​​ ಲೋಕಕ್ಕೆ ಆಘಾತ ತಂದಿದೆ. ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ, ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರು 52 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಥೈಲ್ಯಾಂಡ್‌ನ ಕೊಹ್ ಸಮುಯಿಯಲ್ಲಿ ವಾರ್ನ್​​​ ನಿಧನರಾಗಿದ್ದಾರೆ ಎಂದು ಅವರ ಮ್ಯಾನೇಜರ್​​ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಶೇನ್​ ಅವರು ತಮ್ಮ ವಿಲ್ಲಾದಲ್ಲಿದಾಗ ಹೃದಯಾಘಾತವಾಗಿದೆ, ಕೂಡಲೇ ವೈದ್ಯಕೀಯ ನೆರವು ನೀಡಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ತಮ್ಮ ವೃತ್ತಿಜೀವನದಲ್ಲಿ 145 ಟೆಸ್ಟ್ ಪಂದ್ಯಗಳನ್ನು ಆಡಿರುವ ಶೇನ್ ವಾರ್ನ್ 708 ವಿಕೆಟ್ ಪಡೆದಿದ್ದಾರೆ. 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್ ಪಡೆದಿದ್ದಾರೆ. ಹಲವು ದಾಖಲೆಗಳು ಶೇನ್ ವಾರ್ನ್ ಹೆಸರಿನಲ್ಲಿವೆ. ವಾರ್ನ್​​ ಹಠಾತ್​ ನಿಧನಕ್ಕೆ ಭಾರತೀಯ ಕ್ರಿಕೆಟ್​​ ದಿಗ್ಗಜರು ಸಂತಾಪ ಸೂಚಿಸಿದ್ದಾರೆ.

ಆಸ್ಟ್ರೇಲಿಯನ್ ಕ್ರಿಕೆಟ್‌  ಲೋಕಕ್ಕೆ ಕಳೆದ 24 ಗಂಟೆಗಳಲ್ಲಿ ಎರಡನೇ ಆಘಾತ ಇದಾಗಿದೆ. ಮತ್ತೊಬ್ಬ ಆಸ್ಟ್ರೇಲಿಯನ್​ ಕ್ರಿಕೆಟ್​​ ದಿಗ್ಗಜ   ರಾಡ್ ಮಾರ್ಷ್ ಕೂಡ ಶುಕ್ರವಾರ ನಿಧನರಾದರು. ಒಂದು ವಾರದ ಹಿಂದೆ ಮಾರ್ಷ್​ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೊನೆಯುಸಿರೆಳೆದರು. ಮಾರ್ಷ್​ ಸಾವಿಗೆ ಇಂದು ಬೆಳಗ್ಗೆಯಷ್ಟೇ ಶೇನ್​​ ಸಂತಾಪ ಸೂಚಿಸಿ ಟ್ವೀಟ್​ ಮಾಡಿದ್ದರು. ಅದೇ ಶೇನ್​ ಅವರ ಕೊನೆ ಟ್ವೀಟ್​ ಆಗಿದ್ದು, ಈಗ ಅವರೂ ಸಾವಿನ ಮನೆ ಸೇರಿದ್ದಾರೆ.

ಇತಿಹಾಸದಲ್ಲಿ ವಾರ್ನ್ ಇತರ ಬೌಲರ್‌ಗಳಿಗಿಂತ ಹೆಚ್ಚು ಆಶಸ್ ವಿಕೆಟ್‌ಗಳನ್ನು ಪಡೆದಿದ್ದಾರೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್​ ಅಖ್ತರ್​ ಅವರು ಶೇನ್​ ಸಾವಿಗೆ ಆಘಾತ ವ್ಯಕ್ತಪಡಿಸಿ ಟ್ವೀಟ್​ ಮಾಡಿದ್ದಾರೆ.
Published by:Kavya V
First published: