Aaron Finch: ವಿರಾಟ್ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಏಕದಿನ ಆಟಗಾರ..!

Virat Kohli: ಇದಕ್ಕೆ ಕಾರಣವನ್ನು ನೀಡಿರುವ ಆಸೀಸ್ ನಾಯಕ, ನೀವು ಕೊಹ್ಲಿ ಅವರ ದಾಖಲೆಯತ್ತ ಒಮ್ಮೆ ಕಣ್ಣು ಹಾಯಿಸಿ. ಅದು ಎರಡನೇ ದರ್ಜೆಯದಲ್ಲ. ಇದು ನಿಜಕ್ಕೂ ಅತ್ಯಂತ ಗಮನಾರ್ಹ ಸಂಗತಿ.

 Aaron Finch, Virat Kohli

Aaron Finch, Virat Kohli

 • Share this:
  ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ಸರಣಿ ಆರಂಭವಾಗಲು ಗಂಟೆಗಳು ಮಾತ್ರ ಉಳಿದಿವೆ. ಮೊದಲ ಏಕದಿನ ಪಂದ್ಯ ಶುಕ್ರವಾರ ನಡೆಯಲಿದ್ದು, ಈ ಪಂದ್ಯದಲ್ಲಿ ಜಯಗಳಿಸುವ ಮೂಲಕ ಟೂರ್ನಿಯನ್ನು ಭರ್ಜರಿಯಾಗಿ ಆರಂಭಿಸುವ ಯೋಜನೆಯಲ್ಲಿದೆ ಕೊಹ್ಲಿ ಪಡೆ. ಅತ್ತ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಆಸ್ಟ್ರೇಲಿಯಾ ತಂಡವನ್ನು ತವರಿನಲ್ಲಿ ಸೋಲಿಸುವುದು ಕೂಡ ಅಷ್ಟೊಂದು ಸುಲಭವಲ್ಲ. ಆದರೆ ಐಪಿಎಲ್​ನಲ್ಲಿ ಆಡಿದ ಬಹುತೇಕ ಆಟಗಾರರು ಆಸೀಸ್​ ತಂಡದಲ್ಲಿದ್ದು, ಅವರ ತಂತ್ರಗಳಿಗೆ ಪ್ರತಿತಂತ್ರ ಹೆಣೆಯಲು ಇದು ನೆರವಾಗಲಿದೆ.

  ಇನ್ನು ಪಂದ್ಯ ಆರಂಭಕ್ಕೆ ದಿನ ಮಾತ್ರ ಉಳಿದಿರುವಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ, ಆಸ್ಟ್ರೇಲಿಯಾ ಟೀಮ್​ನ ನಾಯಕ ಆರೋನ್ ಫಿಂಚ್ ಟೀಮ್ ಇಂಡಿಯಾ ಕಪ್ತಾನನ್ನು ಹಾಡಿಹೊಗಳುವ ಗಮನ ಸೆಳೆದಿದ್ದಾರೆ. ವಿರಾಟ್ ಕೊಹ್ಲಿ ಅವರು ಬಹುಶಃ ಏಕದಿನ ಕ್ರಿಕೆಟ್‌ನ ಸರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಫಿಂಚ್ ತಿಳಿಸಿದ್ದಾರೆ.

  ಇದಕ್ಕೆ ಕಾರಣವನ್ನು ನೀಡಿರುವ ಆಸೀಸ್ ನಾಯಕ, ನೀವು ಕೊಹ್ಲಿ ಅವರ ದಾಖಲೆಯತ್ತ ಒಮ್ಮೆ ಕಣ್ಣು ಹಾಯಿಸಿ. ಅದು ಎರಡನೇ ದರ್ಜೆಯದಲ್ಲ. ಇದು ನಿಜಕ್ಕೂ ಅತ್ಯಂತ ಗಮನಾರ್ಹ ಸಂಗತಿ. ಹೀಗಾಗಿ ನಮ್ಮ ವಿರುದ್ಧದ ಸರಣಿಯಲ್ಲಿ ಆತನನ್ನು ನಿರಂತರವಾಗಿ ಔಟ್ ಮಾಡಲು ಪ್ರಯತ್ನಿಸುತ್ತಲೇ ಇರಬೇಕು ಎಂಬುದು ನಮ್ಮ ತಲೆಯಲ್ಲಿರಬೇಕು ಫಿಂಚ್ ಹೇಳಿದ್ದಾರೆ.

  ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್​ನಲ್ಲಿ ಹೆಚ್ಚಿನ ನೂನ್ಯತೆಗಳಿಲ್ಲ. ಹೀಗಾಗಿ ನೀವು ಆತನನ್ನು ಔಟ್ ಮಾಡುವುದನ್ನು ಬಿಟ್ಟು, ಇತರರತ್ತ ಗಮನ ಹರಿಸಿದರೆ ಕೊಹ್ಲಿಯ ವಿಕೆಟ್ ಪಡೆಯುವ ಕೌಶಲ್ಯ ಕಳೆದುಕೊಳ್ಳುತ್ತೀರಿ. ಈ ಎಲ್ಲಾ ಕಾರಣದಿಂದಲೇ ಆತ ಸಾರ್ವಕಾಲಿಕ ಶ್ರೇಷ್ಠ ಏಕದಿನ ಆಟಗಾರ ಎಂದೇಳುವೆ ಎಂದು ಆರೋನ್ ಫಿಂಚ್ ಹೇಳಿದ್ದಾರೆ.

  ಇದನ್ನೂ ಓದಿ: ರಾಹುಲ್‌, ಪಂತ್, ಸಂಜು, ಸಾಹ ಇವರಲ್ಲಿ ಇಬ್ಬರು ಬೆಸ್ಟ್‌ ಕೀಪರ್‌ಗಳನ್ನು ಹೆಸರಿಸಿದ ಗಂಗೂಲಿ..!
  Published by:zahir
  First published: