news18-kannada Updated:December 15, 2020, 6:33 PM IST
Harbhajan Singh
ಡಿಸೆಂಬರ್ 17 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಶುರುವಾಗಲಿದೆ. ಅದರಲ್ಲೂ ಮೊದಲ ಪಂದ್ಯವು ಹೊನಲು ಬೆಳಕಿನಲ್ಲಿ ಪಿಂಕ್ ಬಾಲ್ನಲ್ಲಿ ಆಡಲಿರುವುದು ವಿಶೇಷ. ಹೀಗಾಗಿಯೇ ಆಸ್ಟ್ರೇಲಿಯಾ ಸ್ಪಿನ್ನರ್ಗಳ ಬಗ್ಗೆ, ಅದರಲ್ಲೂ ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಬಗ್ಗೆ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಜಾಗರೂಕರಾಗಿರಬೇಕು ಎಂದು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಎಚ್ಚರಿಸಿದ್ದಾರೆ.
ನಾಥನ್ ಲಿಯಾನ್ ಅವರ ತಮ್ಮ ಸ್ಪಿನ್ ಮೋಡಿ ಮೂಲಕ ಎದುರಾಳಿಗಳನ್ನು ಕಟ್ಟಿಹಾಕಬಲ್ಲರು. ಆಸ್ಟ್ರೇಲಿಯಾದಲ್ಲಿ ಆಫ್ ಸ್ಪಿನ್ನರ್ ಬೌಲಿಂಗ್ ಮಾಡುವುದು ಕಷ್ಟ. ಆದರೆ ಲಿಯಾನ್ ಚೆಂಡನ್ನು ಪುಟಿದೇಳಿಸಿ ಬೌನ್ಸ್ ಮೂಲಕ ವಿಕೆಟ್ ಪಡೆಯಬಲ್ಲರು. ಹೀಗಾಗಿ ಅವರ ಬೌಲಿಂಗ್ನಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಎಚ್ಚರಿಕೆಯಿಂದ ಆಡಬೇಕು ಎಂದು ಭಜ್ಜಿ ತಿಳಿಸಿದ್ದಾರೆ.
ನನಗೆ ಲಿಯಾನ್ ಬೌಲಿಂಗ್ ಮಾಡುವ ರೀತಿ ಇಷ್ಟ. ಅವರು ಫ್ಲೈಟ್ಸ್, ಸ್ಪಿನ್ ಹಾಗೂ ಬೌನ್ಸ್ ಮೂಲಕ ವಿಕೆಟ್ ಪಡೆಯುತ್ತಾರೆ. ಅದರಲ್ಲೂ ತವರಿನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿ ಲಿಯಾನ್ಗೆ ಅನುಕೂಲ. ಅವರು ಆಡಿದ ಬೆಳೆದ ಪಿಚ್ಗಳು. ಹೀಗಾಗಿ ಬೌನ್ಸ್ ಮತ್ತು ಸ್ಪಿನ್ಗಳ ಮೂಲಕ ಹೆಚ್ಚು ಪರಿಣಾಮಕಾರಿಯಾಗಲಿದ್ದಾರೆ ಎಂಬುದು ನನ್ನ ಅನಿಸಿಕೆ ಎಂದು ಹರ್ಭಜನ್ ಸಿಂಗ್ ಹೇಳಿದರು.
ಇನ್ನು ಅಂಕಿ ಅಂಶಗಳನ್ನು ಗಮನಿಸಿದರೂ 33ರ ಹರೆಯದ ನಾಥನ್ ಲಿಯಾನ್ ಭಾರತದ ವಿರುದ್ಧ ಉತ್ತಮ ಸಾಧನೆ ಮಾಡಿದ್ದಾರೆ. ಟೀಮ್ ಇಂಡಿಯಾ ವಿರುದ್ಧ ಆಡಿರುವ 18 ಟೆಸ್ಟ್ ಪಂದ್ಯಗಳಿಂದ 85 ವಿಕೆಟ್ ಕಬಳಿಸಿದ್ದಾರೆ. ಒಟ್ಟಾರೆ 96 ಟೆಸ್ಟ್ನಿಂದ 390 ವಿಕೆಟ್ ಸಾಧನೆ ಮಾಡಿದ್ದಾರೆ. ಹೀಗಾಗಿ ಲಿಯಾನ್ಗೆ ಈ ಟೆಸ್ಟ್ ಸರಣಿ ಹೊಸ ದಾಖಲೆ ಬರೆಯಲು ಸಿಕ್ಕ ವೇದಿಕೆ.
ಅಚ್ಚರಿಯ ಆಯ್ಕೆ: ಆಕಾಶ್ ಚೋಪ್ರಾ ಹೆಸರಿಸಿದ ದಶಕದ ಟಿ20 ತಂಡದಲ್ಲಿ ಯಾರಿಗೆಲ್ಲಾ ಸ್ಥಾನ?
ಏಕೆಂದರೆ 4 ಟೆಸ್ಟ್ ಪಂದ್ಯಗಳಿಂದ 10 ವಿಕೆಟ್ ಪಡೆದರೆ ಟೆಸ್ಟ್ ಕ್ರಿಕೆಟ್ನಲ್ಲಿ 400 ವಿಕೆಟ್ ಪಡೆದ 4ನೇ ಸ್ಪಿನ್ನರ್ ಎಂಬ ದಾಖಲೆ ಬರೆಯಲಿದ್ದಾರೆ. ಇದಕ್ಕೂ ಮುನ್ನ ಟೆಸ್ಟ್ನಲ್ಲಿ ಮುತ್ತಯ್ಯ ಮುರಳೀಧರನ್, ಅನಿಲ್ ಕುಂಬ್ಳೆ ಮತ್ತು ಹರ್ಭಜನ್ 400 ಕ್ಕೂ ಅಧಿಕ ವಿಕೆಟ್ ಪಡೆದ ಸ್ಪಿನ್ನರ್ಗಳು ಎನಿಸಿಕೊಂಡಿದ್ದಾರೆ.
Published by:
zahir
First published:
December 15, 2020, 6:33 PM IST