AUS vs IND: ಅಂತಿಮ ಟೆಸ್ಟ್ ಪಂದ್ಯಕ್ಕೆ ತೆರಳಲು ಟೀಮ್ ಇಂಡಿಯಾ ಹಿಂದೇಟು..!

Australia vs India: ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಲಾ ಒಂದೊಂದು ಪಂದ್ಯ ಗೆದ್ದಿದ್ದು, ಜ.7 ರಿಂದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೂರನೇ ಪಂದ್ಯ ಆರಂಭವಾಗಬೇಕಿದೆ.

Australia vs India

Australia vs India

 • Share this:
   ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯಕ್ಕೂ ಮುನ್ನವೇ ನಾಲ್ಕನೇ ಟೆಸ್ಟ್ ಕುರಿತಾದ ಚರ್ಚೆಗಳು ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಅಂತಿಮ ಟೆಸ್ಟ್ ಪಂದ್ಯ ನಡೆಯುತ್ತಿರುವುದು ಬಿಸ್ಬೇನ್ ಮೈದಾನದಲ್ಲಿ ಎಂಬುದು. ಹೌದು, ಬ್ರಿಸ್ಬೇನ್​ ಕೊರೋನಾ ನಿಯಮದ ಪ್ರಕಾರ 14 ದಿನಗಳು ಕ್ವಾರಂಟೈನ್​ಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಬಿಸ್ಬೇನ್​ಗೆ ತೆರಳಲು ಟೀಮ್ ಇಂಡಿಯಾ ಹಿಂದೇಟು ಹಾಕುತ್ತಿದೆ ಎಂದು ವರದಿಯಾಗಿದೆ.

  ಬ್ರಿಸ್ಬೇನ್ ಆಸ್ಟ್ರೇಲಿಯಾದ ಕ್ವೀನ್ಸ್​ಲ್ಯಾಂಡ್ ರಾಜ್ಯದಲ್ಲಿದೆ. ಅಲ್ಲಿನ ನಿಯಮದ ಪ್ರಕಾರ, ಎರಡೂ ತಂಡಗಳು 14 ದಿನಗಳ ಕಾಲ ಕ್ವಾರಂಟೈನ್​ಗೆ ಒಳಗಾಗಬೇಕು. ಆದರೆ 3ನೇ ಟೆಸ್ಟ್ ಪಂದ್ಯದ ಬಳಿಕ ಕ್ವಾರಂಟೈನ್​ನಲ್ಲಿರಲು ಅಷ್ಟೊಂದು ಸಮಯವಕಾಶ ಕೂಡ ಇಲ್ಲ. ಏಕೆಂದರೆ ಜನವರಿ 7 ರಿಂದ ಮೂರನೇ ಟೆಸ್ಟ್ ಪಂದ್ಯ ಆರಂಭವಾದರೆ, 4ನೇ ಟೆಸ್ಟ್ ಪಂದ್ಯವು ಜನವರಿ 15 ರಿಂದ ಶುರುವಾಗಲಿದೆ. ಆದರೆ ಅಲ್ಲಿನ ಸರ್ಕಾರದ ನಿಯಮದ ಪ್ರಕಾರ ಕ್ವಾರಂಟೈನ್ ಕಡ್ಡಾಯವಾಗಿದೆ.

  ಇತ್ತ ಐಪಿಎಲ್ ಮುಗಿಸಿ ಟೀಮ್ ಇಂಡಿಯಾ ಆಟಗಾರರು ನೇರವಾಗಿ ಆಸ್ಟ್ರೇಲಿಯಾ ತೆರಳಿದ್ದರು. ಅಲ್ಲದೆ ಸಿಡ್ನಿಯಲ್ಲಿ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿದ್ದರು. ಇದೀಗ ಮತ್ತೊಮ್ಮೆ ಎರಡು ವಾರಗಳ ಕಾಲ ಕ್ವಾರಂಟೈನ್​ನಲ್ಲಿರಲು ಭಾರತೀಯ ಆಟಗಾರರು ಬಯಸುತ್ತಿಲ್ಲ.

  ಈಗಾಗಲೇ ಕಠಿಣ ಬಯೋಬಬಲ್​ನಲ್ಲಿ ತಿಂಗಳುಗಳ ಕಾಲ ಕಳೆದಿದ್ದರಿಂದ ಆಟಗಾರರು ಸಹ ಹೈರಾಣರಾಗಿದ್ದಾರೆ. ಹೀಗಾಗಿ ಬ್ರಿಸ್ಬೇನ್ ಸರ್ಕಾರದ ನಿಯಮದಂತೆ 4ನೇ ಪಂದ್ಯವನ್ನಾಡಲು ಟೀಮ್ ಇಂಡಿಯಾ ಆಟಗಾರರು ಸಿದ್ಧರಿಲ್ಲ ಎನ್ನಲಾಗಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಅಂತಿಮವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.
  Published by:zahir
  First published: