AUS vs IND: ಅಂತಿಮ ಟೆಸ್ಟ್​ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಆರಂಭಿಕ ಆಟಗಾರನ ಬದಲಾವಣೆ..!

ಗುರುವಾರ 22ರ ಹರೆಯದ ವಿಲ್ ಪುಕೊವ್​ಸ್ಕಿ ಅಭ್ಯಾಸ ನಡೆಸಲು ಪ್ರಯತ್ನಿಸಿದರೂ, ಅವರಿಗೆ ಬ್ಯಾಟ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಅವರಿಗೆ ಫಿಟ್​ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸಲು ವೈದ್ಯರು ಸೂಚಿಸಿದ್ದಾರೆ.

Australia

Australia

 • Share this:
  ಬಾರ್ಡರ್-ಗವಾಸ್ಕರ್ ಟೆಸ್ಟ್​ ಸರಣಿಯ ಅಂತಿಮ ಪಂದ್ಯಕ್ಕಾಗಿ ಆಸ್ಟ್ರೇಲಿಯಾವನ್ನು ಪ್ರಕಟಿಸಲಾಗಿದೆ. ಸಿಡ್ನಿ ಮೈದಾನದಲ್ಲಿ ಕಣಕ್ಕಿಳಿದ ಬಹುತೇಕ ಆಟಗಾರ ಬ್ರಿಸ್ಬೇನ್ ಗಬ್ಬಾ ಗ್ರೌಂಡ್​ನಲ್ಲೂ ಆಡಲಿದ್ದಾರೆ. ಆದರೆ ಆರಂಭಿಕ ಆಟಗಾರನಾಗಿ ಮಾರ್ಕಸ್ ಹ್ಯಾರಿಸ್ ಈ ಬಾರಿ ಸ್ಥಾನ ಪಡೆದಿದ್ದಾರೆ. ಸಿಡ್ನಿ ಸಮರದಲ್ಲಿ ಆರಂಭಿಕನಾಗಿ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ್ದ ವಿಲ್​ ಪುಕೊವ್​ಸ್ಕಿ ಅಂತಿಮ ಟೆಸ್ಟ್​ನಿಂದ ಹೊರಗುಳಿದಿದ್ದಾರೆ. 3ನೇ ಟೆಸ್ಟ್​ ಕ್ಷೇತ್ರರಕ್ಷಣೆ ವೇಳೆ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದ ಪುಕೊವ್​​ಸ್ಕಿ ಇನ್ನೂ ಕೂಡ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರ ಸ್ಥಾನದಲ್ಲಿ ಮಾರ್ಕಸ್​ ಅವರಿಗೆ ಅವಕಾಶ ನೀಡಲಾಗಿದೆ.

  ಮಾರ್ಕಸ್ ಹ್ಯಾರಿಸ್ 2019 ರಲ್ಲಿ ಇಂಗ್ಲೆಂಡ್ ವಿರುದ್ಧ ಆ್ಯಶಸ್ ಟೆಸ್ಟ್​ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದರು. 6 ಇನಿಂಗ್ಸ್​ನಲ್ಲಿ ಬ್ಯಾಟ್ ಬೀಸಿರುವ ಅವರು 58 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಇದೀಗ ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಹ್ಯಾರಿಸ್ ಡೇವಿಡ್ ವಾರ್ನರ್ ಜೊತೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

  ಇನ್ನು ಗುರುವಾರ 22ರ ಹರೆಯದ ವಿಲ್ ಪುಕೊವ್​ಸ್ಕಿ ಅಭ್ಯಾಸ ನಡೆಸಲು ಪ್ರಯತ್ನಿಸಿದರೂ, ಅವರಿಗೆ ಬ್ಯಾಟ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಅವರಿಗೆ ಫಿಟ್​ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸಲು ವೈದ್ಯರು ಸೂಚಿಸಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್ ತಿಳಿಸಿದ್ದಾರೆ.

  ಆಸ್ಟ್ರೇಲಿಯಾ ತಂಡ ಇಂತಿದೆ.

  1. ಡೇವಿಡ್‌ ವಾರ್ನರ್‌ (ಆರಂಭಿಕ)
  2. ಮಾರ್ಕಸ್‌ ಹ್ಯಾರಿಸ್ (ಆರಂಭಿಕ)
  3. ಮಾರ್ನಸ್‌ ಲಾಬುಶೇನ್ (3ನೇ ಕ್ರಮಾಂಕ)
  4. ಸ್ಟೀವ್ ಸ್ಮಿತ್ (4ನೇ ಕ್ರಮಾಂಕ)
  5. ಮ್ಯಾಥ್ಯೂ ವೇಡ್‌ (5ನೇ ಕ್ರಮಾಂಕ)
  6. ಕ್ಯಾಮರೊನ್ ಗ್ರೀನ್ (ಆಲ್‌ರೌಂಡರ್‌)
  7. ಟಿಮ್ ಪೈನ್ (ವಿಕೆಟ್‌ಕೀಪರ್‌)
  8. ಪ್ಯಾಟ್‌ ಕಮಿನ್ಸ್‌ (ಬಲಗೈ ವೇಗಿ)
  9. ಮಿಚೆಲ್‌ ಸ್ಟಾರ್ಕ್‌ (ಎಡಗೈ ವೇಗಿ)
  10. ಜೋಶ್‌ ಹೇಝಲ್‌ವುಡ್‌ (ಬಲಗೈ ವೇಗಿ)
  11. ನಾಥನ್ ಲಿಯಾನ್ (ಆಫ್‌ ಸ್ಪಿನ್ನರ್‌)

  ಇನ್ನು ಟೀಮ್ ಇಂಡಿಯಾದ ಬಹುತೇಕ ಆಟಗಾರರು ಗಾಯದಿಂದ ಬಳಲುತ್ತಿದ್ದು, ಹೀಗಾಗಿ ತಂಡದ ಅಂತಿಮ ಪಟ್ಟಿಯನ್ನು ಶುಕ್ರವಾರ ಬೆಳಿಗ್ಗೆ ಪ್ರಕಟಿಸಲು ನಿರ್ಧರಿಸಲಾಗಿದೆ.
  Published by:zahir
  First published: