HOME » NEWS » Sports » CRICKET ASSAM GOVERNMENT NOMINATES SPRINTER HIMA DAS NOMINATED FOR KHEL RATNA AWARD VB

Hima Das: ಖೇಲ್ ರತ್ನ ಪ್ರಶಸ್ತಿಗೆ ಚಿನ್ನದ ಹುಡುಗಿ ಹಿಮಾ ದಾಸ್ ಹೆಸರು ಶಿಫಾರಸು

ಅಸ್ಸಾಂನ ಧಿಂಗ ಗ್ರಾಮದಲ್ಲಿರುವ 20ರ ಹರೆಯದ ಹಿಮಾ ದಾಸ್, ಖೇಲ್ ರತ್ನಕ್ಕೆ ಶಿಫಾರಸಾದ ಅತೀ ಕಿರಿಯ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದಾರೆ.

news18-kannada
Updated:June 16, 2020, 11:45 AM IST
Hima Das: ಖೇಲ್ ರತ್ನ ಪ್ರಶಸ್ತಿಗೆ ಚಿನ್ನದ ಹುಡುಗಿ ಹಿಮಾ ದಾಸ್ ಹೆಸರು ಶಿಫಾರಸು
ಹಿಮಾ ದಾಸ್
  • Share this:
ದೇಶದ ಅಗ್ರಮಾನ್ಯ ಓಟಗಾರ್ತಿಯರಲ್ಲಿ ಒಬ್ಬರಾಗಿರುವ ಹಿಮಾ ದಾಸ್ ಹೆಸರು ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಶಿಫಾರಸಾಗಿದೆ. ಭರವಸೆಯ ಓಟಗಾರ್ತಿ ಹಿಮಾ ಹೆಸರನ್ನು ಅಸ್ಸಾಂ ಸರ್ಕಾರ 'ಖೇಲ್ ರತ್ನ'ಕ್ಕೆ ನಾಮ ನಿರ್ದೇಶಿಸಿದೆ.

ಇತ್ತೀಚೆಗಷ್ಟೆ ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಲ್​ 2020ರ ‘ಖೇಲ್​ ರತ್ನ ಪ್ರಶಸ್ತಿ‘ಗೆ ನಾಮ ನಿರ್ದೇಶನಗೊಂಡಿದ್ದರು. ಇವರ ಜೊತೆಗೆ ವಂದನ ಕಟಾರಿಯಾ, ಮೊನಿಕಾ ಮತ್ತು ಪರುಷ ಹಾಕಿ ತಂಡದ ಆಟಗಾರ ಹರ್ಮನ್​​ಪ್ರೀತ್​ ಸಿಂಗ್​ ‘ಅರ್ಜುನ ಪ್ರಶಸ್ತಿ‘ಗೆ ಆಯ್ಕೆಯಾಗಿದ್ದರು.

ಕೊಹ್ಲಿ, ರೋಹಿತ್​​ ಹಿಂದಿಕ್ಕಿ ಅತ್ಯುತ್ತಮ ಬ್ಯಾಟ್ಸ್​ಮನ್​ ಎನಿಸಿಕೊಂಡ ಕನ್ನಡಿಗ ಕೆ. ಎಲ್ ರಾಹುಲ್

ಸದ್ಯ ಅಸ್ಸಾಂನ ಧಿಂಗ ಗ್ರಾಮದಲ್ಲಿರುವ 20ರ ಹರೆಯದ ಹಿಮಾ ದಾಸ್, ಖೇಲ್ ರತ್ನಕ್ಕೆ ಶಿಫಾರಸಾದ ಅತೀ ಕಿರಿಯ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದಾರೆ. ಅಸ್ಸಾ ಕ್ರೀಡಾ ಕಾರ್ಯದರ್ಶಿ ದುಲಾಲ್ ಚಂದ್ರ ದಾಸ್ ಅವರು ಜೂನ್ 5ರಂದು ಕ್ರೀಡಾ ಸಚಿವಾಲಯಕ್ಕೆ ಶಿಫಾರಸು ಪತ್ರ ರವಾನಿಸಿದ್ದಾರೆ.

2018ರಲ್ಲಿ ಫಿನ್ಲೆಂಡ್​ನ ತಂಪೆರೆಯಲ್ಲಿ ನಡೆದ 20 ವರ್ಷದೊಳಗಿನವರ ವಿಶ್ವ ಚಾಂಪಿಯನ್ ಷಿಪ್​ನಲ್ಲಿ ಸ್ವರ್ಣ ಪದಕ ಜಯಿಸಿದ ಭಾರತದ ಮೊದಲ ಟ್ರ್ಯಾಕ್ ಅಥ್ಲೀಟ್ ಎಂಬ ಹಿರಿಮೆಗೆ ಹಿಮಾ ಪಾತ್ರರಾಗಿದ್ದರು. ಅಲ್ಲದೆ ಅದೇ ವರ್ಷ ಅರ್ಜುನ ಗೌರವಕ್ಕೆ ಪಾತ್ರರಾಗಿದ್ದರು.

ಕಿಂಗ್ ಕೊಹ್ಲಿಯನ್ನು ಮೀರಿಸಿದ್ದಾರಂತೆ ಈ ಬ್ಯಾಟ್ಸ್​ಮನ್..!
ಹಿಮಾ ದಾಸ್ ಅಲ್ಲದೆ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ, ರಸ್ಲರ್ ವಿನೇಶ್ ಫೋಗಟ್, ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರ, ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಮತ್ತು ಕ್ರಿಕೆಟಿಗ ರೋಹಿತ್ ಶರ್ಮಾ ಹೆಸರುಗಳು ಈ ವರ್ಷ ಖೇಲ್ ರತ್ನಕ್ಕೆ ಶಿಫಾರಸಾಗಿವೆ.
First published: June 16, 2020, 11:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading